ಕೇಂದ್ರ ಬಜೆಟ್ ಗಾತ್ರ ಶೇ.14ರಷ್ಟು ಹೆಚ್ಚಾಗುವ ಸಾಧ್ಯತೆ, ಹೊಸ ದಾಖಲೆಗೆ ನಿರ್ಮಲಾ ತಯಾರಿ

Social Share

ನವದೆಹಲಿ,ಜ.30- ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಗಳವಾರ ಬಜೆಟ್ ಮಂಡಿಸಲಿದ್ದು, ಏಪ್ರಿಲ್ ಆರಂಭವಾಗಲಿರುವ ಹಣಕಾಸು ವರ್ಷದಲ್ಲಿ ಬಜೆಟ್ ಗಾತ್ರವನು ಶೇ.14ರಷ್ಟು ಅಂದರೆ 39.6 ಲಕ್ಷ ಕೋಟಿ ರೂ.ಗಳಿಗೆ (52 ಶತಕೋಟಿ ಡಾಲರ್‍ಗಳು) ಹೆಚ್ಚಿಸುವ ಸಂಭವ ಇದೆ.
ಮಂಗಳವಾರ ಮಂಡನೆಯಾಗಲಿರುವ ಕೇಂದ್ರ ಬಜೆಟ್‍ನಲ್ಲಿ ವೆಚ್ಚ ಹೆಚ್ಚಿಸುವ ಮೂಲಕ ಹಣಕಾಸು ಕ್ರೋಢೀಕರಣಕ್ಕೂ ಆದ್ಯತೆ ನೀಡುವ ನೀರೀಕ್ಷೆ ಇದ್ದು ಭಾರತವು ಜಗತ್ತಿನ ಅತಿವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ ಎಂಬ ಬಿರುದನ್ನು ಮರಳಿ ಗಳಿಸುವ ಸಾಧ್ಯತೆ ಇದೆ ಎಂದು ಅರ್ಥ ಶಾಸ್ತ್ರಜ್ಞರ ಸಮೀಕ್ಷೆ ತಿಳಿಸಿವೆ.
ಬ್ಲೂಮ್ ಬರ್ಗ್ ಸಂಕಲನ ಮಾಡಿರುವ ಬಜೆಟ್ ಅಂದಾಜಿನ ಪ್ರಕಾರ ನಿರ್ಮಲಾ ಸೀತಾರಾಮನ್ ಅವರು ತೆರಿಗೆ ದರಗಳನ್ನು ಹೆಚ್ಚು ಬದಲಿಸದೆ ಆಸ್ತಿ ಮಾರಾಟ ಮತ್ತು ದಾಖಲೆಯ ಸನಿಹ ಇದ್ದು 13 ಲಕ್ಷ ಕೋಟಿ ರೂಪಾಯಿಗಳ ಸಾಲ ಪಡೆಯುವ ಮೂಲಕ ಆದಾಯ ಗಳಿಸುವ ಯೋಜನೆ ರೂಪಿಸಿದ್ದಾರೆ ಎನ್ನಲಾಗಿದೆ.
ಹೆಚ್ಚಿನ ವೆಚ್ಚವು ಮತ್ತೊಂದು ವರ್ಷಕ್ಕೆ ಸರ್ಕಾರದ ಬಜೆಟ್ ಕೊರತೆಯನ್ನು ಸಮಗ್ರ ರಾಷ್ಟ್ರೀಯ ಉತ್ಪನ್ನದ ಶೇ.6ರ ಮಟ್ಟಕ್ಕಿಂತ ಹೆಚ್ಚಿಸಲಿದೆ. ನಿರ್ಮಲಾ ಅವರು ಪ್ರಸಕ್ತ ಹಣಕಾಸು ವರ್ಷವನ್ನು ಶೇ.6.8ರ ಕೊರತೆಯೊಂದಿಗೆ ಪೂರೈಸಿ ಮುಂದಿನ ವರ್ಷಕ್ಕೆ ವಿತ್ತೀಯ ಕೊರತೆಯನ್ನು ಒಟ್ಟು ರಾಷ್ಟ್ರೀಯ ಉತ್ಪನ್ನದ ಶೇ.6.1ಕ್ಕೆ ಇರಿಸುವ ಗುರಿ ಹೊಂದಿದ್ದಾರೆ. ಇದು ಕೋವಿಡ್ ಸಾಂಕ್ರಾಮಿಕದ ಪ್ರಯತ್ನವಾಗಿದೆ ಎಂದು ಆರ್ಥಿಕ ತಜ್ಞರು ಭವಿಷ್ಯ ನುಡಿದಿದ್ದಾರೆ.
ಕೋವಿಡ್ ಸಾಂಕ್ರಾಮಿಕದಿಂದ ಚೇತರಿಕೆ ಕ್ಷಿಪ್ರವಾಗಿದೆ. ಆದರೆ ಇನ್ನೂ ಪೂರ್ಣವಾಗಿ ಚೇತರಿಸಿಕೊಂಡಿಲ್ಲ ಎಂದು ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಬ್ಯಾಂಕಿಂಗ್ ಗ್ರೂಪ್ ಲಿ.,ನ ಅರ್ಥಶಾಸ್ತ್ರಜ್ಞರಾದ ೀರಜ್ ನೀಮ್ ಮತ್ತು ಸಂಜಯ್ ಮಾಥುರ್ ಅವರು ವರದಿಯೊಂದರಲಿ ಬರೆದಿದ್ದಾರೆ. ಹಣಕಾಸು ಪುನಶ್ಚೇತನ್ಯ ಮತ್ತು ಆರ್ಥಿಕ ಚೇತರಿಕೆ ನಡುವಣ ಉತ್ತಮ ಸಮತೋಲನ ಸಾಸುವ ಕಾರ್ಯ ಆಗಬೇಕಾಗಿದೆ ಎಂದು ಅವರು ಹೇಳಿದ್ದಾರೆ.
