ಗಡಿಯಲ್ಲಿ ಹೆಚ್ಚಾಯ್ತು ಡ್ರಗ್ಸ್, ಶಸ್ತ್ರಾಸ್ತ್ರ ಸಾಗಿಸುವ ಪಾಕ್ ಡ್ರೋನ್ ಹಾವಳಿ

Social Share

ಚಂಡೀಗಢ, ಡಿ .22-ಗಡಿ ಪ್ರದೇಶದಲ್ಲಿ ದಟ್ಟವಾದ ಮಂಜಿನ ಲಾಭ ಪಡೆದು ಡ್ರೋನ್‍ಗಳ ಮೂಲಕ ಪಾಕಿಸ್ತಾನ ಕಡೆಯಿಂದ ಮಾದಕ ದ್ರವ್ಯ ಮತ್ತು ಶಸ್ತ್ರಾಸ್ತ್ರಗಳನ್ನು ಕಳ್ಳಸಾಗಣೆ ಹೆಚ್ಚಾಗುತ್ತಿದ್ದು ಗಡಿ ಭದ್ರತಾ ಪಡೆ ಕಟ್ಟೆಚ್ಚರ ವಹಿಸಿದೆ.

ಕಳೆದ ಕೆಲವು ದಿನಗಳಲ್ಲಿ ದಟ್ಟವಾದ ಮಂಜಿನ ಹಿನ್ನೆಲೆಯಲ್ಲಿ ಗಡಿಯಾಚೆಯಿಂದ ಶಸ್ತ್ರಾಸ್ತ್ರಗಳು ಮತ್ತು ಹೆರಾಯಿನ್ ಮಾದಕವನ್ನು ಭಾರತದ ಭೂಪ್ರದೇಶಕ್ಕೆ ಡ್ರೋನ್ ಮೂಲಕ ಕಳುಹಿಸುತ್ತಿರುವುದು ಗಣನೀಯವಾಗಿ ಹೆಚ್ಚಿವೆ ಎಂದು ಬಿಎಸ್‍ಎಫ್ ಅಧಿಕಾರಿಗಳು ತಿಳಿಸಿದ್ದಾರೆ.

ಸುಮರು 25 ಕೆಜಿ ಹೆರಾಯಿನ್ ಮದಕವಸ್ತುವನ್ನು ಫಾಜಿಲ್ಕಾದಲ್ಲಿನ ಕೃಷಿ ಭೂಮಿಯಲ್ಲಿ ಪತ್ತೆಹಚ್ಚಿ ವಶಪಡಿಸಿಕೊಳ್ಳಲಾಗಿದೆ. ಇದಲ್ಲದೆ ಅಜೈಬ್ ಸಿಂಗ್ ಗ್ರಾಮದ ಬಳಿ ಗಡಿ ರೆಖೆಯ ಬೇಲಿಯ ಕೆಲವು ಚಟುವಟಿಕೆಗಳನ್ನು ಗಮನಿಸಿದ ನಂತರ ಸೈನಿಕರು ಎಚ್ಚರಿಸಿದರು ನಂತರ ಪಾಕಿಸ್ತಾನಿ ಕಳ್ಳಸಾಗಾಣಿಕೆದಾರರತ್ತ ಗುಂಡು ಹಾರಿಸಿದವು. ಆದರೆ, ದಟ್ಟ ಮಂಜಿನ ಲಾಭ ಪಡೆದು ಪರಾರಿಯಾಗಿದ್ದಾರೆ. ನಂತರ, ಪ್ರದೇಶದಲ್ಲಿ ಶೋಧ ನಡೆಸಿದಾಗ, ಶಂಕಿತ ಹೆರಾಯಿನ್‍ನ 25 ಪ್ಯಾಕೆಟ್‍ಗಳು ಮತ್ತು ಪಿವಿಸಿ ಪೈಪ್ ಅನ್ನು ವಶಪಡಿಸಿಕೊಳ್ಳಲಾಗಿದೆ.

ವಂದೇ ಭಾರತ್, ಶತಾಬ್ದಿ ಸೂಪರ್‌ಫಾಸ್ಟ್ ರೈಲುಗಳು ವೇಳಾಪಟ್ಟಿ ಬದಲಾವಣೆಗೆ ಪರಿಶೀಲಿಸಿ ಕ್ರಮ : ಸಚಿವ ಸೋಮಣ್ಣ

ನಾವು ಗಸ್ತು ಹೆಚ್ಚಿಸಿದ್ದೇವೆ ಮತ್ತು ಚೆಕ್‍ಪಾಯಿಂಟ್‍ಗಳಲ್ಲಿ ನಮ್ಮ ಪಡೆ ಕಳ್ಳಸಾಗಣೆದಾರ ಯಾವುದೇ ಪ್ರಯತ್ನವನ್ನು ವಿಫಲಗೊಳಿಸಲು ಜಾಗರೂಕರಾಗಿದ್ದಾರೆ ಎಂದರು. ಈ ವರ್ಷ ಅಂತಾರಾಷ್ಟ್ರೀಯ ಗಡಿಯ ಬಳಿ 200ಕ್ಕೂ ಹೆಚ್ಚು ಪಾಕಿಸ್ತಾನಿ ಡ್ರೋನ್‍ಗ ಹಾರಾಟ ದಾಖಲಾಗಿದೆ ಎಂದು ಪಂಜಾಬ್ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ನೂತನ RTO ಕಚೇರಿ ತೆರೆಯುವ ಪ್ರಸ್ತಾವನೆ ಇಲ್ಲ : ಶ್ರೀರಾಮುಲು

ಕೇವಲ ಒಂದು ತಿಂಗಳಲ್ಲಿಗಡಿ ಪ್ರದೇಶಗಳ ಬಳಿ ಆರು ರೋಟರ್‍ಗಳನ್ನು ಹೊಂದಿರುವ ಹೆಕ್ಸಾಕಾಪ್ಟರ್‍ಗಳು ಸೇರಿದಂತೆ ಎಂಟು ಡ್ರೋನ್‍ಗಳನ್ನು ಹೊಡೆದುರುಳಿಸಿದ್ದಾರೆ ಎಂದು ಬಿಎಸ್‍ಎಫ್ ತಿಳಿಸಿದೆ. ವಿಶೇಷವಾಗಿ ರಾತ್ರಿ ಮತ್ತು ಮುಂಜಾನೆ, ಕಳ್ಳಸಾಗಣೆದಾರರು ಡ್ರೋನ್‍ಗಳ ಮೇಲಿನ ದೀಪಗಳು ಕಾಣದಂತೆ ಅಂಟುಪಟ್ಟಿ ಬಳಸಿ ಕಣ್ಣಿಗೆ ಕಾಣದಂತೆ ಮುಚ್ಚಲು ಪ್ರಾರಂಭಿಸಿದ್ದಾರೆ.

BSF, shoots down, Pak drone, Amritsar, heroin packets, Fazilka,

Articles You Might Like

Share This Article