ಕನ್ನಡ ಹಾಡು ಹಾಡದ ಕೈಲಾಷ್ ಖೇರ್ ಮೇಲೆ ಬಾಟಲಿ ದಾಳಿ

Social Share

ಬಳ್ಳಾರಿ,ಜ.30- ಕನ್ನಡ ಹಾಡು ಹಾಡಲಿಲ್ಲ ಎಂದು ಬಾಲಿವುಡ್‍ನ ಖ್ಯಾತ ಗಾಯಕ ಕೈಲಾಷ್ ಖೇರ್ ಅವರ ಮೇಲೆ ಬಾಟಲಿ ದಾಳಿ ನಡೆಸಿರುವ ಘಟನೆ ಹಂಪಿಯಲ್ಲಿ ನಡೆದಿದೆ. ಹಂಪಿಯಲ್ಲಿ ನಡೆಯುತ್ತಿದ್ದ ಸಂಗೀತ ಕಚೇರಿಯ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಖೇರ್ ಅವರು ಕೇವಲ ಹಿಂದಿ ಹಾಡುಗಳನ್ನು ಮಾತ್ರ ಹಾಡುತ್ತಿದ್ದರು.

ಈ ಸಂದರ್ಭದಲ್ಲಿ ಸ್ಥಳೀಯರು ಕನ್ನಡ ಗೀತೆ ಹಾಡುವಂತೆ ಮನವಿ ಮಾಡಿಕೊಂಡರು ಅವರು ಹಿಂದಿ ಹಾಡುಗಳನ್ನು ಹಾಡಲು ಮುಂದಾದಾಗ ಸಭಿಕರು ಖೇರ್ ಅವರ ಮೇಲೆ ನೀರಿನ ಬಾಟಲ್ ಎಸೆದು ಆಕ್ರೋಶ ವ್ಯಕ್ತಪಡಿಸಿದರು.

ಶಾರ್ಜಾದಿಂದ ಬರುತ್ತಿದ್ದ ಏರ್ ಇಂಡಿಯಾ ವಿಮಾನ ತುರ್ತು ಭೂಸ್ಪರ್ಶ

ತಮ್ಮತ್ತ ತೂರಿ ಬಂದ ಬಾಟಲಿಯಿಂದ ತಪ್ಪಿಸಿಕೊಂಡ ಖೇರ್ ಅವರು ಸಮಾಧಾನವಾಗಿಯೇ ತಮ್ಮ ಗಾಯನ ಮುಗಿಸಿ ಆಸೀನರಾದರು.

ಸರ್ವಪಕ್ಷ ಸಭೆ ಕರೆದ ಕೇಂದ್ರ ಸರ್ಕಾರ

ಗಾಯನ ಮುಗಿದ ಕೂಡಲೇ ಅಧಿಕಾರಿಯೊಬ್ಬರು ವೇದಿಕೆ ಮೇಲೆ ತೂರಿ ಬಂದಿದ್ದ ಆರ್ಧ ತುಂಬಿದ್ದ ನೀರಿನ ಬಾಟಲಿಯನ್ನು ಹೊರ ಎಸೆದರು ಎಂದು ವರದಿಯಾಗಿದೆ.

Bottle, Thrown, Singer, Kailash Kher, During, Hampi Utsav,

Articles You Might Like

Share This Article