Saturday, September 23, 2023
Homeಇದೀಗ ಬಂದ ಸುದ್ದಿಕೇಂದ್ರ ಅಕ್ಕಿ ಕೊಡಲಿ ಬಿಡಲಿ, ನಾವು 10 ಕೆಜಿ ಅಕ್ಕಿ ಕೊಟ್ಟೆ ಕೊಡುತ್ತೇವೆ

ಕೇಂದ್ರ ಅಕ್ಕಿ ಕೊಡಲಿ ಬಿಡಲಿ, ನಾವು 10 ಕೆಜಿ ಅಕ್ಕಿ ಕೊಟ್ಟೆ ಕೊಡುತ್ತೇವೆ

- Advertisement -

ಬೆಂಗಳೂರು,ಮೇ 31- ಕೇಂದ್ರ ಸರ್ಕಾರ ಅಕ್ಕಿ ಕೊಡಲಿ ಬಿಡಲಿ, ನಮ್ಮ ಸರ್ಕಾರ ಜನರಿಗೆ ಭರವಸೆ ನೀಡಿದಂತೆ ಬಡವರಿಗೆ 10 ಕೆಜಿ ಅಕ್ಕಿ ಕೊಟ್ಟೆ ಕೊಡುತ್ತೇವೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಹೆಚ್.ಮುನಿಯಪ್ಪ ಸ್ಪಷ್ಟ ಪಡಿಸಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 10 ಕೆಜಿ ಅಕ್ಕಿ ಕೊಡುತ್ತೇವೆ ಎಂದು ವಾಗ್ದಾನ ಮಾಡಿದ್ದೇವೆ, ಮನೆ ಮನೆಗೆ ಗ್ಯಾರಂಟಿ ಕಾರ್ಡ್ ಹಂಚಿದ್ದೇವೆ. ಮಾತು ತಪ್ಪುವುದಿಲ್ಲೆ. ಏನೇ ಆದರೂ ಭರವಸೆ ಈಡೇರಿಸುತ್ತೇವೆ ಎಂದರು.

- Advertisement -

ಯಾವುದೇ ಒತ್ತಡಕ್ಕೆ ಮಣಿಯುವುದಿಲ್ಲ, ಕ್ರಮ ಬದ್ದವಾಗಿ ಗ್ಯಾರಂಟಿ ಅನುಷ್ಠಾನ; ಡಿಸಿಎಂ ಡಿಕೆಶಿ

ಅಕ್ಕಿ ದಾಸ್ತಾನು ಇಲ್ಲ ಎಂಬ ಪ್ರಶ್ನೆ ಎದುರಾದಾಗ, ಭಾರತ ದೇಶ ತುಂಬಾ ವಿಶಾಲವಾಗಿದೆ. ಎಲ್ಲೆಲ್ಲಿ ಅಕ್ಕಿ ಲಭ್ಯ ಇದೆಯೋ ಅಲ್ಲಿಂದ ತರಿಸುವುದು ಗೋತ್ತಿದೆ. ಕೇಂದ್ರ ಸರ್ಕಾರ ಕೊಡಲಿ ಬಿಡಲಿ ನಮ್ಮ ಕರ್ತವ್ಯ ಕೊಟ್ಟೇ ಕೊಡುತ್ತೇವೆ ಎಂದು ಹೇಳಿದರು.

bplcard, #rice, #Congress, #Minister, #KHMuniyappa,

- Advertisement -
RELATED ARTICLES
- Advertisment -

Most Popular