ಓಮಿಕ್ರಾನ್ ರೂಪಾಂತರಿ ಕೊರೊನಾ ವೈರಸ್‍ನನ ಹೊರಹೊಮ್ಮುವಿಕೆಯಿಂದ ನಿರುದ್ಯೋಗ ಮತ್ತು ಅಸಮಾನತೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ನಿರ್ಮಲಾ ಅವರು ಉದ್ಯೋಗಗಳನ್ನು ಸೃಷ್ಟಿಸಿ ಜನರನ್ನು ಬಡತನದಿಂದ ಹೊರತರಲು ಮೂಲಸೌಕರ್ಯ ಯೋಜನೆಗಳಿಂದ ಆರೋಗ್ಯ ರಕ್ಷಣೆಯವರೆಗೆ ಎಲ್ಲ ಕ್ಷೇತ್ರಗಳಲ್ಲಿ ವೆಚ್ಚವನ್ನು ಹೆಚ್ಚಿಸುವ ಒತ್ತಡದಲ್ಲಿದ್ದಾರೆ. ದೇಶದ ಜನಸಂಖ್ಯೆಯಲ್ಲಿ ಶೇ.10ರಷ್ಟಿರುವ ಭಾರೀ ಶ್ರೀಮಂತರ ಮೇಲೆ ಸರ್ಕಾರವು ಶಿಕ್ಷಣ ಕ್ಷೇತ್ರದಲ್ಲಿ ಹೂಡಿಕೆ ಮಾಡಬೇಕು ಎಂದು ಆಕ್ಸ್‍ಫಾಮ್ ಶಿಫಾರಸ್ಸು ಮಾಡುತ್ತಿದೆ.
ಕೋವಿಡ್ ಸಾಂಕ್ರಾಮಿಕದ ಅವಯಲ್ಲಿ ಷೇರು ಬೆಲೆಗಳಿಂದ ಕ್ರಿಪೆÇ್ಟ ಕರೆನ್ಸಿಯವರೆಗೆ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿದ್ದರಿಂದ ಜಾಗತಿಕವಾಗಿ ಶ್ರೀಮಂತರ ಸಂಪತ್ತು ವೃದ್ಧಿಸುತ್ತಿದೆ. ಕಳೆದ ಮೇನಲ್ಲಿ ದೇಶದಲ್ಲಿ ನಗರ ನಿರುದ್ಯೋಗ ದರ ಶೇ.15ರ ಸನಿಹ ಏರಿಕೆಯಾಗಿದ್ದು, ಆಹಾರ ಅಭದ್ರತೆ ಹೆಚ್ಚಾಗಿದೆ. ಆದರೆ ದೇಶವು ಫ್ರಾನ್ಸ್, ಸ್ವೀಡನ್ ಮತ್ತು ಸ್ವಿಟ್ಜರ್ ಲ್ಯಾಂಡ್‍ಗಳಿಗಿಂತಹೆಚ್ಚಿನ ಶತಕೋಟ್ಯಾೀಶರನ್ನು ಕಾಣುತ್ತಿದೆ ಎಂದು ಆಕ್ಸ್‍ಫಾಮ್ ಹೇಳಿದೆ.
ಆಡಳಿತಾರೂಢ ಬಿಜೆಪಿ ಮುಂದಿನ ತಿಂಗಳು ಪ್ರಮುಖ ರಾಜ್ಯಗಳ ವಿಧಾನಸಭಾ ಚುನಾವಣೆಯತ್ತ ನಡೆದಿದ್ದರೂ ನಿರ್ಮಲಾ ಅವರು ಬಜೆಟ್‍ನಲ್ಲಿ ಯಾವುದೇ ಜನಪ್ರಿಯ ಕ್ರಮಗಳನ್ನು ಕೈಗೊಳ್ಳುವುದರಿಂದ ದೂರ ಉಳಿಯಲಿದ್ದಾರೆ ಎಂದು ಸಮೀಕ್ಷೆಯಲ್ಲಿ ಪಾಲ್ಗೊಂಡ ಬಹುತೇಕರು ತಿಳಿಸಿದ್ದಾರೆ.
ಭಾರತೀಯ ಸಾರ್ವಭೌಮ ಸಾಲಕ್ಕಾಗಿ ವಿದೇಶಿ ಬೇಡಿಕೆ ಹೆಚ್ಚಿಸಲು ಅವರು ಕೆಲವು ತೆರಿಗೆ ನಿಯಮಗಳನ್ನು ಬದಲಿಸಲಿದ್ದಾರೆ ಎಂಬ ನಿರೀಕ್ಷೆಗಳಿವೆ. ಬಾಂಡ್ ಹೂಡಿಕೆದಾರರ ಮೇಲೆ ಬಂಡವಾಳ ಗಳಿಕೆ ತೆರಿಗೆಯನ್ನು ರದ್ದುಪಡಿಸುವಿಕೆ ಭಾರತವನ್ನು ಜಾಗತಿಕ ಬಾಂಡ್ ಸೂಚ್ಯಂಕದಲ್ಲಿ ಸೇರ್ಪಡೆಯಾಗಿಸುವ ಸಾಧ್ಯತೆ ಅಕವಾಗಿದೆ.

Articles You Might Like

Share This Article