ಕಾಂಗ್ರೆಸ್‍ ಆರೋಪದಲ್ಲಿ ಎಳ್ಳಷ್ಟು ಸತ್ಯಾಂಶವಿಲ್ಲ: ಬಿಎಸ್‌ವೈ

Social Share

ಶಿವಮೊಗ್ಗ,ನ.18- ಮತದಾರರ ಖಾಸಗಿ ಡೇಟಾವನ್ನು ಕಲೆ ಹಾಕಲಾಗಿದೆ ಎಂಬ ಪ್ರತಿಪಕ್ಷ ಕಾಂಗ್ರೆಸ್‍ನವರ ಆರೋಪದಲ್ಲಿ ಎಳ್ಳಷ್ಟು ಸತ್ಯಾಂಶವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸೋಲುವ ಹತಾಶೆಯಿಂದ ಇಂತಹ ಸುಳ್ಳು ಆರೋಪಗಳನ್ನು ಮಾಡುತ್ತಿದೆ. ಆಧಾರವಿಲ್ಲದೆ ಮಾತನಾಡುವವರ ಬಗ್ಗೆ ಚರ್ಚೆ ಮಾಡುವುದೇ ಅಪ್ರಸ್ತುತ ಎಂದು ಹೇಳಿದರು.

ಸೋಲುವ ಭೀತಿಯಿಂದ ಕಾಂಗ್ರೆಸ್ ಜನರ ಗಮನವನ್ನು ಬೇರೆಡೆ ಸೆಳೆಯಲು ಸುಳ್ಳು ಹೇಳುತ್ತಿದ್ದಾರೆ. ದಾಖಲೆಗಳಿದ್ದರೆ ಅವರು ಸಂಬಂಧಪಟ್ಟವರಿಗೆ ದೂರು ನೀಡಲಿ. ತನಿಖೆ ನಡೆದ ನಂತರ ಸತ್ಯಾಂಶ ಗೊತ್ತಾಗುತ್ತದೆ. ಅಲ್ಲಿಯ ತನಕ ಬೊಬ್ಬೆ ಹೊಡೆಯುವುದು ಏಕೆ ಎಂದು ಪ್ರಶ್ನಿಸಿದರು.

ಕೆಲಸ ಕೊಡಿಸುವ ನೆಪದಲ್ಲಿ ಬಾಲಕಿ ಮೇಲೆ ನಿರಂತರ ಅತ್ಯಾಚಾರ

ಮತದಾರರ ಪಟ್ಟಿ ಪರಿಷ್ಕರಣೆಗೆ ಅನುಮತಿ ಕೊಟ್ಟಿದ್ದೇ ಸಮ್ಮಿಶ್ರ ಸರ್ಕಾರ. ಆಗ ಈ ಸಂಸ್ಥೆ ಚೆನ್ನಾಗಿ ಇತ್ತು. ಈಗ ಚೆನ್ನಾಗಿಲ್ಲ ಎಂದರೆ ಹೇಗೆ. ಸತ್ಯಾಂಶ ಹೊರಬೇಕೆಂದೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತನಿಖೆ ಸೂಚನೆ ಕೊಟ್ಟಿದ್ದಾರೆ ಎಂದು ತಿಳಿಸಿದರು.

ನಾನು ಈಗಲೂ ಸ್ಪಷ್ಟಪಡಿಸುತ್ತೇನೆ. ಮತದಾರರ ಪರಿಷ್ಕøತ ಪಟ್ಟಿಯಲ್ಲಿ ಯಾವುದೇ ರೀತಿಯ ಅಕ್ರಮ ನಡೆಯಲು ಸಾಧ್ಯವೇ ಇಲ್ಲ. ಆರೋಪಕ್ಕಾಗಿ ಆರೋಪ ಮಾಡುವುದು ಕಾಂಗ್ರೆಸ್‍ನ ಛಾಳಿ. ಧಿಅಕಾರಕ್ಕೆ ಬರುವುದಿಲ್ಲ ಎಂದು ಗೊತ್ತಿದ್ದರೂ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಕಾಂಗ್ರೆಸ್‍ನ ಈ ಆರೋಪ ಹೊಸದೇನಲ್ಲ. ಪ್ರತಿ ಚುನಾವಣೆ ಬಂದಾಗ ಇಂತಹ ಆರೋಪಗಳನ್ನು ಮಾಡುತ್ತಲೇ ಇದೆ. ಆದರೂ ಮತದಾರರು ಮಾತ್ರ ಇವರಿಗೆ ಕವಡೆಕಾಸಿನ ಕಿಮ್ಮತ್ತಿನ ಬೆಲೆ ಕೊಟ್ಟಿಲ್ಲ.ಸುಳ್ಳು ಸುದ್ದಿಗಳನ್ನು ಹಬ್ಬಿಸಿ ಎಷ್ಟು ದಿನ ರಾಜಕಾರಣ ಮಾಡುತ್ತೀರಿ ಎಂದು ಪ್ರಶ್ನಿಸಿದರು.

ಭಾರತದ ಪ್ರಥಮ ಖಾಸಗಿ ರಾಕೆಟ್‌ನ್ನು ಯಶಸ್ವಿಯಾಗಿ ನಬಕ್ಕೆ ಸೇರಿಸಿದ ಇಸ್ರೋ

ಬಿಜೆಪಿ ನಾಯಕರೆಲ್ಲರೂ ಒಗ್ಗಟ್ಟಾಗಿ ಪಕ್ಷ ಸಂಘಟನೆಯತ್ತ ಕೆಲಸ ಹರಿಸಿದ್ದೇವೆ. ನಮ್ಮ ಗುರಿಯಂತೆ ಮಿಷನ್-150 ತಲುಪಬೇಕು. ಅದಕ್ಕಾಗಿ ಎಲ್ಲರೂ ಪರಿಶ್ರಮದಿಂದ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.

bsyediyurappa, #Congress, #allegations, #voter, #data,

Articles You Might Like

Share This Article