ಸ್ಪರ್ಧೆಯಿಂದ ಹಿಂದೆ ಸರಿದ ಜಾನ್ಸನ್‌, ರಿಷಿ ಬ್ರಿಟನ್‍ ಪ್ರಧಾನಿಯಾಗೋದು ಫಿಕ್ಸ್

Social Share

ಲಂಡನ್. ಅ,24- ಅಚ್ಚರಿಯ ನಡೆಯಲ್ಲಿ ಬೋರಿಸ್ ಜಾನ್ಸನ್ ಅವರು ಕನ್ಸರ್ವೇಟಿವ್ ಪಕ್ಷದ ನಾಯಕತ್ವದ ರೇಸ್‍ನಲ್ಲಿ ಸ್ರ್ಪಧಿಸುವುದಿಲ್ಲ ಎಂದು ಘೋಷಿಸಿದ್ದು, ಮತ್ತೆ ರಿಷಿ ಸುನಕ್ ಬ್ರಿಟನ್‍ನ ಮೊದಲ ಭಾರತೀಯ ಮೂಲದ ಪ್ರಧಾನಿಯಾಗಿ ಆಯ್ಕೆಯಾಗವ ಸಾಧ್ಯತೆ ಹೆಚ್ಚಾಗಿದೆ.

ತಾನು 100 ಸಂಸದರ ಮಿತಿಯನ್ನು ದಾಟಿದ್ದೇನೆ ಎಂದು ಹೇಳಿಕೊಂಡಿದ್ದಾನೆ ಆದರೆ ಪಕ್ಷದ ಏಕತೆಯ ಹಿತಾಸಕ್ತಿಯಿಂದ ಮುಂದೆ ಹೋಗದಿರಲು ನಿರ್ಧರಿಸಿದೆ ಎಂದು ಹೇಳುವ ಮೂಲಕ ರಿಷಿ ಸುನಕ್ ಹಾದಿ ಸುಗಮಗೊಳಿಸಿದ್ದಾರೆ.

ಕೋವಿಡ್-19ರ ಲಾಕ್‍ಡೌನ್ ಸಂದರ್ಭದಲ್ಲಿ ಬಂಡಾಯ ಬಿಸಿ ತಾಪಕ್ಕೆ ಕಳೆದ ಜುಲೈನಲ್ಲಿ ರಾಜೀನಾಮೆ ನೀಡಿದ ಜಾನ್ಸನ್ ನಡೆ ಭಾರಿ ಕುತೂಹಲ ಕೆರಳಿಸಿತ್ತುಆದರೆ ಈಗ ಮತ್ತೆ ಪ್ರಧಾನಿ ಹುದ್ದೆಗೆ ನಾನು ಸಿದ್ದವಾಗಿಲ್ಲ ಎಂದು ಹೇಳಿ ಎಲ್ಲರ ಹುಬ್ಬೇರುವಂತೆ ಮಾಡಿದರು.

ಈಗ ಇಂದು ಇಬ್ಬರು ಅಭ್ಯರ್ಥಗಳು ಪ್ರಧಾನಿ ಸ್ಥಾನಕ್ಕೆ ಅಯ್ಕೆ ಮಾಡಿ ಸಂಸದರ ಬೆಂಬಲ ಯಾರಿಗಿದೆ ಎಂಬುದನ್ನು ಘೋಷಿಸಲಾಗುವುದು ಪಕ್ಷದ ಸಂಸದರು ಒಂದೇ ಅಭ್ಯರ್ಥಿಯ ಹಿಂದೆ ಒಗ್ಗೂಡಿದರೆ, ಮುಂಚೂಣಿಯಲ್ಲಿರುವ ಸುನಕ್ ಪ್ರದಾನಿಯಾಗಬಹುದು ಎಂದು ನಿರೀಕ್ಷಿಸಲಾಗಿದೆ.

ಪೆನ್ನಿ ಮೊರ್ಡಾಂಟ್ ಸ್ರ್ಪಧಿಸುವ ಸಾಧ್ಯತೆ ಇದ್ದು ಇಂದು ರಾತ್ರಿ ವೇಳೆಗೆ ಸ್ಪಷ್ಟ ಮಾಹಿತಿ ಹೊರಬೀಳಲಿದೆ ಸಂಸದರು ಆನ್‍ಲೈನ್ ಮೂಲಕ ಮತದಾನದ ಮಾಡಲಿದ್ದು ಭಾರತೀಯ ಕಾಲಮಾನ ನಾಳೆ ಮುಂಜಾನೆ ಸೂರ್ಯ ಮುಳುಗದ ನಾಡು ಬ್ರಿಟನ್‍ಗೆ ಹೊಸ ಪ್ರಧಾನಿ ಅಧಿಕಾರವಹಿಸಿಕೊಳುವ ಸಾಧ್ಯತೆ ಹೆಚ್ಚಾಗಿದೆ.

Articles You Might Like

Share This Article