ಗ್ರೀನ್ ಚೊಚ್ಚಲ ಶತಕ : ಬೃಹತ್ ಮೊತ್ತದತ್ತ ಆಸ್ಟ್ರೇಲಿಯಾ

Social Share

ಅಹಮದಾಬಾದ್, ಮಾ.10- ಭಾರತ ವಿರುದ್ಧ ನಡೆಯುತ್ತಿರುವ ಅಂತಿಮ ಹಾಗೂ 4ನೇ ಟೆಸ್ಟ್ ಪಂದ್ಯದಲ್ಲಿ ಸಿಡಿಲಿಬ್ಬರದ ಬ್ಯಾಟಿಂಗ್ ನಡೆಸಿರುವ ಯುವ ಆಟಗಾರ ಕ್ಯಾಮರೂನ್ ಗ್ರೀನ್ (111* ರನ್, 18 ಬೌಂಡರಿ) ಚೊಚ್ಚಲ ಶತಕ ಸಿಡಿಸಿ ವಿಜೃಂಭಿಸಿದ್ದಾರೆ.

ಪ್ರತಿಷ್ಠಿತ ಬಾರ್ಡರ್- ಗವಾಸ್ಕರ್ ಟೆಸ್ಟ್ ಸರಣಿಯ ಅಂತಿಮ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡುವ ನಿರ್ಣಯ ಕೈಗೊಂಡ ಸ್ಟೀವನ್ ಸ್ಮಿತ್ ಪಡೆ ಮೊದಲ ದಿನದಾಟದಲ್ಲೇ ಟೀಮ್ ಇಂಡಿಯಾ ಬೌಲರ್‍ಗಳ ಎದುರು ಪ್ರಾಬಲ್ಯ ಮೆರೆದು ದಿನದಾಟದ ಅಂತ್ಯಕ್ಕೆ 4 ವಿಕೆಟ್ ಕಳೆದುಕೊಂಡು 255 ರನ್ ಗಳಿಸಿತ್ತು.

ನಾಳೆ ಕಾಂಗ್ರೆಸ್‍ನಿಂದ ಗ್ಯಾರಂಟಿ ಕಾರ್ಡ್ ಹಂಚಿಕೆ ಅಭಿಯಾನ

ಗ್ರೀನ್- ಖವಾಜಾ ಅರ್ಭಟ:
ಎರಡನೇ ದಿನದಾಟ ಆರಂಭಿಸಿದ ಆಸೀಸ್ ಆರಂಭಿಕ ಆಟಗಾರ ಉಸ್ಮಾನ್ ಖವಾಜಾ (104 * ರನ್) ಹಾಗೂ ಯುವ ಬ್ಯಾಟರ್ ಕ್ಯಾಮರೂನ್ ಗ್ರೀನ್ ( 49* ರನ್) ಆರಂಭದಿಂದಲೂ ಭಾರತ ತಂಡದ ಬೌಲರ್‍ಗಳ ಮೇಲೆ ಸವಾರಿ ಮಾಡಿ ಭೋಜನ ವಿರಾಮದ ವೇಳೆಗೆ ತಂಡದ ಮೊತ್ತವನ್ನು 347 ರನ್‍ಗಳ ಗಡಿ ಮುಟ್ಟಿಸಿದರು.

ಗ್ರೀನ್ ಶತಕ:
ಭೋಜನ ವಿರಾಮದ ನಂತರವೂ ಆಕ್ರಮಣಕಾರಿ ಬ್ಯಾಟಿಂಗ್ ನಡೆಸಿದ ಗ್ರೀನ್, 143 ಎಸೆತಗಳಲ್ಲೇ 16 ಬೌಂಡರಿ ಸಿಡಿಸಿ ಟೆಸ್ಟ್‍ನಲ್ಲಿ ತಮ್ಮ ಚೊಚ್ಚಲ ಶತಕದ ಸಂಭ್ರಮ ಕಂಡರು.

BIG NEWS : ಬಿಜೆಪಿ ಸೇರಲ್ಲ, ಬೆಂಬಲಿಸುತ್ತೇನೆ ಅಷ್ಟೇ – ಸುಮಲತಾ ಅಂಬರೀಷ್

ಅಶ್ವಿನ್ ಮಿಂಚು:
5ನೇ ವಿಕೆಟ್‍ಗೆ 208 ರನ್‍ಗಳ ಜೊತೆಯಾಟ ನೀಡಿ ಅಪಾಯಕಾರಿಯಾಗಿದ್ದ ಗ್ರೀನ್ (114 ರನ್) ಆರ್.ಅಶ್ವಿನ್ ಬೌಲಿಂಗ್‍ನಲ್ಲಿ ದೊಡ್ಡ ಹೊಡೆತಕ್ಕೆ ಕೈ ಹಾಕಿ ವಿಕೆಟ್ ಕೀಪರ್ ಶ್ರೀಕರ್ ಭರತ್‍ಗೆ ಕ್ಯಾಚ್ ನೀಡಿ ಮೈದಾನ ತೊರೆದರೆ, ನಂತರ ಬಂದ ಅಲೆಕ್ಸ್ ಕೇರಿ ರನ್ ಖಾತೆ ತೆರೆಯದೆ ಅಶ್ವಿನ್‍ಗೆ ವಿಕೆಟ್ ಒಪ್ಪಿಸಿದರು.

Border-Gavaskar, Trophy, Cameron Green, hits, maiden, Test century,

Articles You Might Like

Share This Article