ಆಟವಾಡುತ್ತಿದ್ದಾಗ ನಾಡ ಬಂದೂಕಿನಿಂದ ಗುಂಡು ಹಾರಿ ಬಾಲಕ ಸಾವು

Social Share

ಕನಕಪುರ,ಡಿ.18- ತೋಟದ ಮನೆಯಲ್ಲಿ ಇಟ್ಟಿದ್ದ ನಾಡ ಬಂದೂಕನ್ನು ತೆಗೆದುಕೊಂಡು ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ ಗುಂಡು ಹಾರಿ ಬಾಲಕನೊಬ್ಬ ಸಾವನ್ನಪ್ಪಿರುವ ಘಟನೆ ಕೋಡಿಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಕಾಡುಶಿವನಹಳ್ಳಿಯಲ್ಲಿ ನಡೆದಿದೆ.

ಶೂಟೌಟ್‍ನಲ್ಲಿ ಸಾವನ್ನಪ್ಪಿರುವ ಬಾಲಕನನ್ನು ಶಮಾ(7) ಎಂದು ಗುರುತಿಸಲಾಗಿದೆ. ಕಾಡುಶಿವನಹಳ್ಳಿಯ ಮಲ್ಲೇಶ್ ಎಂಬವರ ತೋಟದಲ್ಲಿ ಕೂಲಿ ಕೆಲಸ ಮಾಡಿಕೊಂಡು ಕುಟುಂಬವೊಂದು ಅಲ್ಲೇ ನೆಲೆಸಿತ್ತು.

ತಂದೆ-ತಾಯಿ ಇಬ್ಬರು ತೋಟದಲ್ಲಿ ಕೆಲಸ ಮಾಡುವ ವೇಳೆ ಇವರ ಮಕ್ಕಳು ತೋಟದ ಮನೆಯಲ್ಲಿದ್ದ ಬಂದೂಕನ್ನು ತೆಗೆದುಕೊಂಡು ಆಟವಾಡುತ್ತಿದ್ದಾಗ ಸಹೋದರ ಟ್ರಿಗರ್ ಒತ್ತಿದಾಗ ಗುಂಡು ಹಾರಿ ಶಮಾಗೆ ತಗುಲಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ.

ವಿಷಯ ತಿಳಿದ ಕೋಡಿಹಳ್ಳಿ ಪೊಲೀಸರು ಸ್ಥಳಕ್ಕೆ ದಾವಿಸಿ ಮನೆಯಲ್ಲಿ ಬಂದೂಕಿಟ್ಟಿದ್ದ ಮಾಲೀಕ ಮಲ್ಲೇಶನ ಮೇಲೆ ನಿರ್ಲಕ್ಷ್ಯ ಆರೋಪದಡಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

#boy, #shotDead, #killed, #whileplaying,

Articles You Might Like

Share This Article