12 ವರ್ಷದ ಬಾಲಕನನ್ನು ಅಪಹರಿಸಿ ಕೊಂದ 15 ವರ್ಷದ ಬಾಲಕನ ಗ್ಯಾಂಗ್

Social Share

ಹಜಾರಿಬಾಗ್,ಮಾ.6- ಹನ್ನೆರಡು ವರ್ಷದ ಸೋದರ ಸಂಬಂಧಿಯೊಬ್ಬರನ್ನು 15 ವರ್ಷದ ಬಾಲಕ ಅಪಹರಿಸಿ ಹತ್ಯೆಗೈದಿರುವ ಘಟನೆ ಜಾರ್ಖಾಂಡ್‍ನಲ್ಲಿ ನಡೆದಿದೆ.

ಹನ್ನೆರಡು ವರ್ಷದ ಬಾಲಕನನ್ನು ಅಪಹರಿಸಿ ಹತ್ಯೆಗೈದ ಬಾಲಪರಾಧಿ ಹಾಗೂ ಆತನ ಇಬ್ಬರ ಸಹಚರರನ್ನು ಬಂಧಿಸಲಾಗಿದೆ ಎಂದು ಹಜಾರಿಬಾಗ್ ಪೊಲೀಸ್ ಅಕ್ಷಕ ಮನೋಜ್ ರತನ್ ತಿಳಿಸಿದ್ದಾರೆ. ಬಂಧಿತ ಇಬ್ಬರನ್ನು ಕಾರ್ತಿಕ್ ಯಾದವ್ (50) ಮತ್ತು ಆಶಿಶ್ ಕುಮಾರ್ (36) ಎಂದು ಗುರುತಿಸಲಾಗಿದೆ,

ಬಾಹುಬಲಿ-2 ದಾಖಲೆ ಮುರಿದ ಪಠಾಣ್

ಇಬ್ಬರು ಆರೋಪಿಗಳೊಂದಿಗೆ ಬಾಲಪರಾಧಿ ಸುಲಿಗೆ ಮಾಡುವ ಉದ್ದೇಶದಿಂದ 12 ವರ್ಷದ ಬಾಲಕನನ್ನು ಅಪಹರಿಸಿ ಕೊಲೆ ಮಾಡಿದ್ದ ಎಂದು ಅವರು ವಿವರಣೆ ನೀಡಿದ್ದಾರೆ. ಕಳೆದ ಮಾರ್ಚ್ 1 ರಂದು ಸಂಜೆಯಾದರೂ ಮಗ ಮನೆಗೆ ಬಾರದಿದ್ದಾಗ ಸಂತ್ರಸ್ತೆಯ ತಾಯಿ ಬರ್ಕಥಾ ಪೊಲೀಸ್ ಠಾಣೆಯಲ್ಲಿ ಕಾಣೆಯಾದ ದೂರು ನೀಡಿದ್ದರು.

ಎರಡು ದಿನಗಳ ನಂತರ, ಆಕೆಗೆ ಅಪಹರಣಕಾರರಲ್ಲಿ ಒಬ್ಬರಿಂದ ಕರೆ ಬಂದಿತ್ತು, 6 ಲಕ್ಷ ಹಣ ನೀಡದಿದ್ದರೆ ನಿಮ್ಮ ಮಗನನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದರು ಎನ್ನಲಾಗಿದೆ.

ನಕಲಿ ಎನ್‍ಕೌಂಟರ್ ಮಾಡಿದ್ದ ಸೇನಾಧಿಕಾರಿಗೆ ಜೀವಾವಧಿ ಶಿಕ್ಷೆ

ಈ ಕುರಿತಂತೆ ಪ್ರಕರಣ ದಾಖಲಿಸಿಕೊಂಡು ಆಖಾಡಕ್ಕಿಳಿದ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಅಪಹರಣಕಾರರು 12 ವರ್ಷದ ಬಾಲಕನನ್ನು ಅಪಹರಿಸಿದ ದಿನವೇ ಕೊಲೆ ಮಾಡಿರುವುದಾಗಿ ತಪ್ಪೋಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Boy, 12, Kidnapped, Killed, Jharkhand,

Articles You Might Like

Share This Article