11 ಕೋಟಿ ರೂಪಾಯಿ ಮೌಲ್ಯದ ಬ್ರೌನ್‍ಶುಗರ್ ಪತ್ತೆ

Social Share

ಇಂಫಾಲ,ಜ.23- ದೇಶದ ಗಡಿ ರಾಜ್ಯವಾಗಿರುವ ಮಣಿಪುರದಲ್ಲಿ ಅತ್ಯಧಿಕ ಮೊತ್ತದ ಬ್ರೌನ್‍ಶುಗರ್ ಮಾದಕ ವಸ್ತುವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅಂದಾಜು 11 ಕೋಟಿ ರೂಪಾಯಿ ಮೌಲ್ಯದ ಎಂಟು ಕೆಜಿ ಮಾದಕ ದ್ರವ್ಯವನ್ನು ಇಂಪಾಲ ಜಿಲ್ಲೆಯಲ್ಲಿ ವಶಪಡಿಸಿಕೊಂಡು, ಇಬ್ಬರು ಡ್ರಗ್ ಪೆಡ್ಲರ್‍ಗಳನ್ನು ಬಂಧಿಸಲಾಗಿದೆ.

ನಿನ್ನೆ ರಾತ್ರಿ ಗ್ರೇಟರ್ ಇಂಫಾಲ್‍ನ ಕಿಯಾಮ್‍ಗೆಯ್ ಥೋಂಗ್‍ಖಾಂಗ್ ಪ್ರದೇಶದಿಂದ ಪೊಲೀಸರು ತಪಾಸಣೆ ನಡೆಸುವಾಗ ಎಂಟು ಪ್ಯಾಕೆಟ್‍ಗಳಲ್ಲಿ ಅಡಗಿಸಿಡಲಾಗಿದ್ದ ಮಾದಕ ವಸ್ತು ಪತ್ತೆಯಾಗಿದೆ. ಕಳ್ಳಸಾಗಣೆಯಲ್ಲಿ ಭಾಗಿಯಾಗಿರುವ ಇಬ್ಬರನ್ನು ಬಂಧಿಸಲಾಗಿದ್ದು, ಮಾದಕ ವಸ್ತುಗಳು ಎಲ್ಲಿಂದ ತರಲಾಗಿತ್ತು.

ಕಾಂಗ್ರೆಸ್ ಭ್ರಷ್ಟಾಚಾರದ ಗಂಗೋತ್ರಿ : ಸಿಎಂ ಬೊಮ್ಮಾಯಿ ವಾಗ್ದಾಳಿ

ಅದರ ಹಿಂದೆ ಯಾರಿದ್ದಾರೆ ಎಂಬ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕಳೆದ ವಾರ ಮಣಿಪುರದಲ್ಲಿ ಸುಮಾರು 10 ಕೆಜಿ ಯಾಬಾ ಮಾತ್ರೆಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಮಣಿಪುರದಲ್ಲಿ ಇತ್ತೀಚೆಗೆ ನಿರಂತರವಾಗಿ ಮಾದಕ ವಸ್ತುಗಳು ಪತ್ತೆಯಾಗುತ್ತಿವೆ ಎಂದು ಹೇಳಲಾಗಿದೆ.

Brown sugar, worth, Rs 11 crore ,seized,

Articles You Might Like

Share This Article