ಜಮ್ಮು, ಆ.27- ಇಂದು ಮುಂಜಾನೆ ಗಡಿ ಭದ್ರತಾ ಪಡೆ (ಬಿಎಸ್ಎಫ್) ಇಲ್ಲಿನ ಅಂತರರಾಷ್ಟ್ರೀಯ ಗಡಿಯಲ್ಲಿ ಪಾಕಿಸ್ತಾನಿ ನುಸುಳುಕೊರನನ್ನು ಬಂಧಿಸಿದೆ. ಪಾಕ್‍ನ ಸಿಯಾಲ್ಕೋಟನ್ ನಿವಾಸಿ ಮೊಹಮ್ಮದ್ ಶಬಾದ್ (45) ಗಡಿಯಾಚೆಯಿಂದ ಅರ್ನಿಯಾ ಸೆಕ್ಟರ್‍ನಲ್ಲಿ ಭಾರತ ಪ್ರದೇಶದೊಳಗೆ ನುಸುಳಲು ಪ್ರಯತ್ನಿಸುತ್ತಿದ್ದಾಗ ಬಿಎಸ್ಎಫ್ ಸಿಬ್ಬಂದಿ ಗಮನಿಸಿ ಎಚ್ಚರಿಕೆಯ ಗುಂಡುಗಳನ್ನು ಹಾರಿಸಿದರು ನಂತರ ಆತನನ್ನು ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ.
ಅತನ ಬಳಿ ಯಾವುದೇ ದೋಷಾರೋಪಣೆಯ ವಸ್ತು ಕಂಡುಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆಗಸ್ಟ್ 25 ರಂದುಸಾಂಬಾ ಜಿಲ್ಲಾಯ ಪಾಕಿಸ್ತಾನ ಕಡೆಯಿಂದ ಒಳನುಸುಳಿದ ವ್ಯಕ್ತಿ ಬಳಿ ಎಂಟು ಕೆಜಿ ಮಾದಕ ಹೆರಾಯಿನ್ ಅನ್ನು ವಶಪಡಿಸಿಕೊಂಡು ಪ್ರಮುಖವಾಗಿ ಮಾದಕ ವಸ್ತು ಕಳ್ಳಸಾಗಣೆ ಪ್ರಯತ್ನವನ್ನು ವಿಫಲಗೊಳಿಸಿತ್ತು