ಬಜೆಟ್ ಹೈಲೈಟ್ಸ್ : ಇ-ಕೋರ್ಟ್‍ಗೆ 7 ಸಾವಿರ ಕೋಟಿ

Social Share

ನವದೆಹಲಿ,ಫೆ.1- ನ್ಯಾಯದ ಸಮರ್ಥ ಆಡಳಿತಕ್ಕಾಗಿ, ಸುಮಾರು 7 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ಮೂರನೇ ಹಂತದ ಇ-ನ್ಯಾಯಾಲಯಗಳ ಯೋಜನೆಯನ್ನು ಪ್ರಾರಂಭಿಸಲಾಗಿದೆ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.

ಬಜೆಟ್ ಮಂಡಿಸಿದ ಅವರು, ಕೋವಿಡ್ ಅವಯಲ್ಲಿ ಒಪ್ಪಂದಗಳನ್ನು ಕಾರ್ಯಗತಗೊಳಿಸಲು ವಿಫಲವಾದ ಎಂಎಸ್‍ಎಂಇಗಳಿಗೆ ನೆರವು ನೀಡಲು ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಸರ್ಕಾರ ಮತ್ತು ಅರೆ ಸರ್ಕಾರಿ ವಲಯದಲ್ಲಿನ ಶೇ.95ರಷ್ಟು ಸಂಸ್ಥೆಗಳಿಂದ ಮುಟ್ಟುಗೋಲು ಹಾಕಿಕೊಳ್ಳಲಾದ ಬಿಡ್ ಅಥವಾ ಕಾರ್ಯಕ್ಷಮತೆಯ ಭದ್ರತಾ ಠೇವಣಿಯನ್ನು ವಾಪಾಸ್ ಮಾಡಲಾಗುತ್ತದೆ.

ಉದ್ಯಮಗಳು ಮತ್ತು ಸರ್ಕಾರಿ ಸಂಸ್ಥೆಗಳ ನಡುವೆ ಬಹಳ ದಿನಗಳಿಂದ ಬಾಕಿ ಇರುವ ತಗಾದೆಗಳನ್ನು ಇತ್ಯರ್ಥ ಪಡಿಸಲು ವಿವಿಧ ಸೆ ಯೋಜನೆಯ ಬದಲು ವಿಶ್ವಾಸ್ 2 ಎಂಬ ಪ್ರಬಲ ವ್ಯವಸ್ಥೆಯನ್ನು ಜಾರಿಗೆ ತರಲಾಗುತ್ತಿದೆ.

ಕೇಂದ್ರ ಬಜೆಟ್‍ನ ಕೆಲವು ಮುಖ್ಯ ಅಂಶಗಳು ಇಲ್ಲಿವೆ ನೋಡಿ

ನ್ಯಾಯಾಲಯದಲ್ಲಿರುವ ಪ್ರಮಾಣೀಕೃತ ವಿವಾದಗಳನ್ನು ಶ್ರೇಣಿಕೃತ ಅವಯಲ್ಲಿ ಇತ್ಯರ್ಥ ಪಡಿಸಲು ಕ್ರಮ ಕೈಗೊಳ್ಳಲಾಗುವುದು. ವಿವಿಧ ಹಂತಗಳಲ್ಲಿ ಬಾಕಿ ಇರುವ ವಿವಾದಗಳನ್ನು ಮುಕ್ತಾಯಗೊಳಿಸಲು ಇದು ನೆರವಾಗಲಿದೆ ಎಂದಿದ್ದಾರೆ.

ರಾಷ್ಟ್ರೀಯ ಆದ್ಯತೆಗಳ ಕಡೆಗೆ ಗಮನ ನೀಡುವ ಸಾಮೂಹಿಕ ಪ್ರಯತ್ನಗಳಿಗಳಿಂದಾಗಿ ನೀತಿ ಆಯೋಗ ರಾಜ್ಯ ಬೆಂಬಲ ಮಿಷನ್ ಅನ್ನು ಮೂರು ವರ್ಷಗಳವರೆಗೆ ಮುಂದುವರಿಸಲಾಗುತ್ತದೆ ಎಂದು ಹೇಳಿದ್ದಾರೆ.

ಬಜೆಟ್‍ನಲ್ಲಿ ರಕ್ಷಣಾ ಕ್ಷೇತ್ರಕ್ಕೆ ಸಿಂಹಪಾಲು

ಸ್ಪರ್ಧಾತ್ಮಕ ಅಭಿವೃದ್ಧಿ ಅಗತ್ಯಗಳಿಗಾಗಿ ವಿರಳ ಸಂಪನ್ಮೂಲಗಳನ್ನು ಉತ್ತಮವಾಗಿ ನಿಯೋಜಿಸಲು, ಆಯ್ದ ಯೋಜನೆಗಳ ಹಣಕಾಸುವನ್ನು ಪ್ರಾಯೋಗಿಕ ಆಧಾರದ ಮೇಲೆ, ಇನ್‍ಪುಟ್-ಆಧಾರಿತ ವ್ಯವಸ್ಥೆಯಿಂದ ಫಲಿತಾಂಶ ಆಧಾರಿತವಾಗಿ ಬದಲಾಯಿಸಲಾಗುತ್ತದೆ ಎಂದಿದ್ದಾರೆ.

Budget 2023, FM Sitharaman, announces, Rs 7,000 crore, eCourts, project,

Articles You Might Like

Share This Article