ತಂತ್ರಜ್ಞಾನ ಮೂಲಕ ಕುತಂತ್ರ: ಚೀನಾ ವಿರುದ್ಧ ಬ್ರಿಟನ್ ಗರಂ

Social Share

ಲಂಡನ್ , ಅ. 12 – ಆರ್ಥಿಕ ಮತ್ತು ತಾಂತ್ರಿಕ ಪ್ರಭಾವವನ್ನು ಬಳಸಿ ಅಂತರರಾಷ್ಟ್ರೀಯ ಭದ್ರತೆಯ ನಿಯಮಗಳ ಮೇಲೆ ಹಿಡಿತ ಸಾಧಿಸಲು ಚೀನಾ ಹವಣಿಸುತ್ತಿದೆ ಎಂದು ಬ್ರಿಟನ್ ಸೈಬರ್‍ಗುಪ್ತಚರ ಸಂಸ್ಥೆ ಹೇಳಿದೆ. ಬೀಜಿಂಗ್‍ನ ಹೊಸ ನಿಯಮ ರಚಿಸುವ ಪ್ರಯತ್ನ ನಮ್ಮ ಭವಿಷ್ಯವದ ರಾಷ್ಟ್ರೀಯ ಭದ್ರತಾ ಸಮಸ್ಯೆಯಾಗಿದೆ ಎಂದು ಜಿಸಿಎಸ್‍ಕ್ಯೂನ ನಿರ್ದೇಶಕ ಜೆರೆಮಿ ಫ್ಲೆಮಿಂಗ ಹೇಳಿದ್ದಾರೆ.

ತಂತ್ರಜ್ಞಾನದ ವಿಷಯಕ್ಕೆ ಬಂದಾಗ, ಚೀನೀ ರಾಜಕೀಯ ಪ್ರೇರಿತ ಕ್ರಮಗಳು ಹೆಚ್ಚು ತುರ್ತು ಸಮಸ್ಯೆಯಾಗಿದೆ ಎಂಬುದನ್ನು ನಾವು ಒಪ್ಪಿಕೊಳ್ಳಬೇಕು ಮತ್ತು ಪರಿಹರಿಸಬೇಕು ಎಂದು ತಿಳಿಸಿದ್ದಾರೆ. ತಂತ್ರಜ್ಞಾನವು ಕೇವಲ ಅವಕಾಶಕ್ಕಾಗಿ, ಸ್ಪರ್ಧೆಗಾಗಿ ಮತ್ತು ಸಹಯೋಗಕ್ಕಾಗಿ ಎಂಬ ಕ್ಷೇತ್ರವಾಗಿ ಮಾರ್ಪಟ್ಟಿಲ್ಲ, ಇದು ನಿಯಂತ್ರಣಕ್ಕಾಗಿ, ಮೌಲ್ಯಗಳಿಗಾಗಿ ಮತ್ತು ಪ್ರಭಾವಕ್ಕಾಗಿ ಯುದ್ಧಭೂಮಿಯಾಗಿದೆ ಎಂದರು.

ಆದರೆ ಚೀನಾದ ಅಧಿಕಾರಿಯೊಬ್ಬರು ಚೀನಾದ ತಾಂತ್ರಿಕ ಅಭಿವೃದ್ಧಿಯು ಜನರ ಜೀವನವನ್ನು ಸುಧಾರಿಸುವ ಗುರಿಯನ್ನು ಹೊಂದಿದೆ ಹೊರತು ಬೆದರಿಕೆಯನ್ನು ಉಂಟುಮಾಡುವುದಿಲ್ಲ ಎಂದು ಹೇಳಿದರು.

ಈ ಆರೋಪಗಳಿಗೆ ಯಾವುದೇ ವಾಸ್ತವಿಕ ಆಧಾರವಿಲ್ಲ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಮಾವೋ ನಿಂಗ್ ಹೇಳಿದ್ದಾರೆ. ಚೀನಾ ಬೆದರಿಕೆಗೆ ಅಂಟಿಕೊಳ್ಳುವುದು ಮತ್ತು ಮುಖಾಮುಖಿಯನ್ನು ಪ್ರಚೋದಿಸುವುದು ಯಾರಿಗೂ ಪ್ರಯೋಜನವಾಗುವುದಿಲ್ಲ ಮತ್ತು ಅಂತಿಮವಾಗಿ ಹಿಮ್ಮುಖವಾಗುತ್ತದೆ.

ಬ್ರಿಟನ್ ಮತ್ತು ಚೀನಾ ನಡುವಿನ ಸಂಬಂಧಗಳು ಇತ್ತೀಚಿನ ವರ್ಷಗಳಲ್ಲಿ ಹೆಚ್ಚು ಹಳಸಿದೆ , ಯುಕೆ ಅಧಿಕಾರಿಗಳು ಬೀಜಿಂಗ್ ಅನ್ನು ಆರ್ಥಿಕ ಕುತಂತ್ರ ಮತ್ತು ಮಾನವ ಹಕ್ಕುಗಳ ಉಲ್ಲಂಘನೆ ದೇಶ ಎಂದು ಆರೋಪಿಸಿದ್ದಾರೆ.

ಸಾಗರೋತ್ತರ ಗುಪ್ತಚರ ಸಂಸ್ಥೆಯ ಮುಖ್ಯಸ್ಥ ರಿಚರ್ಡ್ ರ್ಮೂ ಚೀನಾವನ್ನು ಬ್ರಿಟನ್ ಮತ್ತು ಅದರ ಮಿತ್ರರಾಷ್ಟ್ರಗಳಿಗೆ ದೊಡ್ಡ ಬೆದರಿಕೆ ಎಂದು ಕರೆದಿದ್ದಾರೆ.

Articles You Might Like

Share This Article