ರಿಯೊ ಡಿ ಜನೈರೊ, ಜ. 4 ಬ್ರೆಜಿಲ್ ಅಧ್ಯಕ್ಷ ಬೋಲ್ಸನಾರೊ ಅವರು ಹೊಟ್ಟೆ ನೊವಿನಿಂದ ಅಸ್ವಸ್ಥಗೊಂಡಿದ್ದು ಚಿಕಿತ್ಸೆಗಾಗಿ ಸಾವೊ ಪಾಲೊ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ದೇಹದ ಕರುಳಿನ ಭಾಗದಲ್ಲಿ ಸೋಂಕು ಭಾದಿಸಿದೆ ಚಿಕಿತ್ಸೆ ನೀಡಲಾಗಿದ್ದು ಆರೋಗ್ಯ ಸ್ಥಿರ ವಾಗಿದೆ ಆದರೂ ಅವರಿಗೆ ಶಸ್ತ್ರಚಿಕಿತ್ಸೆ ಅಗತ್ಯವಿದೆಯೇ ಎಂಬ ಬಗ್ಗೆ ಇನ್ನೂ ನಿರ್ಧರವಾಗಿಲ್ಲ ಎಂದು ಎಂದು ವಕ್ತಾರರು ತಿಳಿಸಿದ್ದಾರೆ.
66 ವರ್ಷದ ಬೋಲ್ಸನಾರೊ ಅವರು ಹಲವು ವೈದ್ಯಕೀಯ ಸಮಸ್ಯೆಗಳ ಅನುಭವಿಸಿದ್ದಾರೆ ಎಂದು ತಿಳಿದುಬಂದಿದೆ ಕಳೆದ 2018 ರಲ್ಲಿ ಚುನಾವಣಾ ಪ್ರಚಾರದ ವೇಳೆ ದಾಳಿನಡೆದು ಹೊಟ್ಟೆಗೆ ಚಾಕುವಿನಿಂದ ಇರಿಯಲಾಗಿತ್ತು ನಂತರ ಹಲವಾರು ಶಸ್ತ್ರಚಿಕಿತ್ಸೆಗಳಿಗೆ ಒಳಗಾಗಿದ್ದರು.
ಡಾ ಆಂಟೋನಿಯೊ ಲೂಯಿಜ್ ಮ್ಯಾಸಿಡೊ ಅವರು ಶಸ್ತ್ರಚಿಕಿತ್ಸೆಗೆ ಒಳಪಡಿಸಿದರು, ಈಗ ಅವರ ತಂಡವು ಅಧ್ಯಕ್ಷರ ಚಿಕಿತ್ಸೆಯ ಮೇಲ್ವಿಚಾರಣೆ ಮಾಡುತ್ತಿದೆ.
ಮ್ಯಾಸಿಡೊ ರಜೆಯಲ್ಲಿದೆ ಮತ್ತು ಸಾವೊ ಪಾಲೊಗೆ ಮರಳುವ ನಿರೀಕ್ಷೆಯಿದೆ ಎಂದು ಬೋಲ್ಸನಾರೊ ಟ್ವಿಟರ್‍ನಲ್ಲಿ ಬರೆದಿದ್ದಾರೆ, ಜೊತೆಗೆ ಆಸ್ಪತ್ರೆಯ ಹಾಸಿಗೆಯ ಮೇಲೆ ಮಲಗಿರುವ ಮತ್ತು ಥಂಬ್ಸï ಅಪ್ ನೀಡುವ ಫೋಟೋ ಲಗತಿಸಿದ್ದಾರೆ.
