ಉತ್ತರ ಭಾರತದ ಹಲವೆಡೆ 5.8 ತೀವ್ರತೆಯ ಭೂಕಂಪ

Earthquake

ನವದೆಹಲಿ, ಫೆ.06 : ದೆಹಲಿ ಸೇರಿದಂತೆ ಉತ್ತರ ಭಾರತದ ಹಲವೆಡೆ 5.8 ತೀವ್ರತೆಯ ಭೂಕಂಪವಾಗಿದೆ. ರಾತ್ರಿ 10.35 ರ ಸುಮಾರಿಗೆ ಭೂಕಂಪನದ ಅನುಭವವಾಗಿದ್ದು, ಸುಮಾರು 25-30 ಸೆಕೆಂಡುಗಳಿಗೂ ಅಧಿಕ ಕಾಲ ಭೂಮಿ ಕಂಪಿಸಿದೆ. ದೆಹಲಿ ಎನ್ ಸಿ ಆರ್ , ನೋಯ್ಡಾ, ಉತ್ತರಾಖಂಡ್, ಉತ್ತರ ಪ್ರದೇಶ, ಹಿಮಾಚಲ್ ಪ್ರದೇಶ, ಹರಿಯಾಣ ಪಂಜಾಬ್ ಸೇರಿದಂತೆ ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಭೂಕಂಪನದ ಅನುಭವವಾಗಿದೆ.   ನೆಮ್ಮದಿಯಿಂದ ನಿದ್ರೆಗೆ ಜಾರಲು ತಯಾರಾಗಿದ್ದವರು ಭೂಕಂಪನದ ಭಯದಿಂದ ನಡು ರಸ್ತೆಗಳಲ್ಲೇ ಕಾಲ ಕಳೆಯುತ್ತಿದ್ದಾರೆ. ಕೆಲವಡೆ ಮನೆಗಳ ಗೋಡೆಗಳು ಬಿರುಕು ಬಿಟ್ಟರೆ, ಇನ್ನು ಕೆಲವಡೆ ವಾಹನಗಳು ಅಲುಗಾಡುವಷ್ಟು ಭೂಕಂಪನದ ಅನುಭವವಾಗಿದೆ.

ಭೂಕಂಪನದ ಕೇಂದ್ರ ಬಿಂದು ಉತ್ತರ ಪ್ರದೇಶದ ರುದ್ರ ಪ್ರಯಾಗ್ ನಲ್ಲಿ ದಾಖಲಾಗಿದ್ದು. ಉತ್ತರ ಭಾರತದಾದ್ಯಂತ ಆತಂಕದ ವಾತಾವರಣ ಸೃಷಿಯಾಗಿದೆ. ಆದರೆ ಯಾವುದೇ ಕಡೆಯಿಂದ ಯಾವುದೇ ರೀತಿಯ ಹಾನಿಯಾದ  ವರದಿಗಳು ಬಂದಿಲ್ಲ  ಈ ಕುರಿತು ಇನ್ನೂ ಹೆಚ್ಚಿನ ಮಾಹಿತಿಗಳನ್ನು ನಿರೀಕ್ಷಿಸಲಾಗುತ್ತಿದೆ.

ಭೂಕಂಪದ ಕುರಿತು ಸಚಿವ ರಾಜನಾಥ್ ಸಿಂಗ್ ವಿವರಗಳನ್ನು ಪಡೆಯುತ್ತಿದ್ದಾರೆ. ಮುಂಜಾಗ್ರತೆಯಾಗಿ ಎನ್ ಡಿ ಆರ್ ಎಫ್ ಗೆ ತುರ್ತು ಕಾತ್ಯಾಚಾರಣೆಗೆ ಸಜ್ಜಾಗಿರುವಂತೆ ಸೂಚಿಸಲಾಗಿದೆ.

# ಉತ್ತರ ಖಾಂಡ್ ಮುಖ್ಯಮಂತ್ರಿ ರಾವತ್ ಅವರಿಗೂ ಕೂಡ ಸ್ವತಃ ಭೂಕಂಪದ ಅನುಭವವಾಗಿದ್ದು. ಅಧಿಕಾರಿಗಳಿಗೆ ಮುನ್ನೆಚರಿಗೆ ರವಾನಿಸಿದ್ದಾರೆ ಎನ್ನಲಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin