ಬಾಲಕನನ್ನ ಕೊಂದು ತಿಂದ ಚಿರತೆ, ಅರಣ್ಯ ಇಲಾಖೆ ವಿರುದ್ಧಗ್ರಾಮಸ್ಥರ ಆಕ್ರೋಶ

Social Share

ತಿ.ನರಸೀಪುರ.ಜ.22 – ಬಾಲಕನನ್ನು ಹೊತ್ತೊಯ್ದು ಕೊಂದು ಹಾಕಿದ್ದ ಚಿರತೆ ಅರಣ್ಯ ಇಲಾಖೆಯವರು ಇರಿಸಿದ್ದ ಬೋನಿನಲ್ಲಿ ಕಳೆದ ರಾತ್ರಿ ಸೆರೆಯಾಗಿದೆ ತಾಲೂಕಿನ ಹೊರಳಹಳ್ಳಿ ಗ್ರಾಮದ ನಿವಾಸಿ ದಶಕಂಠ ಎಂಬುವರ ಮಗ ಸರ್ಕಾರಿ ಶಾಲೆಯಲ್ಲಿ 5 ನೇ ತರಗತಿ ವ್ಯಾಸಂಗ ಮಾಡುತ್ತಿರುವ ಜಯಂತ್(11)ಎಂಬಾತ ನಿನ್ನೆ ರಾತ್ರಿ ಮನೆಯ ಮುಂದಿನ ಅಂಗಡಿಯಲ್ಲಿ ಬಿಸ್ಕತ್ ತರಲು ಬಂದಿದ್ದ ವೇಳೆ ಏಕಾ ಏಕಿ ದಾಳಿ ನಡೆಸಿ ಎತ್ತೊಯ್ದಿತ್ತು.

ಅಂಗಡಿಗೆ ಹೋದ ಮಗ ಮನೆಗೆ ವಾಪಸ್ ಬಾರದ ಹಿನ್ನೆಲೆಯಲ್ಲಿ ಗಾಬರಿ ಗೊಂಡ ಮನೆಯವರು ಹುಡುಕಾಟ ನಡೆಸಿದ್ದರಾದರೂ ಬಾಲಕ ಪತ್ತೆಯಾಗಿರಲಿಲ್ಲ.ಚಿರತೆ ಮನೆಯ ಹಿಂದೆ ಕಿ.ಮೀ ದೂರ ವಿರುವ ಪೊದೆಯೊಂದಕ್ಕೆ ಎತ್ತೊಯ್ದು ಕೊಂದು ಹಾಕಿತ್ತು.

ತಕ್ಷಣ ಎಚ್ಚೆತ್ತ ಅರಣ್ಯ ಇಲಾಖೆಯವರು ಕಾರ್ಯಾಚರಣೆಗೆ ಮುಂದಾದರಾದರೂ ಚಿರತೆ ಸುಳಿವು ಪತ್ತೆಯಾಗಲಿಲ್ಲ.ಆದರೆ ಕಬ್ಬಿನ ಗದ್ದೆಯಲ್ಲಿ ಎರಡು ಚಿರತೆ ಮರಿ ಪತ್ತೆಯಾಗಿದ್ದವು. ಚಿರತೆ ಮರಿಗಳನ್ನೇ ಬೋನಿನಲ್ಲಿಟ್ಟು ಚಿರತೆ ಸೆರೆಗೆ ಬಲೆ ಬೀಸಲಾಯಿತು. ಮರಿಗಳನ್ನು ನೋಡಲು ಬಂದು ನರಭಕ್ಷಕ ಚಿರತೆ ಕಳೆದ ರಾತ್ರಿಯೇ ಬೋನಿನಲ್ಲಿ ಸೆರೆಯಾಗಿದೆ.

ಅಮೆರಿಕ ಅಧ್ಯಕ್ಷ ಬಿಡೆನ್ ಮನೆಯಲ್ಲಿ ಎಫ್‍ಬಿಐ ಶೋಧ ದಾಖಲೆಗಳ ವಶ

ಹೊರಳಹಳ್ಳಿ ಗ್ರಾಮದ ವಿದ್ಯಾರ್ಥಿ ಜಯಂತ್ ಸೇರಿದಂತೆ ಈ ವರೆಗೆ ಚಿರತೆ ನಾಲ್ವರನ್ನು ಬಲಿ ಪಡೆದಿದ್ದು ತಾಲೂಕಿನಾದ್ಯಂತ ಜನತೆ ಭಯ ಭೀತರಾಗಿದ್ದು ಮನೆಯಿಂದ ಹೊರಬರಲು ಭಯಪಡುವ ಸ್ಥಿತಿ ನಿರ್ಮಾಣವಾಗಿದೆ.

ಪ್ರತಿಭಟನೆ: ಚಿರತೆಯನ್ನು ಸೆರೆಹಿಡಯಲು ಅರಣ್ಯ ಇಲಾಖೆಯವರು ವಿಫಲರಾಗಿದ್ದಾರೆಂದು ಆರೋಪಿಸಿ ಗ್ರಾಮಸ್ಥರು ಪಟ್ಟಣದ ಕಪಿಲಾ ಸೇತುವೆ ಮೇಲೆ ಪ್ರತಿಭಟನೆ ನಡೆಸಿದರು.ತಾಲೂಕಿನಲ್ಲಿ ಇವೆರಗೆ ನಾಲ್ವರನ್ನು ಚಿರತೆ ಕೊಂದು ಹಾಕಿದೆಯಾದರೂ ಅರಣ್ಯ ಇಲಾಖೆಯವರು ಬೇಜವಾಬ್ದಾರಿ ನಡೆ ಪ್ರದರ್ಶಿಸುತ್ತಿದ್ದರೆಂದು ಪ್ರತಿಭಟನಾ ನಿರತರು ಆರೋಪಿಸಿದರು.

boy, killed, leopard, Mysore,

Articles You Might Like

Share This Article