ಸ್ಯಾಂಟೋಸ್ ಕ್ರೀಡಾಂಗಣದಲ್ಲಿ ಪೀಲೆ ಅಂತ್ಯಸಂಸ್ಕಾರ

Social Share

ಬ್ರೇಜಿಲ್,ಜ.3- ಫುಟ್‍ಬಾಲ್ ದಂತಕಥೆ ಪೀಲೆ ಅವರ ಅಂತ್ಯಸಂಸ್ಕಾರ ಇಂದು ನೆರವೇರಿತು. ಸ್ಯಾಂಟೋಸ್ ಹಾಗೂ ಬ್ರೇಜಿಲ್ ರಾಷ್ಟ್ರ ಧ್ವಜಗಳನ್ನು ಹೊದಿಸಲಾಗಿದ್ದ ಶವ ಪೆಟ್ಟಿಗೆಯನ್ನು ಬಿಳಿ ಹೂವುಗಳಿಂದ ಮುಚ್ಚಿ ಸಕಲ ಸರ್ಕಾರಿ ಗೌರವದೊಂದಿಗೆ ಪೀಲೆ ಅಂತ್ಯಸಂಸ್ಕಾರ ನೆರವೇರಿಸಲಾಯಿತು.

ಬ್ರೇಜಿಲ್ ಫುಟ್ಬಾಲ್ ಆಟಗಾರ ನೇಮರ್ ಸೇರಿದಂತೆ ಹಲವಾರು ತಾರಾ ಆಟಗಾರರು ಈ ಸಂದರ್ಭದಲ್ಲಿ ಹಾಜರಿದ್ದು ಅಗಲಿದ ಮಹಾನ್ ಆಟಗಾರನಿಗೆ ಅಂತಿಮ ನಮನ ಸಲ್ಲಿಸಿದರು.

ಸ್ಯಾಂಟೋಸ್ ಕ್ರೀಡಾಂಗಣದಿಂದಲೇ ಫುಟ್ಬಾಲ್ ತಾರೆಯಾಗಿ ಹೊರಹೊಮ್ಮಿದ್ದ ಪೀಲೆ ಅವರನ್ನು ಅದೇ ಕ್ರೀಡಾಂಗಣದಲ್ಲೇ ಚಿರಸ್ಥಾಯಿಯಾಗಿದ್ದು, ದೇಶ ವಿದೇಶಗಳ ಸಾವಿರಾರು ಅಭಿಮಾನಿಗಳು ಅಗಲಿದ ದಂತಕಥೆಗೆ ಶ್ರದ್ದಾಂಜಲಿ ಸಲ್ಲಿಸಿ ಪುನೀತರಾದರು.

ಗಡಿ ರಕ್ಷಣೆಗೆ ಅನುಕೂಲವಾಗುವ ವಿವಿಧ ಯೋಜನೆಗಳ ಲೋಕಾರ್ಪಣೆ

ಬ್ರೇಜಿಲ್ ಅಧ್ಯಕ್ಷ ಲೂಯಿಸ್ ಇನಾಸಿಯೊ ಲುಲಾ ಹಾಗೂ ಅವರ ಪತ್ನಿ ಕೂಡ ಅಂತ್ಯಸಂಸ್ಕಾರ ಹಾಗೂ ಮೆರವಣಿಗೆಯಲ್ಲಿ ಪಾಲ್ಗೊಂಡು ಗಮನ ಸೆಳೆದರು. ಮೂರು ಬಾರಿ ವಿಶ್ವಕಪ್ ವಿಜೇತ ಸಾರ್ವಕಾಲಿಕ ಶ್ರೇಷ್ಠ ಫುಟ್ಬಾಲ್ ಆಟಗಾರರಾಗಿದ್ದ ಪೀಲೆ ಅವರ ಹೆಸರನ್ನು ಸ್ಯಾಂಟೋಸ್ ಕ್ರೀಡಾಂಗಣಕ್ಕೆ ಇಡಬೇಕು ಎಂದು ಫೀಫಾ ಅಧ್ಯಕ್ಷ ಜಿಯಾನಿ ಇನಾಂಟಿನೋ ಅವರು ಒತ್ತಾಯಿಸಿದ್ದಾರೆ.

Brazil, legend, Santos stadium, Pele, funera,

Articles You Might Like

Share This Article