ಬಿಎಸ್‌ವೈ ಹೆಲಿಕಾಪ್ಟರ್ ಲ್ಯಾಂಡಿಂಗ್ ವೇಳೆ ಸಮಸ್ಯೆ

Social Share

ಬೆಂಗಳೂರು,ಮಾ.6- ವಿಜಯ ಸಂಕಲ್ಪ ಯಾತ್ರೆಗೆ ಆಗಮಿಸಿದ್ದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿದ್ದ ಹೆಲಿಕಾಪ್ಟರ್ ಲ್ಯಾಂಡಿಂಗ್ ವೇಳೆ ಕೆಲವು ಸಮಸ್ಯೆಗಳು ಉಂಟಾಗಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ಕಲಬುರಗಿ ಜಿಲ್ಲೆ ಜೇವರ್ಗಿಯಲ್ಲಿ ಬಿಜೆಪಿಯಿಂದ ವತಿಯಿಂದ ವಿಜಯ ಸಂಕಲ್ಪ ಯಾತ್ರೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮಕ್ಕೆ ಮಾಜಿ ಸಿಎಂ ಯಡಿಯೂರಪ್ಪ ವಿಶೇಷ ಹೆಲಿಕಾಪ್ಟರ್‍ನಲ್ಲಿ ಜೇವರ್ಗಿ ಪಟ್ಟಣದಲ್ಲಿ ನಿರ್ಮಿಸಿದ್ದ ಹೆಲಿಪ್ಯಾಡ್‍ಗೆ ಆಗಮಿಸಿದರು.

ನಿಷ್ಕ್ರಿಯಗೊಂಡ ಉಪಗ್ರಹದ ಮರು ಪ್ರಯೋಗಕ್ಕೆ ಇಸ್ರೋ ಸಿದ್ಧತೆ

ಹೆಲಿಕಾಪ್ಟರ್ ಲ್ಯಾಂಡಿಂಗ್ ವೇಳೆ ಪ್ರೊಫೈಲರ್ ಸುತ್ತುವಿಕೆಯಿಂದ ಉಂಟಾದ ಭಾರೀ ಗಾಳಿಯಿಂದ ನೆಲಭಾಗದಲ್ಲಿದ್ದ ಪ್ಲಾಸ್ಟಿಕ್ , ತ್ಯಾಜ್ಯ ಹಾಗೂ ಧೂಳು ಮೇಲೆದ್ದು ಅಸ್ಪಷ್ಟ ವಾತಾವರಣ ನಿರ್ಮಾಣವಾಗಿತ್ತು. ಈ ಹಂತದಲ್ಲಿ ಭೂಮಿ ಮತ್ತು ಹೆಲಿಕಾಪ್ಟರ್ ನಡುವೆ ಕೆಲವು ಅಡಿಗಳ ಅಂತರವಿದ್ದು, ಸುರಕ್ಷಿತ ಲ್ಯಾಂಡಿಂಗ್‍ಗೆ ಅಡಚಣೆ ಎದುರಾಗಿತ್ತು.

65 ಕಾನೂನುಗಳನ್ನು ರದ್ದುಗೊಳಿಸಲು ಸಂಸತ್‍ನಲ್ಲಿ ಮಸೂದೆ ಮಂಡನೆ

ಪೈಲೆಟ್ ಹೆಲಿಕಾಪ್ಟರ್‍ನ್ನು ಮತ್ತೆ ಮೇಲಕ್ಕೇರಿಸಿ ಸಂಭಾವನೀಯ ಅಪಾಯವನ್ನು ತಪ್ಪಿಸಿದ್ದಾರೆ. ಗಣ್ಯರ ಇಳಿಯುವಿಕೆಗೆ ನಿರ್ಮಿಸಲಾದ ಹೆಲಿಪ್ಯಾಡ್‍ನಲ್ಲಿ ಸ್ವಚ್ಛತೆ ಮತ್ತು ಸುರಕ್ಷತೆ ವಾತಾವರಣ ನಿರ್ಮಿಸದೆ ಇರುವುದು ಚರ್ಚೆಗೆ ಗ್ರಾಸವಾಗಿದೆ.

BS Yediyurappa, landing, helicopter, Kalaburagi,

Articles You Might Like

Share This Article