ರಾಯಚೂರು, ಫೆ.12- ಮಡದಿ ಮೇಲಿನ ಕೋಪಕ್ಕೆ ತನ್ನ ಇಬ್ಬರು ಮಕ್ಕಳನ್ನು ಕತ್ತು ಹಿಸುಕಿ ಕ್ರೂರ ತಂದೆ ಕೊಲೆ ಮಾಡಿರುವ ಘಟನೆ ಕಳೆದ ರಾತ್ರಿ ಜಿಲ್ಲೆಯ ದೇವದುರ್ಗ ತಾಲೂಕಿನ ಜಕ್ಕಲದೊಡ್ಡಿ ಗ್ರಾಮದಲ್ಲಿ ನಡೆದಿದೆ.
ಮೃತ ಮಕ್ಕಳನ್ನು ಶಿವರಾಜï(5) ಹಾಗೂ ರಾಜು(3) ಎಂದು ಪೊಲೀಸರು ತಿಳಿಸಿದ್ದು, ಆರೋಪಿ ತಂದೆ ನಿಂಗಪ್ಪನನ್ನ ಬಂಧಿಸಲಾಗಿದೆ. ಪತ್ನಿ ಪ್ರಭಾವತಿ ಮೇಲೆ ಅನುಮಾನ ಪಡುತ್ತಿದ್ದ ಪತಿ ನಿಂಗಪ್ಪ ಪದೇ ಪದೇ ಜಗಳವಾಡುತ್ತಿದ್ದ. ನಿನ್ನೆ ಕೂಡ ಜಗಳ ನಡೆದಿದೆ.
ಕ್ರಿಮಿಗಳನ್ನು ಬೆಳಸಿ ಬುಡಕ್ಕೆ ಬಾಂಬ್ ಇಟ್ಟುಕೊಂಡ ‘ಪಾಪಿ’ಸ್ತಾನ
ನಂತರ ಅಜ್ಜಿ ಮನೆಗೆ ಹೋಗೋಣ ಎಂದು ಮಕ್ಕಳನ್ನು ಕರೆದುಕೊಂಡು ಹೋಗಿದ್ದ ಆತ ರಾತ್ರಿ ಕತ್ತು ಹಿಸುಕಿ ಇಬ್ಬರು ಮಕ್ಕಳನ್ನು ಕೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಕ್ಕಳನ್ನು ಕಳೆದುಕೊಂಡ ತಾಯಿಯ ಆಕ್ರಂಧನ ಮುಗಿಲು ಮುಟ್ಟಿದೆ. ದೇವದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
children, killed, father, Raichur