ಇ-ವೀಸಾ ಸ್ವೀಕರಿಸದ ಬ್ರಿಟನ್ ಪ್ರಜೆ ದುಬೈಗೆ ವಾಪಸ್

Social Share

ಇಂದೋರ್ ಫೆ .22 – ಮಧ್ಯಪ್ರದೇಶದ ಇಂದೋರ್‍ನ ದೇವಿ ಅಹಲ್ಯಾಬಾಯಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಬ್ರಿಟಿಷ್ ಪ್ರಜೆ ಎಲೆಕ್ಟ್ರಾನಿಕ್ ವೀಸಾ ಸ್ವೀಕರಿಸದ ಕಾರಣ ದುಬೈಗೆ ವಾಪಸ್ ಕಳುಹಿಸಲಾಗಿದೆ.

ಕಳೆದ ಶುಕ್ರವಾರ ಇ-ವೀಸಾದೊಂದಿಗೆ ಏರ್ ಇಂಡಿಯಾ ವಿಮಾನದ ಮೂಲಕ ದುಬೈನಿಂದ ಇಂಧೋರ್‍ಗೆ ಬಂದಿದ್ದರು, ಆದರೆ ಸ್ಥಳೀಯ ವಿಮಾನ ನಿಲ್ದಾಣದಲ್ಲಿ ಅಂತಹ ವೀಸಾಗಳಿಗೆ ಯಾವುದೇ ಕ್ಲಿಯರೆನ್ಸ್ ಕಾರ್ಯವಿಧಾನವಿಲ್ಲದ ಕಾರಣ ಏರೋಡ್ರೋಮ್‍ನಿಂದ ಹೊರಗೆ ಹೋಗಲು ಅನುಮತಿಸಲಾಗಿಲ್ಲ ಎಂದು ಅಧಿಕಾರಿ ತಿಳಿಸಿದ್ದಾರೆ.

ಆರತಕ್ಷತೆಗೆ ಮುನ್ನವೇ ನವವಿವಾಹಿತ ದಂಪತಿ ಸಾವು

ಎರಡು ದಿನದ ನಂತರ ಏರ್ ಇಂಡಿಯಾ ವಿಮಾನದಲ್ಲೇ ದುಬೈಗೆ ಕಳುಹಿಸಲಾಯಿತು. ಇ-ವೀಸಾದೊಂದಿಗೆ ಇಂದೋರ್‍ಗೆ ಬಂದ ಅಂತರರಾಷ್ಟ್ರೀಯ ಪ್ರಯಾಣಿಕರು ಸಮಸ್ಯೆಗಳನ್ನು ಎದುರಿಸುತ್ತಿರುವುದು ಇದೇ ಮೊದಲಲ್ಲ. ಕಳೆದ ನಾಲ್ಕು ವರ್ಷಗಳಲ್ಲಿ, ಇಂದೋರ್‍ಗೆ ಬಂದ ಹಲವಾರು ಅಂತರರಾಷ್ಟ್ರೀಯ ಪ್ರಯಾಣಿಕರನ್ನು ದುಬೈಗೆ ಕಳುಹಿಸಲಾಗಿದೆ.

ಪ್ರಸ್ತುತ, ಏರ್ ಇಂಡಿಯಾ ಮಾತ್ರ ಇಂದೋರ್-ದುಬೈ ಮಾರ್ಗದಲ್ಲಿ ನೇರ ಅಂತರಾಷ್ಟ್ರೀಯ ವಿಮಾನಗಳನ್ನು ನಿರ್ವಹಿಸುತ್ತಿದೆ.

British, national, deported, back, Dubai, e-visa, not, accepted, Indore, airport,

Articles You Might Like

Share This Article