ಗುಂಡು ಹಾರಿಸಿಕೊಂಡು ಬಿಎಸ್‍ಎಫ್ ಯೋಧ ಆತ್ಮಹತ್ಯೆ

Spread the love

ಕಂಕೇರ್, ಏ.28- ಛತ್ತೀಸ್‍ಗಢದ ಕಂಕೇರ್ ಜಿಲ್ಲೆಯಲ್ಲಿ ಗಡಿ ಭದ್ರತಾ ಪಡೆ (ಬಿಎಸ್‍ಎಫ್) ಕಾನ್‍ಸ್ಟೆಬಲ್ ಗುರುವಾರ ತನ್ನ ಸೇವಾ ಬಂದೂಕಿನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾಜ್ಯ ರಾಜಧಾನಿ ರಾಯ್‍ಪುರದಿಂದ ಸುಮಾರು 200 ಕಿಮೀ ದೂರದಲ್ಲಿರುವ ಕೊಯಲಿಬೆಡ ಪೊಲೀಸ್ ಠಾಣೆ ವ್ಯಾಪ್ತಿಯ ಕಮ್ತೇರಾ ಗ್ರಾಮದ ಬಿಎಸ್‍ಎಫ್ ಶಿಬಿರದಲ್ಲಿ ಬೆಳಗ್ಗೆ 6.30ರ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನಕ್ಸಲ್ ವಿರೋಧಿ ಕಾರ್ಯಾಚರಣೆಗಾಗಿ ಕಂಕೇರ್‍ನಲ್ಲಿ ಬಿಎಸ್‍ಎಫ್ ಅನ್ನು ವ್ಯಾಪಕವಾಗಿ ನಿಯೋಜಿಸಲಾಗಿದೆ. 30 ನೇ ಬೆಟಾಲಿಯನ್‍ಗೆ ಸೇರಿದ ಕಾನ್‍ಸ್ಟೆಬಲ್ ಉಜ್ಜವಲ್ ನಂದಿ (33) ತನ್ನ ಬ್ಯಾರಕ್‍ನಲ್ಲಿ ಎಕ್ಸ್ 95 ರೈಫಲ್‍ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಗುಂಡೇಟಿನ ಸದ್ದು ಕೇಳಿದ ಆತನ ಸಹೋದ್ಯೋಗಿಗಳು ಸ್ಥಳಕ್ಕೆ ಧಾವಿಸಿ ನೋಡಿದಾಗ ಅವರು ರಕ್ತದ ಮಡುವಿನಲ್ಲಿ ನಂದಿ ಶವವಾಗಿ ಬಿದ್ದಿರುವುದು ಕಂಡು ಬಂದಿದೆ. ಸ್ಥಳದಲ್ಲಿ ಯಾವುದೇ ಆತ್ಮಹತ್ಯೆ ಟಿಪ್ಪಣಿ ಕಂಡುಬಂದಿಲ್ಲ. ಆತ್ಮಹತ್ಯೆಗೆ ನಿಖರವಾದ ಕಾರಣವನ್ನು ಕಂಡುಹಿಡಿಯಲು ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನಂದಿ ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯವರಾಗಿದ್ದು,ಮೃತದೇಹವನ್ನು ಕೊಯಲಿಬೀಡ ಸಮುದಾಯ ಆರೋಗ್ಯ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಅಲ್ಲಿಂದ ರಾಯಪುರಕ್ಕೆ ಸ್ಥಳಾಂತರಿಸಿ, ನಂತರ ಪಾರ್ಥಿವ ಶರೀರವನ್ನು ನಂದಿಯ ಸ್ವಗ್ರಾಮಕ್ಕೆ ಕೊಂಡೊಯ್ಯಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Facebook Comments