ಇನ್ನೇನು ಹಸೆಮಣೆ ಏರಬೇಕಿದ್ದ ವಧುವಿಗೆ ಕೊರೊನಾ ಪಾಸಿಟಿವ್..!

ಕೊಪ್ಪಳ,ಏ.26- ಇನ್ನೇನು ಹಸೆಮಣೆ ಏರಬೇಕಿದ್ದ ವಧುವಿಗೆ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿರುವ ಘಟನೆ ನಡೆದಿದೆ. ಜಿಲ್ಲೆಯ ಕಿನ್ನಾಳ ಗ್ರಾಮದಲ್ಲಿ ಇಂದು ಯುವತಿಯೊಬ್ಬಳು ನೂತನ ದಾಂಪತ್ಯ ಜೀವನಕ್ಕೆ ಕಾಲಿಡಬೇಕಾಗಿತ್ತು. ಆದರೆ ವಧುವಿಗೆ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿದ್ದರಿಂದ ವಿವಾಹವನ್ನೇ ರದ್ದುಪಡಿಸಲಾಗಿದೆ.

ವಧುವಿಗೆ ಜ್ವರ, ಕೆಮ್ಮು, ಶೀತ ಕಾಣಿಸಿಕೊಂಡಿದ್ದರಿಂದ ಪರೀಕ್ಷೆಗೊಳಪಡಿಸಲಾಗಿತ್ತು. ಇಂದು ಬೆಳಗ್ಗೆ ಆಕೆಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದ. ಜೊತೆಗೆ ಆಕೆಯ ಸಹೋದರಿ ಮತ್ತು ತಾಯಿ ಸೇರಿದಂತೆ ವಧುವಿನ ಕಡೆಯ ಒಟ್ಟು ನಾಲ್ವರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಇದೀಗ ಅವರ ಮನೆ, ಬೀದಿಯನ್ನು ಸೀಲ್‍ಡೌನ್ ಮಾಡಲಾಗಿದೆ.

Sri Raghav

Admin