ತಾಯಿ ಶವದೊಂದಿಗೆ 2 ದಿನ ಕಾಲ ಕಳೆದ ಬಾಲಕ

Social Share

ಬೆಂಗಳೂರು, ಮಾ.2- ಆರೋಗ್ಯದಲ್ಲಿ ಏರುಪೇರಾಗಿ ತಾಯಿ ಮಲಗಿದ್ದಲ್ಲೇ ಮೃತಪಟ್ಟಿದ್ದು, ಇದ್ಯಾವುದೂ ಅರಿಯದ ಬಾಲಕ ಎರಡು ದಿನ ತಾಯಿಯ ಶವದ ಜೊತೆಯಲ್ಲೇ ಕಾಲ ಕಳೆದಿರುವ ಮನಕಲಕುವ ಘಟನೆ ನಗರದಲ್ಲಿ ನಡೆದಿದೆ.
ಆರ್‍ಟಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಗಂಗಾ ನಗರದಲ್ಲಿ ಕೂಲಿ ಕೆಲಸ ಮಾಡಿಕೊಂಡು ಹನ್ನೊಂದು ವರ್ಷದ ಮಗ ಸೂರ್ಯ ಜೊತೆ ಅಣ್ಣಮ್ಮ(45) ವಾಸವಾಗಿದ್ದರು.

ಒಂದು ವರ್ಷದ ಹಿಂದೆ ಪತಿ ಸಾವನ್ನಪ್ಪಿದ್ದಾರೆ. ತಾಯಿ, ಮಗ ಇಬ್ಬರೇ ವಾಸವಾಗಿದ್ದರು. ಫೆ. 26ರಂದು ಅಣ್ಣಮ್ಮ ಅವರಿಗೆ ಲೋ ಬಿಪಿ ಹಾಗೂ ಸಕ್ಕರೆ ಕಾಯಿಲೆಯಿಂದಾಗಿ ಆರೋಗ್ಯದಲ್ಲಿ ಏರುಪೇರಾಗಿ ಮಲಗಿದ್ದಲ್ಲೇ ಮೃತಪಟ್ಟಿದ್ದಾರೆ. ಆದರೆ ಅಮ್ಮ ಮಲಗಿದ್ದಾರೆ ಎಂದು ಮಗ ಸೂರ್ಯ ತಿಳಿದುಕೊಂಡಿದ್ದಾನೆ.

11 ಸಾವಿರ ಕೋಟಿಯ ಬಿಬಿಎಂಪಿ ದಾಖಲೆ ಬಜೆಟ್

ಹೊರಗೆ ಹೋಗಿ ಊಟ-ತಿಂಡಿ ತೆಗೆದುಕೊಂಡು ಮನೆಗೆ ಹೋಗುತ್ತಿದ್ದನು. ಫೆ. 28ರಂದು ಅಂದರೆ 2 ದಿನಗಳ ಕಾಲ ತಾಯಿಯ ಶವದ ಜೊತೆಯಲ್ಲೇ ಮಗ ಕಾಲ ಕಳೆದಿದ್ದು, ಅಂದು ಹೊರಗೆ ಹೋಗಿದ್ದಾಗ ತಂದೆಯ ಸ್ನೇಹಿತರು ಸಿಕ್ಕಿದ್ದಾರೆ. ಅವರ ಬಳಿ ತಾಯಿ ಮಾತನಾಡುತ್ತಿಲ್ಲ ಎಂದು ಹೇಳಿದ್ದಾನೆ.

ಈತನ ಮಾತಿನಿಂದ ಅನುಮಾನಗೊಂಡ ಸ್ನೇಹಿತರು ಮನೆ ಬಳಿ ಹೋಗಿ ನೋಡಿದಾಗ ಅಣ್ಣಮ್ಮ ಮೃತಪಟ್ಟಿರುವುದು ಗೊತ್ತಾಗಿದೆ. ಈ ಬಗ್ಗೆ ಅವರು ಆರ್‍ಟಿ ನಗರ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.

ಬೆಂಗಳೂರು ಸಂಚಾರ ದಟ್ಟಣೆಗೆ ನಿಯಂತ್ರಣಕ್ಕೆ ಬಿಬಿಎಂಪಿ ಮಹತ್ವದ ನಿರ್ಣಯ

ಇದೀಗ ತಾಯಿ ಕಳೆದುಕೊಂಡ ಬಾಲಕ ಸೂರ್ಯ ತಬ್ಬಲಿಯಾಗಿದ್ದಾನೆ. ಈ ಘಟನೆ ತಿಳಿದು ನೆರೆಹೊರೆಯವರು ಕಣ್ಣೀರು ಹಾಕಿದ್ದಾರೆ.

boy, spent, 2 days, mother, dead body,

Articles You Might Like

Share This Article