Saturday, September 23, 2023
Homeಇದೀಗ ಬಂದ ಸುದ್ದಿಸರ್ಕಾರದ ವಿರುದ್ಧ ಗುಡುಗಿದ ಬಿಎಸ್‍ವೈ

ಸರ್ಕಾರದ ವಿರುದ್ಧ ಗುಡುಗಿದ ಬಿಎಸ್‍ವೈ

- Advertisement -

ಬೆಂಗಳೂರು,ಸೆ.17- ರಾಜ್ಯದ ಕಾವೇರಿ ಜಲಾನಯನ ಪ್ರದೇಶದ ಜಿಲ್ಲೆಗಳಲ್ಲಿ ಮುಂದೆ ಕುಡಿಯುವ ನೀರಿಗೂ ತತ್ವಾರ ಉಂಟಾಗಲಿದೆ ಎಂದು ರಾಜ್ಯ ಸರ್ಕಾರಕ್ಕೆ ತಿಳಿದಿದೆ. ಆದರೂ ತಮಿಳುನಾಡಿನ ಡಿಎಂಕೆ ಸರ್ಕಾರವನ್ನು ತೃಪ್ತಿಪಡಿಸಲು ನೀರು ಬಿಟ್ಟಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಗುಡುಗಿದ್ದಾರೆ.

ಸಂಘಟನಾ ಪ್ರವಾಸಕ್ಕೆ ಚಾಲನೆ ನೀಡುವ ನಿಮಿತ್ತ ಮುಳುಬಾಗಿಲು ತಾಲೂಕಿನ ಕುರುಡುಮಲೆ ಮಹಾಗಣಪತಿ ದೇವಸ್ಥಾನಕ್ಕೆ ತೆರಳುವ ಮುನ್ನ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಜಲಾಶಯಗಳಲ್ಲಿ ನೀರಿಲ್ಲ, ಕುಡಿಯುವ ನೀರಿಗೆ ಹಾಹಾಕಾರವಾಗಲಿದೆ. ನೀರು ಬಿಡಬೇಡಿ ಎಂದು ರೈತರು ಒತ್ತಾಯಿಸುತ್ತಿದ್ದಾರೆ, ನಾವೂ ಕೂಡ ಹೇಳಿದ್ದೇವೆ. ಆದರೂ ಸಹ ತಮಿಳುನಾಡಿನ ಮಿತ್ರಪಕ್ಷವನ್ನು ಮೆಚ್ಚಿಸಲು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ನೀರು ಬಿಟ್ಟಿದ್ದಾರೆ. ರಾಜ್ಯ ಸರ್ಕಾರದ ಈ ನಿಲುವನ್ನು ನಾನು ಖಂಡಿಸುತ್ತೇನೆ ಎಂದರು.

- Advertisement -

ಈಗಾಗಲೇ ಹತ್ತಾರು ಬಾರಿ ಹೇಳಿದ್ದೇವೆ, ನಮಗೆ ಕುಡಿಯಲು ನೀರಿಲ್ಲ, ಜಲಾಶಯಗಳು ಖಾಲಿಯಾಗಿವೆ. ಸುಪ್ರೀಂ ಕೋರ್ಟ್‍ಗೆ ಅರ್ಜಿ ಸಲ್ಲಿಸಿ ಸಮರ್ಥ ವಾದ ಮಂಡಿಸಲು ಆಗ್ರಹಿಸಿದ್ದೇವೆ. ನೀರು ಬಿಡುವುದಿಲ್ಲವೆಂದು ಹೇಳುತ್ತಿದ್ದು, ಕಾರ್ಯರೂಪಕ್ಕೆ ತರುತ್ತಿಲ್ಲ. ಇಂಥ ಪರಿಸ್ಥಿತಿಯಲ್ಲಿ ನೀರು ಬಿಡುವುದು ಅವರಿಗೆ ಎಷ್ಟರ ಮಟ್ಟಿಗೆ ಶೋಭೆ ತರುತ್ತದೆ ಎಂಬುದು ಅರ್ಥವಾಗುತ್ತಿಲ್ಲ ಎಂದು ಸಿಡಿಮಿಡಿಗೊಂಡರು.

ಚೈತ್ರಾ ಕುಂದಾಪುರ ಆರೋಗ್ಯ ಚೇತರಿಕೆ: ಯಾವುದೇ ಕ್ಷಣದಲ್ಲಾದರೂ ಡಿಸ್ಚಾರ್ಜ್

ರಾಜ್ಯ ಸರ್ಕಾರದ ಈವರೆಗಿನ ನಡೆ-ನುಡಿಯನ್ನು ಜನರೂ ಗಮನಿಸುತ್ತಿದ್ದಾರೆ. ರಾಜ್ಯದ ಹಿತ ಕಾಪಾಡುವಲ್ಲಿ ವಿಫಲ, ಐಎನ್ ಡಿಐಎ ಒಕ್ಕೂಟದ ಪರ ನಿಲುವು. ಇದೆಲ್ಲವನ್ನೂ ಪ್ರತಿಭಟಿಸುವುದು ನಮ್ಮ ಕರ್ತವ್ಯ. ಒತ್ತಾಯ, ಪ್ರತಿಭಟನೆಗೆ ಸರ್ಕಾರ ಈಗಲೂ ಎಚ್ಚೆತ್ತಿಲ್ಲ, ಈಗಲೂ ತಮಿಳುನಾಡಿಗೆ ನೀರು ಬಿಡುತ್ತಿದ್ದಾರೆ. ಒಂದು ಹನಿ ನೀರು ಬಿಡದೇ ರಾಜ್ಯದ ಹಿತರಕ್ಷಣೆ ಮಾಡಬೇಕೆಂಬ ಕೂಗು ನಿರ್ಲಕ್ಷಿಸಿದೆ ಎಂದು ವಾಗ್ದಾಳಿ ಮಾಡಿದರು.

