Saturday, September 23, 2023
Homeಇದೀಗ ಬಂದ ಸುದ್ದಿಬಿಎಸ್‍ಎಫ್ ಗುಂಡೇಟಿಗೆ ಪಾಕ್ ನುಸುಳುಕೋರ ಫಿನಿಶ್

ಬಿಎಸ್‍ಎಫ್ ಗುಂಡೇಟಿಗೆ ಪಾಕ್ ನುಸುಳುಕೋರ ಫಿನಿಶ್

- Advertisement -

ಸಾಂಬಾ/ಜಮ್ಮು, ಜೂನ್. 1 – ಜಮ್ಮು ಮತ್ತು ಕಾಶ್ಮೀರದ ಸಾಂಬಾ ಜಿಲ್ಲೆಯ ಅಂತಾರಾಷ್ಟ್ರೀಯ ಗಡಿಯಲ್ಲಿ ಪಾಕಿಸ್ತಾನಿ ಒಳನುಸುಳುಕೋರನೊಬ್ಬ ಬಿಎಸ್‍ಎಫ್ ಪಡೆಗಳ ಗುಂಡೇಟಿಗೆ ಬಲಿಯಾಗಿದ್ದಾನೆ.

ಇಂದು ಮುಂಜಾನೆ 2:50 ರ ಸುಮಾರಿಗೆ ಸಾಂಬಾ ಸೆಕ್ಟರ್‍ನ ಮಂಗು ಚಾಕ್ ಗಡಿ ಹೊರಠಾಣೆ (ಬಿಒಪಿ) ಬಳಿ ಈ ಘಟನೆ ನಡೆದಿದೆ. ಸಾಂಬಾ ಪ್ರದೇಶದಲ್ಲಿ ಪಾಕಿಸ್ತಾನದ ಕಡೆಯಿಂದ ಭಾರತದ ಗಡಿಯೊಳಗೆ ವ್ಯಕ್ತಿಯೊಬ್ಬನ ಅನುಮಾನಾಸ್ಪದ ಚಲನವಲನವನ್ನು ಗಮನಿಸಿದ ಗಡಿ ಭದ್ರತಾ ಪಡೆ ಮೊದಲು ಎಚ್ಚರಿಕೆ ನೀಡಿದ್ದಾರೆ ಆದರೂ ಆತ ಗಡಿ ದಾಟಿದಾಗ ಗುಂಡು ಹಾರಿಸಿ ಹೊಡೆದುರುಳಿಸಲಾಯಿತು ಎಂದು ಸೇನಾ ವಕ್ತಾರರು ತಿಳಿಸಿದ್ದಾರೆ.

- Advertisement -

ಶ್ರೀಘ್ರದಲ್ಲೇ ಕೇಂದ್ರ ಸಚಿವ ಸಂಪುಟ ಪುನಾರಚನೆ..

ಮೃತದೇಹವು ಗಡಿ ಬೇಲಿ ಮುಂಭಾಗದ ಬಿದ್ದಿರುವುದರಿಂದ ಬಿಎಸ್‍ಎಫ್ ಪಡೆ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ .ಜಮ್ಮು ವಿಭಾಗದಲ್ಲಿ ಎರಡು ದಿನಗಳಲ್ಲಿ ನಡೆದ ಎರಡನೇ ಘಟನೆ ಇದಾಗಿದೆ. ನಿನ್ನೆ ಪೂಂಚ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯಲ್ಲಿ (ಎಲ್‍ಒಸಿ) ಮೂವರು ಭಯೋತ್ಪಾದಕರನ್ನು ಬಂಧಿಸುವ ಮೂಲಕ ಸೇನೆಯು ಒಳನುಸುಳುವಿಕೆ ಪ್ರಯತ್ನವನ್ನು ವಿಫಲಗೊಳಿಸಿತು.

ಗಡಿ ಬೇಲಿ ಬಳಿ ಗುಂಡಿನ ಚಕಮಕಿ ನಡೆಸಿದ ನಂತರ ಭಯೋತ್ಪಾದಕರನ್ನು ಬಂಧಿಸಲಾಯಿತು ಎಂದು ವಕ್ತಾರರ ತಿಳಿಸಿದ್ದಾರೆ.

#BSF, #shootsdown, #Pakistani, #intruder, #international, #border,

- Advertisement -
RELATED ARTICLES
- Advertisment -

Most Popular