ಬಿಎಸ್‍ವೈ ಮತ್ತಷ್ಟು ಆಪ್ತರ ಮೇಲೆ ಐಟಿ ಕಣ್ಣು..!

Spread the love

ಬೆಂಗಳೂರು,ಅ.8- ಆಪ್ತ ಸಹಾಯಕನ ಮೇಲೆ ಏಕಾಏಕಿ ದಾಳಿ ನಡೆಸಿರುವ ಆದಾಯ ತೆರಿಗೆ(ಐಟಿ) ಅಧಿಕಾರಿಗಳು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಆಪ್ತರ ಮೇಲೆ ಮತ್ತಷ್ಟು ದಾಳಿ ನಡೆಸಲು ಸಜ್ಜಾಗಿದ್ದಾರೆ. ಯಡಿಯೂರಪ್ಪ ಆಪ್ತ ಬಣದಲ್ಲಿ ಗುರುತಿಸಿ ಕೊಂಡಿದ್ದ ಪರಮಾಪ್ತರ ಮೇಲೆ ಸದ್ಯದಲ್ಲೇ ಐಟಿ ಅಧಿಕಾರಿಗಳು ಯಾವುದೇ ಕ್ಷಣದಲ್ಲೂ ದಾಳಿ ನಡೆಸುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.

ಅದರಲ್ಲೂ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ಒಡನಾಡಿಗಳಾಗಿ ರುವ ಗುತ್ತಿಗೆದಾರರು, ಉದ್ದಿಮೆದಾರರು, ನಿಗಮ ಮಂಡಳಿ ಅಧ್ಯಕ್ಷರು, ಸರ್ಕಾರಿ ಅಧಿಕಾರಿಗಳು, ಪಕ್ಷದ ಮುಖಂಡರು ಸೇರಿದಂತೆ ಮತ್ತಿತರ ಮೇಲೆ ಐಟಿ ಹದ್ದಿನ ಕಣ್ಣಿಟ್ಟಿದೆ. ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ಪತನವಾದ ನಂತರ ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿ ಯಾದ ಮೇಲೆ ಆಯಾಕಟ್ಟಿನಲ್ಲಿದ್ದ ಪ್ರಮುಖರ ವಹಿವಾಟುಗಳು, ಕಾಮಗಾರಿಗಳು, ಬೇರೆ ಬೇರೆ ಕಡೆ ಹೂಡಿಕೆ ಸೇರಿದಂತೆ ಮತ್ತಿತರ ಕಡೆ ಭಾರೀ ಪ್ರಮಾಣದ ಬಂಡವಾಳ ಹೂಡಿಕೆ ಮಾಡಿರುವುದನ್ನು ಆದಾಯ ತೆರಿಗೆ ವಿಭಾಗದ ಗುಪ್ತಚರ ಅಧಿಕಾರಿಗಳು ಪತ್ತೆ ಮಾಡಿದ್ದಾರೆ.

ಬೆಂಗಳೂರು ಸಮೀಪದ ಪ್ರಮುಖ ಜಿಲ್ಲೆಯೊಂದರ ನಾಯಕನಾಗಿ ಯಡಿಯೂರಪ್ಪ ಆಪ್ತರಾಗಿ ಪ್ರಸ್ತುತ ಪ್ರಮುಖ ನಿಗಮ ಮಂಡಳಿಯಲ್ಲಿ ಅಧ್ಯಕ್ಷರಾಗಿರುವ ನಾಯಕನ ಮೇಲೆ ಮನೆ, ಕಚೇರಿ, ಸಂಬಂಕರು, ವ್ಯಾಪಾರ-ವಹಿವಾಟಿನ ಬಗ್ಗೆ ಐಟಿ ಮಾಹಿತಿಯನ್ನು ಕಲೆ ಹಾಕಿದೆ.

ಸರ್ಕಾರಿ ನೌಕರರ ಸಂಘದಲ್ಲಿ ಪ್ರಮುಖ ಹುದ್ದೆಯಲ್ಲಿರುವವರು ಮೇಲೂ ಐಟಿ ಕಣ್ಣಿಟ್ಟಿದೆ. ಇನ್ನು ಬೆಂಗಳೂರು ಜಿಲ್ಲಾ ಪಂಚಾಯ್ತಿಯಲ್ಲಿ ಮುಖ್ಯ ಸ್ಥಾನದಲ್ಲಿದ್ದ ಹಾಗೂ ಯಡಿಯೂರಪ್ಪ ಕುಟುಂಬದ ಸಂಬಂಧಿಕರು ಆಗಿರುವ ಅವರ ಮೇಲೆಯೂ ಐಟಿ ದಾಳಿ ನಡೆಸುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.

