ಹೈದ್ರಾಬಾದ್‍ನಲ್ಲಿ ರಾರಾಜಿಸುತ್ತಿವೆ ಬಿ.ಎಲ್ ಸಂತೋಷ್ ವಿರುದ್ಧದ ಪೋಸ್ಟರ್

Social Share

ನವದೆಹಲಿ,ಮಾ.16- ಹೈದ್ರಾಬಾದ್‍ನಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಘೋಷಿತ ಅಪರಾ ಎಂಬ ಪೋಸ್ಟರ್‍ಗಳು ಎಲ್ಲೆಡೆ ರಾರಾಜಿಸುತ್ತಿವೆ.ದೆಹಲಿ ಮದ್ಯ ನೀತಿ ಪ್ರಕರಣದಲ್ಲಿ ಭಾರತ್ ರಾಷ್ಟ್ರ ಸಮಿತಿ ನಾಯಕಿ ಹಾಗೂ ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರ ಪುತ್ರಿ ಕೆ ಕವಿತಾ ಅವರನ್ನು ಜಾರಿ ನಿರ್ದೇಶನಾಲಯ ವಿಚಾರಣೆಗೆ ಒಳಪಡಿಸುವ ಮುನ್ನ ಹೈದರಾಬಾದ್‍ನಲ್ಲಿ ಇಂತಹ ಪೋಸ್ಟರ್‍ಗಳು ಕಂಡು ಬರುತ್ತಿವೆ.

ಹೈದರಾಬಾದ್‍ನ ಎರಡು ವಿಭಿನ್ನ ಸ್ಥಳಗಳಲ್ಲಿ ಪೋಸ್ಟರ್‍ಗಳು ಕಂಡುಬಂದಿವೆ. ಇದರ ಜತೆಗೆ ಕವಿತಾ ಅವರಿಗೆ ತಮ್ಮ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿರುವ ಬಿಆರ್‍ಎಸ್ ಪಕ್ಷದ ಶಾಸಕರು ಹಾಗೂ ಸಚಿವರು ಇಂದು ದೆಹಲಿಯಲ್ಲಿ ಬೃಹತ್ ಶಕ್ತಿ ಪ್ರದರ್ಶನ ನಡೆಸಿದರು.

ಪಕ್ಷದ ಅತ್ಯಂತ ಪ್ರಮುಖರಲ್ಲಿ ಒಬ್ಬರಾದ ಕೆ ಕವಿತಾ ಅವರೊಂದಿಗೆ ಒಗ್ಗಟ್ಟಿನಿಂದ ಬಿಆರ್‍ಎಸ್ ಸಚಿವರು ಮತ್ತು ಉನ್ನತ ನಾಯಕರು ರಾಷ್ಟ್ರ ರಾಜಧಾನಿಗೆ ಬಂದಿದ್ದಾರೆ.ಇದೇ ಪ್ರಕರಣದಲ್ಲಿ ಮಾರ್ಚ್ 11 ರಂದು ಜಾರಿ ನಿರ್ದೇಶನಾಲಯವು ಬಿಆರ್‍ಎಸ್ ನಾಯಕಿಯನ್ನು ಹಲವಾರು ಗಂಟೆಗಳ ಕಾಲ ವಿಚಾರಣೆಗೆ ಒಳಪಡಿಸಿತು. ಇಂದು ಮೂರನೇ ಬಾರಿಗೆ ಅವರಿಗೆ ಸಮನ್ಸï ನೀಡಲಾಗಿದೆ.

ಹೆಂಡತಿ, ಮಗು ಕೊಂದು ಆತ್ಮಹತ್ಯೆಗೆ ಶರಣಾದ ಟೆಕ್ಕಿ

ತೆಲಂಗಾಣ ವಿಧಾನ ಪರಿಷತ್ತಿನ ಸದಸ್ಯೆಯಾಗಿರುವ 44 ವರ್ಷದ ಕವಿತಾ ಅವರು ಈಗ ಹಿಂಪಡೆದಿರುವ ಮದ್ಯದ ನೀತಿಗೆ ಸಂಬಂಸಿದ ಹಣ ವರ್ಗಾವಣೆ ಪ್ರಕರಣದಲ್ಲಿ ಇಡಿ ಸಮನ್ಸ್‍ಗಳನ್ನು ಪ್ರಶ್ನಿಸಿ ತನ್ನ ವಿಚಾರಣೆಯ ವಿರುದ್ಧ ಸುಪ್ರೀಂ ಕೋರ್ಟ್‍ಗೆ ಮೊರೆ ಹೋಗಿದ್ದಾರೆ.

ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಪಿ ಎಸ್ ನರಸಿಂಹ ಅವರನ್ನೊಳಗೊಂಡ ಪೀಠವು ಮಾರ್ಚ್ 24 ರಂದು ಆಕೆಯ ಮನವಿಯನ್ನು ಆಲಿಸಲು ಒಪ್ಪಿಕೊಂಡಿದೆ.
ಕವಿತಾ ಅವರನ್ನು ಇಡಿ ಕಚೇರಿಗೆ ಕರೆಸಿರುವುದು ಸಂಪೂರ್ಣವಾಗಿ ಕಾನೂನಿಗೆ ವಿರುದ್ಧವಾಗಿದೆ ಎಂದು ಆರೋಪಿಸಿ ಕವಿತಾ ಅವರ ವಕೀಲರು ತುರ್ತು ವಿಚಾರಣೆಯನ್ನು ಕೋರಿದ್ದರು.

ಇಡಿ ಸಮನ್ಸ್ ಹಿಂದೆ ರಾಜಕೀಯ ಪಿತೂರಿ ಇದೆ ಎಂದು ಕೆ ಕವಿತಾ ಆರೋಪಿಸಿದ್ದಾರೆ. ತನಿಖಾ ಸಂಸ್ಥೆಯು ಭಾರತೀಯ ಜನತಾ ಪಕ್ಷದ ಅಂಗ ಸಂಸ್ಥೆಯಾಗಿದೆ ಎಂದು ಬಿಆರ್‍ಎಸ್ ಪಕ್ಷ ಆರೋಪಿಸಿದೆ.

ಗಮನಾರ್ಹವೆಂದರೆ, ದೆಹಲಿ ಅಬಕಾರಿ ನೀತಿಯನ್ನು ರೂಪಿಸುವಾಗ ದಕ್ಷಿಣ ರಾಜ್ಯಗಳತ್ತ ಒಲವು ತೋರಿದ ಆರೋಪದ ಮೇಲೆ ದೆಹಲಿಯ ಮಾಜಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ಇದೇ ಪ್ರಕರಣದಲ್ಲಿ ಇಡಿ ಬಂಸಿದೆ. ಸಿಬಿಐ ಪ್ರಕರಣದಲ್ಲಿ ಅವರ ಜಾಮೀನು ಅರ್ಜಿಯನ್ನು ಮಾರ್ಚ್ 21 ರಂದು ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆಗೆ ನಿಗದಿಪಡಿಸಲಾಗಿದೆ.

#BRS, #BJP, #posterwar, #intensifies, #ahead, #KKavitha, #questioning, #ED,

Articles You Might Like

Share This Article