ಭಾರತ-ಪಾಕಿಸ್ತಾನ ಗಡಿಯಲ್ಲಿ BSF ಯೋಧ ಆತ್ಮಹತ್ಯೆ

Social Share

ಜಮ್ಮು, ಜು 25 – ಭಾರತ-ಪಾಕಿಸ್ತಾನ ಅಂತರಾಷ್ಟ್ರೀಯ ಗಡಿಯಲ್ಲಿ ಗಡಿ ಭದ್ರತಾ ಪಡೆ (ಬಿಎಸïಎಫï) ಸಬ್ ಇನ್ಸ್‍ಪೆಕ್ಟರ್ ಇಂದು ಮುಂಜಾನೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸೇನೆಯ ಕಿರಿಯ ಶ್ರೇಣಿಯ ಸೈನಿಕ ರಾಮ್ದೇವ್ ಸಿಂಗ್ ಮೂಲ ರಾಜಸ್ಥಾನದ ಸಿಕರ್ ಜಿಲ್ಲೆಯವರು ರಾತ್ರಿ ಗಸ್ತು ಮುಗಿಸಿ ಬಮದು ಅವರು ಬೆಳಿಗ್ಗೆ 6.35 ರ ಸುಮಾರಿಗೆ ಅವರ ಕೋಣೆಗೆ ಹೋಗಿ ತಮ್ಮ ಬಂದೂಕಿನಿಂದಲ್ಲೇ ಗುಂಡುಹಾರಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

ಸಹದೋಗಿಗಳು ಶಬ್ಥ ಕೇಳಿ ಒಳ ಹೋಗಿ ನೋಡಿದ್ದಾಗ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡುಬಂದಿದೆ ಎಂದು ಅಕಾರಿಗಳು ತಿಳಿಸಿದ್ದಾರೆ.

ಬಿಎಸïಎಫïನ 12 ನೇ ಬೆಟಾಲಿಯನ್‍ಗೆ ರಾಮ್ದೇವ್ ಸಿಂಗ್ ಸೇರಿದ್ದು ಸೇನಾ ತುಕಡಿಗೆ ಕಮಾಂಡರ್ ಆಗಿದ್ದರು. ಸಾವಿಗೆ ಕಾರಣವನ್ನು ಕಂಡುಹಿಡಿಯಲು ತನಖೆ ನಡೆಯುತ್ತಿದೆ ಮತ್ತು ಬಿಎಸ್ ಎಫ್ ನ್ಯಾಯಾಲಯದ ವಿಚಾರಣೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದರು.

Articles You Might Like

Share This Article