ಕೊರಟಗೆರೆ,ಫೆ.18- ಈ ಅನೈತಿಕ ಸಂಬಂಧ ಎನ್ನೋದೆ ಹೀಗೆ, ಯಾರ ಯಾರ ನಡುವೆ ಸಂಬಂಧ ಬೆಳೆಯುತ್ತದೆ, ತಮ್ಮ ಸಂಬಂಧ ಮುಚ್ಚಿಕೊಳ್ಳಲು ಏನು ಬೇಕಾದರೂ ಮಾಡಲು ಸಿದ್ದರಿರುತ್ತಾರೆ. ಅದೇ ರೀತಿ ಕೊರಟಗೆರೆಯಲ್ಲಿ ಅಣ್ಣ-ತಂಗಿ ನಡುವಿನ ಅನೈತಿಕ ಸಂಬಂಧಕ್ಕೆ ಒಂದು ಹಿರಿ ಜೀವ ತಮ್ಮ ಮಗಳಿಂದಲೇ ಬಲಿಯಾಗಿರುವುದು ಮಾತ್ರ ವಿಪರ್ಯಾಸವೇ ಸರಿ.
ಹೌದು ಇಲ್ಲಿನ ಸಜ್ಜನರ ಬೀದಿಯ ಕೃಷ್ಣಾಚಾರ್ ಎನ್ನುವವರ ಪತ್ನಿ ಸಾವಿತ್ರಮ್ಮ(45) ಮಗಳು ಮತ್ತು ಆಕೆಯೊಂದಿಗೆ ಸಂಬಂಧವಿರಿಸಿಕೊಂಡಿದ್ದ ತಂಗಿ ಮಗನಿಂದಲೇ ಜೀವ ಕಳೆದುಕೊಂಡಿರುವ ದುರ್ದೈವಿ. ಸಾವಿತ್ರಮ ಅವರ ಪುತ್ರಿ ಹಾಗೂ ಆಕೆಯ ಸಹೋದರಿ ಛಾಯಾ ಎಂಬುವರ
ಪುತ್ರ ಪುನೀತ್ ಅವರೇ ತಮ್ಮ ನಡುವಿನ ಅನೈತಿಕ ಸಂಬಂಧ ಮುಚ್ಚಿಕೊಳ್ಳಲು ತಾಯಿ ಜೀವ ತೆಗೆದ ಪಾಪಿಗಳು.
ಸಂಬಂಧದಲ್ಲಿ ಅಣ್ಣ-ತಂಗಿಯರಾದ ಸಾವಿತ್ರಮ್ಮ ಅವರ ಪುತ್ರಿ ಹಾಗೂ ಹಾಗೂ ಪುನೀತ್ ನಡುವೆ ಅನೈತಿಕ ಸಂಬಂಧ ಬೆಳೆದಿತ್ತು.
ತಮ್ಮ ಸಂಬಂಧಕ್ಕೆ ಸಾವಿತ್ರಮ್ಮ ಅಡ್ಡಗಾಲು ಎಂಬುದನ್ನು ಮನಗಂಡ ಇಬ್ಬರು ಆಕೆಯನ್ನು ಉಸಿರುಗಟ್ಟಿಸಿ ಸಾಯಿಸಿ, ನಂತರ ಅದನ್ನು ಆಕಸ್ಮಿಕ ಸಾವು ಎಂದು ಬಿಂಬಿಸಲು ಹೋಗಿ ಇದೀಗ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.
ಹೊರ ಜೀವನದಲ್ಲಿ ಅಣ್ಣ-ತಂಗಿಯರಂತೆ ಇದ್ದ ಸಾವಿತ್ರಮ್ಮ ಪುತ್ರಿ ಹಾಗೂ ಪುನೀತನ ನಡುವೆ ಅದ್ಯಾವ ಕೆಟ್ಟ ಗಳಿಗೆಯಲ್ಲಿ ಅಕ್ರಮ ಸಂಬಂಧ ಬೆಳೆದಿತ್ತೋ. ಆ ದೇವರೆ ಬಲ್ಲ. ಪ್ರತಿನಿತ್ಯ ಸಾವಿತ್ರಮ್ಮ ಅವರ ಜತೆ ಮಲಗುತ್ತಿದ್ದ ಇಬ್ಬರು ತಡರಾತ್ರಿಯಲ್ಲಿ ಇಬ್ಬರು ಅಕ್ರಮ ಸಂಬಂಧ ಬೆಳೆಸುತ್ತಿದ್ದರು.
