ನವದೆಹಲಿ,ಫೆ.10- ಪಂಜಾಬ್ ಸಮೀಪದ ಅಂತಾರಾಷ್ಟ್ರೀಯ ಗಡಿಯಲ್ಲಿ ಪಾಕಿಸ್ತಾನದ ಡ್ರೋನ್ ಚೀನಾ ಮೇಡ್ ಶಸ್ತ್ರಾಸ್ತ್ರ ಮತ್ತು ಮಾದಕವಸ್ತುಗಳನ್ನು ಎಸೆದಿದೆ. ಪಂಜಾಬ್‍ನ ಅಂತರಾಷ್ಟ್ರೀಯ ಗಡಿಯಲ್ಲಿ ಪಾಕಿಸ್ತಾನದ ಡ್ರೋನ್‍ನಿಂದ ಬಿದ್ದಿದೆ ಎನ್ನಲಾದ ಶಸ್ತ್ರಾಸ್ತ್ರ ಮತ್ತು ಮಾದಕವಸ್ತುಗಳ ಸಂಗ್ರಹವನ್ನು ಗಡಿ ಭದ್ರತಾ ಪಡೆ ವಶಪಡಿಸಿಕೊಂಡಿದೆ.
ರಾಜ್ಯದ ಫಿರೋಜ್‍ಪುರ ಸೆಕ್ಟರ್‍ನ ಗಡಿ ಪೋಸ್ಟ್‍ನಲ್ಲಿರುವ ಎಂಡಬ್ಲ್ಯೂ ಉತ್ತರ ಪ್ರದೇಶದ ಭಾರತೀಯ ಭೂಪ್ರದೇಶದೊಳಗೆ ಬಂದ ಪಾಕ್ ಡ್ರೋನ್‍ನ ಮೇಲೆ ಭಾರತೀಯ ಸೈನಿಕರು ಗುಂಡು ಹಾರಿಸಿದರು.
ಮನೆಗಳ್ಳನ ಬಂಧನ : 18 ಲಕ್ಷ ಮೌಲ್ಯದ ಚಿನ್ನಾಭರಣ, ಹಣ ವಶ
ನಂತರ ಬಿಎಸ್‍ಎಫ್ ಸಿಬ್ಬಂದಿ ಹುಡುಕಾಟ ನಡೆಸಿದ್ದು, ಸುಮಾರು 3 ಕೆಜಿ ಹೆರಾಯಿನ್, ಒಂದು ಚೈನೀಸ್ ಪಿಸ್ತೂಲ್, ಐದು ಕಾಟ್ರ್ರಿಡ್ಜ್‍ಗಳು ಮತ್ತು ಡ್ರೋನ್‍ನಿಂದ ಬೀಳಿಸಲಾದ ಮ್ಯಾಗಜೀನ್ ಒಳಗೊಂಡ ಪ್ಯಾಕೆಟ್ ಅನ್ನು ಪತ್ತೆ ಮಾಡಲಾಗಿದೆ ಎಂದು ಬಿಎಸ್‍ಎಫ್ ವಕ್ತಾರರು ತಿಳಿಸಿದ್ದಾರೆ.
BSF, recovers, drugs, arms, dropped, Pak drone,