ಬೆಂಗಳೂರು,ಮಾ.7-ಹಾಲಿ ಕೆಲವು ಶಾಸಕರಿಗೆ ಟಿಕೆಟ್ ಕೈ ತಪ್ಪಲಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿರುವುದರಿಂದ ಆಕಾಂಕ್ಷಿಗಳಲ್ಲಿ ನಡುಕು ಉಂಟಾಗಿದೆ. ಬಿಜೆಪಿ ರಾಷ್ಟ್ರೀಯ ಸಂಸದೀಯ ಮಂಡಳಿ ಹಾಗೂ ಚುನಾವಣಾ ಸಮಿತಿಯ ಸದಸ್ಯರು ಆಗಿರುವ ಯಡಿಯೂರಪ್ಪ ಈ ಮಾತು ಹೇಳಿರುವುದು ಇದೀಗ ಟಿಕೆಟ್ ಯಾರಿಗೆ ಕೈತಪ್ಪಲಿದೆ ಎಂಬ ಚರ್ಚೆ ಬಿಜೆಪಿ ಪಾಳೆಯದಲ್ಲಿ ಆರಂಭವಾಗಿದೆ.
ಸಾಮಾನ್ಯವಾಗಿ ಯಡಿಯೂರಪ್ಪ ಮಾಹಿತಿ ಇಲ್ಲದೆ ಪ್ರಚಾರಕ್ಕಾಗಿ ಹೇಳುವಂತಹ ವ್ಯಕ್ತಿಯಲ್ಲ. ಏನೇ ಹೇಳಿದರೂ ಅದರ ಹಿಂದೆ ಸಾಕಷ್ಟು ಅಳೆದು ತೂಗಿ ಮಾಧ್ಯಮಗಳ ಮುಂದೆ ಹೇಳುವ ರಾಜಕಾರಣಿ.
ಇದೀಗ ಏಕಾಏಕಿ ಹಾಲಿ ನಾಲ್ವರಿಂದ ಆರು ಶಾಸಕರಿಗೆ ಟಿಕೆಟ್ ಕೈ ತಪ್ಪುವ ಸಾಧ್ಯತೆ ಇದೆ ಎಂದು ಹೇಳಿರುವುದು ಚರ್ಚೆಗೆ ಗ್ರಾಸವಾಗಿದ್ದು, ಆ ಶಾಸಕರು ಯಾರು ಎಂಬ ಯಕ್ಷ ಪ್ರಶ್ನೆ ಹಲವರನ್ನು ಕಾಡುತ್ತಿದೆ. ಬಿಜೆಪಿಯಲ್ಲಿ 75 ವರ್ಷ ದಾಟಿದವರಿಗೆ ಟಿಕೆಟ್ ನೀಡುವ ಪರಿಪಾಠವಿಲ್ಲ. ಮಾರ್ಗಮಂಡಳಿಗೆ ಬ್ರೇಕ್ ಹಾಕಿ ಸಕ್ರಿಯ ರಾಜಕಾರಣದಿಂದ ದೂರ ಇಡುವ ಪ್ರಯತ್ನ ಇದಾಗಿರುತ್ತದೆ.
ಮಾಡಾಳ್ ಮಿಸ್ಸಿಂಗ್ : ಹುಡುಕಿಕೊಡುವಂತೆ ಕಾಂಗ್ರೆಸ್ ಪೋಸ್ಟರ್ ಪಾಲಿಟಿಕ್ಸ್
ಆಡಳಿತಾರೂಢ ಬಿಜೆಪಿಯ ಕೆಲವು ಶಾಸಕರು ಕ್ಷೇತ್ರಗಳಲ್ಲಿ ಆಡಳಿತ ವಿರೋ ಅಲೆ ಎದುರಿಸುತ್ತಿದ್ದು, ಸೋಲುವ ಸಂಭವವಿದೆ ಎಂದು ಪಕ್ಷದ ಆಂತರಿಕ ಸಮೀಕ್ಷೆಗಳು ಹೇಳಿವೆ. ಹೀಗಾಗಿ ಇಂಥ ಶಾಸಕರಿಗೆ ಟಿಕೆಟ್ ನೀಡುವ ಬದಲು ಹೊಸ ಮುಖಗಳನ್ನು ಕಣಕ್ಕಿಳಿಸುವ ಲೆಕ್ಕಾಚಾರದಲ್ಲಿ ಬಿಜೆಪಿ ಇದೆ.
ಯಡಿಯೂರಪ್ಪ ಹೇಳಿರುವುದು ನಿಜವೇ. ಆದರೆ ಪಕ್ಷದಿಂದ ದೂರ ಸರಿಯಲು ತೀರ್ಮಾನಿಸಿರುವ ಹಾಗೂ ಸೋಲಿನ ಭೀತಿಯಲ್ಲಿರುವ ಶಾಸಕರಿಗೆ ಕೋಕ್ ನೀಡಿ ಹೊಸ ಮುಖಗಳನ್ನು ಕಣಕ್ಕಿಳಿಸಲು ತೀರ್ಮಾನಿಸಲಾಗಿದೆ ಎಂದು ತಿಳಿದುಬಂದಿದೆ.
ಶಾಸಕ ಮಾಡಾಳ್ ವಿರೂಪಾಕ್ಷಪ್ಪಗೆ ಬಿಗ್ ರಿಲೀಫ್, ಜಾಮೀನು ಮಂಜೂರು
70 ವರ್ಷ ದಾಟಿದವರಿಗೆ ಟಿಕೆಟ್ ಇಲ್ಲ ಎಂಬುದೇ ಮಾನದಂಡವಾದರೆ ವಿಧಾನಸಭೆಯ ಮೊದಲ ಸಾಲಿನಲ್ಲಿ ಕುಳಿತುಕೊಳ್ಳುವ ಬಹುತೇಕರಿಗೆ ಟಿಕೆಟ್ ಕೈತಪ್ಪುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಇದೀಗ ಯಡಿಯೂರಪ್ಪ ಸಿಡಿಸಿರುವ ಬಾಂಬ್ ಯಾರಿಗೆ ಮುಳುವಾಗಲಿದೆ ಎಂಬುದೇ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.
bs yediyurappa, BJP, MLAs, Election,