ಬಿ.ವೈ.ವಿಜಯೇಂದ್ರ ಪರಮಾಪ್ತರಾಗಿ ಪಕ್ಷದಲ್ಲಿ ಪ್ರಮುಖ ಸ್ಥಾನ ಪಡೆದು ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ಆಕಾಂಕ್ಷಿಯಾಗಿರುವ ಯುವ ನಾಯಕನ ಮೇಲೂ ಐಟಿ ದಾಳಿ ನಡೆಸುವ ಸಾಧ್ಯತೆಯಿದೆ ಎಂದು ವಿಶ್ವಾಸನೀಯ ಮೂಲಗಳು ತಿಳಿಸಿವೆ.

ಅನೇಕರಿಗೆ ಸಂಕಷ್ಟ: ಇವರಲ್ಲದೆ ಯಡಿಯೂರಪ್ಪ ಅಧಿಕಾರ ಅವಧಿಯಲ್ಲಿ ಆಯಕಟ್ಟಿನಲ್ಲಿದ್ದ ನಿಗಮ ಮಂಡಳಿ ಅಧ್ಯಕ್ಷರು, ಗುತ್ತಿಗೆದಾರರು, ಪ್ರಮುಖ ಇಲಾಖೆಯ ಅಧಿಕಾರಿಗಳು ಭಾರೀ ಪ್ರಮಾಣದ ಅಕ್ರಮ ಎಸಗಿ ರುವುದನ್ನು ಐಟಿ ಪತ್ತೆ ಹಚ್ಚಿದೆ. ಪ್ರಮುಖವಾಗಿ ಲೋಕೋಪಯೋಗಿ, ಬೃಹತ್ ಮತ್ತು ಮಧ್ಯಮ ನೀರಾವರಿ, ಬೆಂಗಳೂರು ನಗರಾಭಿವೃದ್ಧಿ, ಬಿಡಿಎ ಸೇರಿದಂತೆ ಮತ್ತಿತರ ಕಡೆ ಬೇನಾಮಿಯಾಗಿ ಕಾಮಗಾರಿ ನಡೆಸಿದ್ದಾರೆ ಎನ್ನಲಾಗುತ್ತಿದೆ.

ಕೆಲವು ಕಡೆ ಕಾಮಗಾರಿಯನ್ನೇ ನಡೆಸದೆ ಬಿಲ್ ಪಾವತಿ ಮಾಡಿಕೊಂಡಿದ್ದಾರೆ ಎಂಬ ಆರೋಪವಿದೆ. ಕಾವೇರಿ, ಕೃಷ್ಣ, ತುಂಗಾಭದ್ರ, ಹೇಮಾವತಿ, ಕೃಷ್ಣಾ ಸೇರಿದಂತೆ ಪ್ರಮುಖ ಜಲಾಶಯಗಳ ನಾಲೆ ದುರಸ್ತಿ, ಕಾಲುವೆ ರಿಪೇರಿಯಲ್ಲಿ ಕಳಪೆ ಕಾಮಗಾರಿ ನಡೆ ನೂರಾರು ಕೋಟಿ ಅಕ್ರಮ ನಡೆಸಿದ್ದಾರೆ ಎನ್ನಲಾಗಿದೆ.

ಈಗಾಗಲೇ ಐಟಿ ಖೆಡ್ಡಾಕ್ಕೆ ಬಿದ್ದಿರುವ ಯಡಿಯೂರಪ್ಪ ಆಪ್ತ ಸಹಾಯಕ ಉಮೇಶ್ ನಿವಾಸದಲ್ಲಿ ವಶಪಡಿಸಿಕೊಂಡಿರುವ ದಾಖಲೆಗಳಲ್ಲಿ ಇವೆಲ್ಲವೂ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.

ಬಿಎಸ್‍ವೈ ಅಕಾರಾವಯಲ್ಲಿ ಬಿಜಾಪುರ ಮೂಲದ ಡಿ.ವೈ.ಉಪ್ಪಾರ್ ಭಾರೀ ಪ್ರಮಾಣದ ನೀರಾವರಿ ಕಾಮಗಾರಿ ನಡೆಸಿದ್ದಾರೆ. ನಿಯಮ್ನ ಉಲ್ಲಂಘಿಸಿ ಕಾಮಗಾರಿ ನಡೆಸಿರುವುದು ಗೊತ್ತಾಗಿದೆ. ಈ ಎಲ್ಲವನ್ನೂ ಪತ್ತೆಹಚ್ಚಿರುವ ಐಟಿ ಅಕಾರಿಗಳು ಬಿ.ಎಸ್.ಯಡಿಯೂರಪ್ಪ, ಬಿ.ವೈ.ವಿಜಯೇಂದ್ರ, ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಸೇರಿದಂತೆ ಅನೇಕರಿಗೆ ಶೀಘ್ರದಲ್ಲೇ ಖೆಡ್ಡಾ ತೋಡಿಸಲು ಸಜ್ಜಾಗಿದ್ದಾರೆ.

Facebook Comments