ಬೆಂಗಳೂರು, ಮೇ 29- ಕಾಳಸಂತೆಯಲ್ಲಿ ಅನರ್ಹರಿಗೆ ಬಿಪಿಎಲ್ ಕಾರ್ಡುಗಳನ್ನು ಮಾಡಿ ಕೊಡುತ್ತಿರುವ ಮಾಫಿಯಾ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಎನ್.ಆರ್. ರಮೇಶ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ.
ಇತ್ತಿಚೆಗೆ ರಾಜ್ಯಾದ್ಯಂತ ಆರ್ಥಿಕವಾಗಿ ಸುಸ್ಥಿತಿಯಲ್ಲಿರುವ ಕುಟುಂಬದವರೂ ಸಹ ಬಿಪಿಎಲ್ ಕಾರ್ಡುಗಳನ್ನು ಮಾಡಿಸಿಕೊಳ್ಳಲು ಮುಗಿ ಬೀಳುತ್ತಿರುವುದು ಕಂಡು ಬರುತ್ತಿದೆ.
ಈ ಅವಕಾಶವನ್ನು ದುರಪ ಯೋಗಪಡಿಸಿ ಕೊಂಡಿರುವ ಕರ್ನಾಟಕ ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಸಿಬ್ಬಂದಿಗಳು ಪಡಿತರ ಚೀಟಿ ಆಕಾಂಕ್ಷಿಗಳಿಂದ ಐದು ಸಾವಿರದಿಂದ 8 ಸಾವಿರ ರೂ.ಗಳವರೆಗೆ ಹಣವನ್ನು ಪಡೆದು ಬಿಪಿಎಲ್ ಕಾರ್ಡ್‍ಗಳನ್ನು ಮಾಡಿಕೊಟ್ಟಿರುವ ಪ್ರಕರಣಗಳು ಬೆಳಕಿಗೆ ಬಂದಿವೆ.
ಅಂಡರ್‌ಪಾಸ್‌ನಲ್ಲಿ ಯುವತಿ ಸಾವು: ಬಿಬಿಎಂಪಿ ಅಧಿಕಾರಿಗಳಿಗೆ ಲೋಕಾಯುಕ್ತ ನೋಟಿಸ್
ಕಳೆದ 14ರ ದಿನಾಂಕದ ನಂತರ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ವತಿಯಿಂದ ಬಿಪಿಎಲ್ ಕಾರ್ಡುಗಳನ್ನು ನೀಡಲಾಗಿದೆ. ಖುದ್ದು ನೀವೆ ದಾಖಲೆಗಳನ್ನು ಪರಿಶೀಲಿಸಿದರೆ ಇದರ ಬಗೆಗಿನ ಸತ್ಯಾಂಶ ತಮಗೆ ಅರಿವಿಗೆ ಬರುತ್ತದೆ ಎಂದು ಅವರು ಪತ್ರದಲ್ಲಿ ಮನವಿ ಮಾಡಿಕೊಂಡಿದ್ದಾರೆ.
ನಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ಘೋಷಿಸಿರುವ 5 ಉಚಿತ ಗ್ಯಾರಂಟಿ ಯೋಜನೆಗಳನ್ನು ಪಡೆದುಕೊಳ್ಳ ಬೇಕೆಂಬ ದುರುದ್ದೇಶದಿಂದ ಆರ್ಥಿಕವಾಗಿ ಸುಸ್ಥಿತಿಯಲ್ಲಿರುವ ಜನರೂ ಸಹ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಲ್ಲಿರುವ ಭ್ರಷ್ಟ ಅಧಿಕಾರಿಗಳ ನೆರವಿನಿಂದ ಕಳೆದ 15 ದಿನಗಳಿಂದೀಚೆಗೆ ಸಹಸ್ರಾರು ಸಂಖ್ಯೆಯಲ್ಲಿ ಬಿಪಿಎಲ್ ಕಾರ್ಡುಗಳನ್ನು ಪಡೆದಿರುತ್ತಾರೆ ಮತ್ತು ಪಡೆಯಲು ಅರ್ಜಿಗಳನ್ನು ಸಲ್ಲಿಸಿರುತ್ತಾರೆ.
ಆಹಾರ ಮತ್ತು ನಾಗರಿಕ ಸರಬ ರಾಜು ಇಲಾಖೆಯ ಪ್ರತಿಯೊಂದು ಕಚೇರಿಗಳ ಮುಂದೆಯೂ ಸಹ ನೂರಾರು ಸಂಖ್ಯೆಯಲ್ಲಿ ಜನರು ಸರತಿಯಲ್ಲಿ ನಿಂತಿರುವ ಬಗ್ಗೆಯೂ ಸಹ ತಾವು ತಿಳಿದು ಕೊಳ್ಳಬಹುದಾಗಿರುತ್ತದೆ. ಹೀಗಾಗಿ ಜೂ.14ರಿಂದೀಚೆಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ವತಿಯಿಂದ ನೀಡಲಾಗಿರುವ ಬಿಪಿಎಲ್ ಕಾರ್ಡುಗಳ ದಂಧೆಯ ಬಗ್ಗೆ ಕೂಡಲೇ ಒಂದು ತನಿಖಾ ತಂಡವನ್ನು ನಿಯೋಜಿಸಿ, ತನಿಖಾ ವರದಿಯ ನಂತರವಷ್ಟೇ ನಿಜಕ್ಕೂ ಅರ್ಹತೆ ಇರುವ ಬಡ ಕುಟುಂಬದ ಜನರಿಗೆ ಮಾತ್ರವೇ ಬಿಪಿಎಲ್
ಕಾರ್ಡ್ ಸೌಲಭ್ಯ ಸಿಗುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಬೇಕೆಂದು ಅವರು ವಿನಂತಿಸಿಕೊಂಡಿದ್ದಾರೆ.
ಕಾಂಗ್ರೆಸ್ ಗ್ಯಾರಂಟಿ : ಬಾಡಿಗೆ ಮನೆಗೂ ಉಚಿತ ವಿದ್ಯುತ್?
ಹಾಗೂ ಆರ್ಥಿಕವಾಗಿ ಸುಸ್ಥಿತಿ ಯಲ್ಲಿರುವ ಕುಟುಂಬದವರಿಗೆ ನೀಡಲಾಗಿರುವ ಬಿಪಿಎಲ್ ಕಾರ್ಡುಗಳನ್ನು ರದ್ದುಪಡಿಸಿ, ಇಂತಹ ಕಾರ್ಡುಗಳನ್ನು ನೀಡಿರುವ ಅಧಿಕಾರಿ ಇಲ್ಲವೆ ನೌಕರರ ವಿರುದ್ಧ ಕೂಡಲೇ ಕಾನೂನು ರೀತ್ಯಾ ಶಿಸ್ತಿನ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ರಮೇಶ್ ಮನವಿ ಮಾಡಿಕೊಂಡಿದ್ದಾರೆ.
BPLcard, #mafia, #NRramesh, #cmSiddaramaiah,