ಇವರಿಬ್ಬರ ವರ್ತನೆ ಬಗ್ಗೆ ಸಾವಿತ್ರಮ್ಮ ಹಾಗೂ ಛಾಯಾ ಅವರಿಗೆ ಅನುಮಾನ ಬಂದು, ಇಬ್ಬರಿಗೂ ಕೆಲ ನಿಬಂಧನೆಗಳನ್ನು ವಿಧಿಸಿದ್ದರು.
ಇದರಿಂದ ಕುಪಿತರಾದ ಇಬ್ಬರು ತಮ್ಮ ಅನೈತಿಕ ಸಂಬಂಧಕ್ಕೆ ಅಡ್ಡ ಬಂದ ಸಾವಿತ್ರಮ್ಮ ಅವರನ್ನು ಮುಗಿಸಲು ಸಂಚು ರೂಪಿಸಿದ್ದರು.
ಇದಕ್ಕಾಗಿ ಸ್ಕೆಚ್ ಹಾಕಿದ ಇಬ್ಬರು ಕಳೆದ ಡಿ.31 ರಂದು ಸಾವಿತ್ರಮ್ಮ ಅವರೊಂದಿಗೆ ನಿದ್ರಿಸುವ ನಾಟಕವಾಡಿ ತಡರಾತ್ರಿ ಇಬ್ಬರು ಸೇರಿ ಸಾವಿತ್ರಮ್ಮ ಅವರ ಕತ್ತುಹಿಸುಕಿ ಕೊಲೆ ಮಾಡಿ ನಂತರ ಆಕೆ ಕಾಲು ಜಾರಿ ಸಂಪಿಗೆ ಬಿದ್ದು ಮೃತಪಟ್ಟಿದ್ದಾರೆ ಎಂದು ಬಿಂಬಿಸಿದ್ದರು.
ಸಂಪಿಗೆ ಬಿದ್ದು ಸಾವಿತ್ರಮ್ಮ ಮೃತಪಟ್ಟಿದ್ದಾರೆ ಎಂದೇ ನಂಬಿದ್ದ ಸಂಬಂಕರು ಶವದ ಮರಣೋತ್ತರ ಪರೀಕ್ಷೆ ನಡೆಸದೆ ಸಂಸ್ಕಾರ ನೆರವೇರಿಸಿದ್ದರು.
ಎಲ್ಲ ತಾವು ಅಂದುಕೊಂಡಂತೆ ನಡೆದಿದೆ ಎಂದು ನೆಮ್ಮದಿಯಾಗಿದ್ದ ಸಾವಿತ್ರಮ್ಮ ಪುತ್ರಿ ಹಾಗೂ ಪುನೀತನ ಗ್ರಹಚಾರ ಕೈಕೊಟ್ಟಿತ್ತು.
ಇಬ್ಬರ ನಡವಳಿಕೆಯಿಂದ ಅನುಮಾನಗೊಂಡ ಕೊರಟಗೆರೆ ಪೊಲೀಸರು ಬಂಸಿ ತೀವ್ರ ವಿಚಾರಣೆಗೊಳಪಡಿಸಿದಾಗ ಸತ್ಯಾಂಶ ಹೊರಬಿದ್ದಿದೆ.
ಅಣ್ಣ-ತಂಗಿಯರಾಗಿದ್ದರೂ ಅನೈತಿಕ ಸಂಬಂಧ ಬೆಳೆಸಿ ತಮ್ಮ ಅಕ್ರಮ ಮುಚ್ಚಿ ಹಾಕಲು ಹೆತ್ತ ತಾಯಿಯನ್ನೇ ಕೊಂದ ತಪ್ಪಿಗಾಗಿ ಆರೋಪಿಗಳಿಬ್ಬರೂ ಶಿಕ್ಷೆ ಅನುಭವಿಸುವಂತಾಗಿದೆ.
