ಪಾಕ್ ನಿಂದ ಹಾರಿ ಬಂದ ಡ್ರೋಣ್ ಹೊಡೆದುರುಳಿಸಿದ ಬಿಎಸ್‍ಎಫ್

Social Share

ನವದೆಹಲಿ ,ಫೆ.9- ಪಂಜಾಬ್‍ನ ಗಡಿಯಲ್ಲಿ ಪಾಕಿಸ್ತಾನ ಕಡೆಯಿಂದ ಬಂದ ಡ್ರೋಣ್ ಹೊಡೆದುರುಳಿಸುವಲ್ಲಿ ಗಡಿ ಭದ್ರತಾ ಪಡೆ ಯಶಸ್ವಿಯಾಗಿದೆ.
ಮಾದಕ ದ್ರವ್ಯ ಮತ್ತು ಶಸ್ತ್ರಾಸ್ತ್ರಗಳ ಕಳ್ಳಸಾಗಣೆ ಪ್ರಯತ್ನವನ್ನು ವಿಫಲಗೊಳಿಸಿರುವುದಾಗಿ ಸೇನೆ ಹೇಳಿದೆ.
ಗುರುದಾಸುಪುರ ಸೆಕ್ಟರ್‍ನ ಪಂಜ್‍ಗ್ರೇನ್ ಪ್ರದೇಶದಲ್ಲಿ ಮುಂಜಾನೆ 1 ಗಂಟೆ ಸುಮಾರಿಗೆ ಪಾಕಿಸ್ತಾನದ ಕಡೆಯಿಂದ ಭಾರತದ ಕಡೆಗೆ ಹಾರುತಾ ಬಮದ ವಸ್ತು ಝೇಂಕರಿಸುವ ಶಬ್ದ ಕೇಳಿದ ನಂತರ ನಮ್ಮ ಪಡೆಗಳು ಅದರತ್ತ ಗುಂಡು ಹಾರಿಸಿದವು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಗಡಿ ರೇಖೆಯಿಂದ ಸುಮಾರು 2.7 ಕಿಮೀ ದೂರದ ಘಗ್ಗರ್ ಮತ್ತು ಸಿಂಗೊಕೆ ಗ್ರಾಮ ಪ್ರದೇಶದಲ್ಲಿ ಶೋಧದ ಸಮಯದಲ್ಲಿ ಕೆಳಗೆ ಬಿದ್ದಿದ್ದ ಡ್ರೋನ್ ಅವಶೇಶಗಳ ಬಳಿ ಪ್ಯಾಕೆಟ್‍ನಲ್ಲಿ ಇಟ್ಟಿದ್ದ ಪಿಸ್ತೂಲ್,ಹಳದಿ ಬಣ್ಣದ ಎರಡು ಪ್ಯಾಕೆಟ್‍ಳು ಕಂಡುಬಂದಿದೆ ಎಂದು ಹಿರಿಯ ಅಧಿಕಾರಿ ತಿಳಿಸಿದ್ದಾರೆ.
ಅದರೆ ಪ್ರದೇಶದಲ್ಲಿ ಕೆಲ ಅವಶೇಷ ಬಿದ್ದಿದೆ ಡ್ರೋನ್ ಪತನಗೊಂಡಿದೆಯೇ ಅಥವಾ ಅದು ತಪ್ಪಿಸಿಕೊಂಡಿದೆಯೇ ಎಂದು ಹುಡುಕಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

Articles You Might Like

Share This Article