ಹಬ್ಬದ ಬಳಿಕ ರಾಜ್ಯದಾದ್ಯಂತ ಪ್ರವಾಸ:
ಪಕ್ಷ ಬಲಪಡಿಸಲು, ಕಾಂಗ್ರೆಸ್ ಸರ್ಕಾರದ ವೈಫಲ್ಯತೆಗಳನ್ನು ಜನತೆಗೆ ತಿಳಿಸುವ ದೃಷ್ಟಿಯಿಂದ ನಾವೆಲ್ಲ ಒಟ್ಟಾಗಿ ಪ್ರವಾಸ ಮಾಡಲಿದ್ದು, ಕುರುಡುಮಲೆ ಗಣಪನ ದರ್ಶನ, ಆಶೀರ್ವಾದ ಪಡೆದು ಅಲ್ಲಿಂದ ನಾಡಿನ ಉದ್ದಗಲಕ್ಕೂ ಪ್ರವಾಸ ಶುರು ಮಾಡಲಿದ್ದೇವೆ. ಗಣಪತಿ ಹಬ್ಬದ ನಂತರ ಪ್ರವಾಸ ಮಾಡುವಂತೆ ಎಲ್ಲರೂ ಅಭಿಪ್ರಾಯಪಟ್ಟಿದ್ದಾರೆ. ಇವತ್ತು ದೇವರ ದರ್ಶನ ಪಡೆದು ವಾಪಸ್ಸಾಗಲಿದ್ದು, ಹಬ್ಬದ ನಂತರ ಪ್ರವಾಸ ಆರಂಭಿಸಲಿದ್ದೇವೆ ಎಂದು ಸ್ಪಷ್ಟಪಡಿಸಿದರು.

ಬರಗಾಲ ಸಮರ್ಪಕ ನಿರ್ವಹಣೆಯಲ್ಲಿ ಸರ್ಕಾರ ಮುಗ್ಗರಿಸಿದೆ. ವಿದ್ಯುತ್ ಅಭಾವ ಉಲ್ಬಣಿಸಿದೆ. ರೈತರು ಸೇರಿ ನಾಡಿನ ಏಳಿಗೆಯನ್ನು ನಿರ್ಲಕ್ಷಿಸಿದೆ. ಕಾವೇರಿ ಜಲಾನಯನ ಪ್ರದೇಶದ ಜಿಲ್ಲೆಗಳಲ್ಲಿ ಜನ ಜಾಗೃತಿ ಯಾತ್ರೆ ಕೈಗೊಳ್ಳಲು ನಿರ್ಧರಿಸಿದ್ದೇವೆ. ರಾಜ್ಯ ಸರ್ಕಾರದ ವೈಫಲ್ಯಗಳನ್ನು ಪ್ರವಾಸದ ವೇಳೆ ಜನರ ಮುಂದಿಡುತ್ತೇವೆ ಎಂದು ಯಡಿಯೂರಪ್ಪ ಹೇಳಿದರು.

ವಾರದಲ್ಲಿ ದೆಹಲಿಗೆ ಸರ್ವಪಕ್ಷ ನಿಯೋಗ: ಸಿದ್ದರಾಮಯ್ಯ

ಶುಭ ಹಾರೈಕೆ: ನಾಡಿನ ಎಲ್ಲರಿಗೂ ಗೌರಿ ಗಣೇಶ ಹಬ್ಬದ ಶುಭಾಶಯ ಕೋರುತ್ತೇನೆ. ಕುರುಡುಮಲೆ ಗಣಪತಿ ದೇವಸ್ಥಾನದಲ್ಲಿ ದರ್ಶನ ಮಾಡಲು ನಾವೆಲ್ಲ ಒಟ್ಟಾಗಿ ಹೋಗುತ್ತಿದ್ದೇವೆ. ಇವತ್ತು ನಮ್ಮೆಲ್ಲರ ಪ್ರೀತಿಯ ನಾಯಕ, ದೇಶದ ನೆಚ್ಚಿನ ಪ್ರಧಾನಿಗಳಾದ ನರೇಂದ್ರ ಮೋದಿಯವರ ಹುಟ್ಟುಹಬ್ಬ ಅವರಿಗೂ ಶುಭ ಕೋರುವೆ. ಮೋದಿಯವರ ಆರೋಗ್ಯ ವೃದ್ಧಿಸಲಿ, ಅವರು ಮತ್ತೆ ಈ ದೇಶದ ಪ್ರಧಾನಿಯಾಗಲಿ ಎಂದು ಪ್ರಾರ್ಥಿಸಲು ಕುರುಡುಮಲೆ ಮಹಾಗಣಪತಿ ದೇವಸ್ಥಾನಕ್ಕೆ ಹೋಗುತ್ತಿರುವೆ ಎಂದು ಬಿಎಸ್‍ವೈ ತಿಳಿಸಿದರು.

bsyediyurappa, #tamilnadu, #cauverywater, #congressgovt,

- Advertisement -
RELATED ARTICLES
- Advertisment -

Most Popular