ಬುಧೌನ್ ಗ್ಯಾಂಗ್‍ ರೇಪ್ ಪ್ರಕರಣದ ಪ್ರಮುಖ ಆರೋಪಿ ಬಂಧನ

ಬುಧೌನ್, ಜ.8- ಹತ್ರಾಸ್ ಅತ್ಯಾಚಾರ, ಕೊಲೆ ಪ್ರಕರಣದ ನಂತರ ಉತ್ತರ ಪ್ರದೇಶದಲ್ಲಿ ಕೋಲಾಹಲ ಸೃಷ್ಟಿಸಿದ ಬುಧೌನ್ ಅಂಗನವಾಡಿ ಕಾರ್ಯಕರ್ತೆ, ದಲಿತ ಮಹಿಳೆ ಮೇಲೆ ನಡೆದ ಗ್ಯಾಂಗ್‍ರೇಪ್ ಮತ್ತು ಕೊಲೆ ಕೇಸ್‍ನ ಪ್ರಮುಖ ಆರೋಪಿಯನ್ನು ನಿನ್ನೆ ಮಧ್ಯರಾತ್ರಿ ಪತ್ತೆ ಹಚ್ಚಿದ್ದಾರೆ.  ಬಂಧಿತ ಆರೋಪಿ ಸತ್ಯನಾರಾಯಣ (ಮಹಾಂತ್) ವಿರುದ್ಥ ಎಫ್‍ಐಆರ್ ದಾಖಲಿಸಿ ಜಿಲ್ಲಾ ನ್ಯಾಯಾಲಯಕ್ಕೆ ಕರೆದೊಯ್ದಿದ್ದಾರೆ.

ನ್ಯಾಯಾಧೀಶ ಕುಮಾರ್ ಪ್ರಶಾಂತ್ ಅವರು ಈ ಹಗರಣದ ಪ್ರಮುಖ ಆರೋಪಿ ¾¾ಮಹಾಂತ್¿¿ ಉಘೈತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ತನ್ನ ಅನುಯಾಯಿಗಳ ಮನೆಯಲ್ಲಿ ಅಡಗಿಕೊಂಡಿದ್ದನೆಂದು ತಿಳಿದುಬಂದಿದೆ. ತನಿಖಾ ನಿರತ ಪೊಲೀಸ್ ತಂಡಕ್ಕೆ ಸಿಕ್ಕ ಸುಳಿವಿನ ಮೇರೆಗೆ ಆತನನ್ನು ತಕ್ಷಣ ಬಂಧಿಸಿ ಕರೆದುತಂದಿದ್ದಾರೆ ಎಂದಿದ್ದಾರೆ. ಈಗಾಗಲೇ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಬ್ಬರನ್ನು ಬಂಧಿಸಲಾಗಿದೆ.

ಪ್ರಕರಣ: 50 ವರ್ಷದ ಮಹಿಳೆ ಸ್ಥಳೀಯ ದೇವಸ್ಥಾನಕ್ಕೆ ಹೋಗಿದ್ದು, ಅಲ್ಲಿ ಆಶ್ಚರ್ಯಕರ ರೀತಿಯಲ್ಲಿ ಮೃತಪಟ್ಟಿದ್ದರು. ಮೃತ ಮಹಿಳೆಯ ಕುಟುಂಬದ ಸದಸ್ಯರು ಈಕೆಯನ್ನು ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿದೆ. ಪ್ರಕರಣಕ್ಕೆ ಪ್ರಮುಖ ಕಾರಣ ಪೂಜಾರಿ ಮತ್ತು ಅವನ ಸಹಚರರು ಎಂದು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.