ಬ್ರಿಟನ್ ರಾಜಕುಮಾರ ಹ್ಯಾರಿ ಆತ್ಮಚರಿತ್ರೆ ಬಿಡುಗಡೆಗೂ ಮುನ್ನವೇ ಸೋರಿಕೆ

Social Share

ಲಂಡನ್,ಜ.6- ಮುಂದಿನ ವಾರ ಪ್ರಕಟವಾಗಲಿರುವ ಬ್ರಿಟನ್ ರಾಜಕುಮಾರ ಪ್ರಿನ್ಸ್ ಹ್ಯಾರಿ ಅವರ ಆತ್ಮ ಚರಿತ್ರೆ ಸ್ಪೇರ್ ಲೋಕಾರ್ಪಣೆಗೂ ಮುನ್ನವೇ ಸೋರಿಕೆಯಾಗಿದೆ. ಹ್ಯಾರಿ ತನ್ನ ಆತ್ಮಚರಿತ್ರೆ ಸ್ಪೇರ್‍ನಲ್ಲಿ ಆತನ ತಾಯ ರಾಜಕುಮಾರಿ ಡಯಾನಾ ಅವರ ಮರಣದ ಅಂತಿಮ ಕ್ಷಣಗಳ ಬಗ್ಗೆ ಬರೆದಿದ್ದಾರೆ ಎನ್ನುವುದನ್ನು ಪೀಪಲ್ಸ್ ನಿಯತಕಾಲಿಕ ಬಹಿರಂಗಪಡಿಸಿದೆ.

ಇಡಿ ಜಗತ್ತೆ ಸ್ಪೇರ್ ಆತ್ಮ ಚರಿತ್ರೆ ಬಗ್ಗೆ ಕೂತುಹಲದಿಂದ ಕಾಯುತ್ತಿರುವ ಸಂದರ್ಭದಲ್ಲೇ ಇಂತಹ ಲೋಪವಾಗಿರುವುದು ಕೂತುಹಲಕ್ಕೆ ಕಾರಣವಾಗಿದೆ. ಪ್ಯಾರಿಸ್‍ನಲ್ಲಿ ನಡೆದ 2007 ರಗ್ಬಿ ವಿಶ್ವಕಪ್ ಸೆಮಿಫೈನಲ್‍ಗೆ ಹಾಜರಾಗಿದ್ದ 23 ವರ್ಷದ ಹ್ಯಾರಿ 10 ವರ್ಷಗಳ ಹಿಂದೆ ಆತನ ತಾಯಿ ಸತ್ತ ಅದೇ ಸುರಂಗದ ಮೂಲಕ ಪ್ರಯಾಣ ಬೆಳೆಸಿದ್ದ ಆ ಸಂದರ್ಭದಲ್ಲಿ ಆತನ ತಾಯಿ ನೆನೆದು ಕಣ್ಣಿರಿಟ್ಟಿದ್ದನ್ನು ಹ್ಯಾರಿ ಆತ್ಮ ಚರಿತ್ರೆಯಲ್ಲಿ ಬರೆದುಕೊಂಡಿದ್ದಾರೆ ಎನ್ನುವುದನ್ನು ಇದೀಗ ಜಾಗತೀಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದೆ.

ಭಾರತ-ನೇಪಾಳ ಗಡಿಯಲ್ಲಿ ನಾಲ್ವರು ಡ್ರಗ್ಸ್ ಕಳ್ಳಸಾಗಣೆದಾರರ ಬಂಧನ

ಹ್ಯಾರಿ ಅವರು ಸುರಂಗದ ಮೂಲಕ ಗಂಟೆಗೆ 65 ಮೈಲುಗಳಷ್ಟು ವೇಗದಲ್ಲಿ ಓಡಿಸಲು ಚಾಲಕನನ್ನು ಕೇಳಿಕೊಂಡರು, ಅವರ ತಾಯಿ ಪ್ರಿನ್ಸೆಸ್ ಡಯಾನಾ ಅವರ ಕಾರು ಅಪಘಾತಕ್ಕೀಡಾಗುವ ನಿಖರವಾದ ವೇಗದಲ್ಲಿ ಚಲಿಸುತ್ತಿತ್ತು.

ಇದು ತುಂಬಾ ಕೆಟ್ಟ ಆಲೋಚನೆಯಾಗಿತ್ತು. ನನ್ನ ಇಪ್ಪತ್ತಮೂರು ವರ್ಷಗಳಲ್ಲಿ ನಾನು ಸಾಕಷ್ಟು ಕೆಟ್ಟ ಆಲೋಚನೆಗಳನ್ನು ಹೊಂದಿದ್ದೆ, ಆದರೆ ಇದು ಅದಕ್ಕಿಂತಲೂ ಕೆಟ್ಟ ಕಲ್ಪನೆಯಾಗಿತ್ತು ಎಂದು ಅವರು ಆತ್ಮಚರಿತ್ರೆಯಲ್ಲಿ ಉಲ್ಲೇಖಿಸಿದ್ದಾರೆ.

ವಿಧಾನಸೌಧದಲ್ಲಿ ಹಣ ಪತ್ತೆ ಪ್ರಕರಣ ತನಿಖೆಗೆ ಡಿಕೆಶಿ ಆಗ್ರಹ

ನನ್ನ ತಾಯಿಯ ಸಾವಿನ ಬಗ್ಗೆ ನನಗೆ ಈಗಲೂ ಸಂದೇಹವಿದೆ. ಆಕೆ ನನ್ನ ದೇವರು ಅವಳು ನಿಜವಾಗಿಯೂ ಒಳ್ಳೆ ಕೆಲಸಕ್ಕೆ ಹೋಗಿದ್ದಾಳೆ ಎಂದು ಅವರು ತನ್ನ ಮನಸ್ಸಿನ ಭಾವನೆಗಳನ್ನು ಆತ್ಮ ಚರಿತ್ರೆಯಲ್ಲಿ ಹಂಚಿಕೊಂಡಿರುವುದು ಬಹಿರಂಗಗೊಂಡಿದೆ.

Britain, Prince, Harry, autobiography, book, leaked,

Articles You Might Like

Share This Article