ಪಾಕ್ ಗಡಿಯಲ್ಲಿ ಮತ್ತಷ್ಟು ಹೆಚ್ಚುತ್ತಿದೆ ಕಳ್ಳಸಾಗಣೆಕೆ

Social Share

ಜಮ್ಮು, ನ.15 -ನೆರೆಯ ಪಾಕಿಸ್ತಾನದಿಂದ ಅಂತಾರಾಷ್ಟ್ರೀಯ ಗಡಿಯಲ್ಲಿ ಡ್ರೋನ್ ಮೂಲಕ ಕಳ್ಳಸಾಗಣೆಕೆ ಹೆಚ್ಚುತ್ತಿರುವ ಬಗ್ಗೆ ಸೇರಿದಂತೆ ಭದ್ರತಾ ಪರಿಸ್ಥಿತಿಯನ್ನು ಪಶ್ಚಿಮ ಕಮಾಂಡ್‍ನ ಬಿಎಸ್‍ಎಫ್ ಹೆಚ್ಚುವರಿ ಮಹಾನಿರ್ದೇಶಕ ಪಿ ವಿ ರಾಮ ಶಾಸ್ತ್ರಿ ಪರಿಶೀಲಿಸಿರು.

ಮೂರು ದಿನಗಳ ಭೇಟಿಗಾಗಿ ಚಂಡೀಗಢದಿಂದ ಜಮ್ಮುವಿಗೆ ಆಗಮಿಸಿದ ಶಾಸ್ತ್ರಿ ಅವರನ್ನು ಗಡಿ ಭದ್ರತಾ ಪಡೆಯ ಇನ್‍ಸ್ಪೆಕ್ಟರ್ ಜನರಲ್ ಜಮ್ಮು ಫ್ರಾಂಟಿಯರ್ ಡಿ ಕೆ ಬೂರಾ ನೇತೃತ್ವದ ಉನ್ನತ ಅಧಿಕಾರಿಗಳು ಸ್ವಾಗತಿಸಿದರು.
ಬೂರಾ ಅವರು ಗುಪ್ತಚರ ಭದ್ರತೆ ಸೇರಿದಂತೆ ನಿರ್ಣಾಯಕ ಅಂಶಗಳ ಕುರಿತು ಹೆಚ್ಚುವರಿ ಮಹಾನಿರ್ದೇಶಕರಿಗೆ ಮಾಹಿತಿ ನೀಡಿದರು ಎಂದು ಬಿಎಸ್‍ಎಫ್ ಅಧಿಕಾರಿಗಳು ತಿಳಿಸಿದ್ದಾರೆ.

ವಿಶ್ವಶ್ರೇಷ್ಠ ತಂಡದಲ್ಲಿ ಕೊಹ್ಲಿ, ಸೂರ್ಯಕುಮಾರ್ ಯಾದವ್‍ಗೆ ಸ್ಥಾನ

ಬಿಎಸ್‍ಎಫ್ ಬೆಟಾಲಿಯನ್‍ಗಳ ನಿಯೋಜನೆ ಮಾದರಿ ಮತ್ತು ಗಡಿಯಲ್ಲಿ ದೃಢವಾದ ಪ್ರಾಬಲ್ಯದ ಅಂಶಗಳನ್ನು ಒಳಗೊಂಡ ಪ್ರದೇಶದ ಸಾಮಾನ್ಯ ಭದ್ರತಾ ಸನ್ನಿವೇಶವನ್ನು ವಿವರಿಸಿದ್ದಾರೆ. ಸುರಂಗ, ಡ್ರೋನ್ ಮೂಲಕ ದೇಶ ವಿರೋಧಿ ಕೃತ್ಯಗಳು,ಮಾದಕವಸ್ತು ,ಶಸ್ತ್ರಾಸ ಕಳ್ಳಸಾಗಣೆ ಸೇರಿದಂತೆ ಬಿಎಸ್‍ಎಫ್ ಎದುರಿಸುತ್ತಿರುವ ಸವಾಲುಗಳ ಬಗ್ಗೆ ವಿವರವಾಗಿ ಚರ್ಚಿಸಲಾಗಿದೆ.

ಶಾಸ್ತ್ರಿ ಅವರು ಜಮ್ಮುನಲ್ಲಿರುವ ರಾಜಭವನದಲ್ಲಿ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರನ್ನು ಭೇಟಿ ಮಾಡಿದರು.ಇದೇ ವೇಳೆ ಶೈಕ್ಷಣಿಕ ಮತ್ತು ಕ್ರೀಡೆಯಲ್ಲಿ ಉತ್ತಮ ಸಾಧನೆ ಮಾಡಿದ ಪಾಲೂರಿನ ಬಿಎಸ್‍ಎಫ್ ಹಿರಿಯ ಮಾಧ್ಯಮಿಕ ಮತ್ತು ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳನ್ನು ಎಡಿಜಿ ಸನ್ಮಾನಿಸಿ ಗೌರವಿಸಿದರು.

ಕೆಎಸ್‌ಆರ್‌ಟಿಸಿ ನೌಕರರಿಗೆ ಒಂದು ಕೋಟಿ ಅಪಘಾತ ವಿಮೆ

ಗಡಿ ಪ್ರದೇಶ, ಗಡಿಭಾಗದ ಕ್ಯಾಂಪಸ್‍ಗಳು ಮತ್ತು ಸೇನಾ ಕಚೇರಿಗಳಿಗೆ ಭೇಟಿ ನೀಡಿ ಯೋಧರನ್ನು ಹುರಿದುಂಬಿಸಿದ್ದಾರೆ.

Articles You Might Like

Share This Article