ಯುವ ಸಮುದಾಯಕ್ಕೆ ಶಕ್ತಿತುಂಬಲು ಬಜೆಟ್‍ನಲ್ಲಿ ಹೆಚ್ಚಿನ ಆದ್ಯತೆ

Social Share

ನವದೆಹಲಿ,ಫೆ.1-ಯುವಶಕ್ತಿಗೆ ಬಜೆಟ್‍ನಲ್ಲಿ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಯುವ ಸಮುದಾಯದ ಕನಸುಗಳನ್ನು ಈಡೇರಿಸಲು ಅಮೃತ್ ಪೀಠಿ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಬಜೆಟ್ ಮಂಡನೆ ಮಾಡಿದ ಅವರು, ದೇಶಾದ್ಯಂತ ಜಾರಿಗೆ ತರಲಾಗಿರುವ ನೂತನ ಶಿಕ್ಷಣ ನೀತಿ ಕೌಶಲ್ಯಾಭಿವೃದ್ಧಿಗೆ ಆದ್ಯತೆ ನೀಡಿದೆ. ಆರ್ಥಿಕ ನೀತಿ ಮತ್ತು ಉದ್ಯೋಗ ಒಳಗೊಂಡ ಶಿಕ್ಷಣ ನೀತಿಯಿಂದ ಮಹತ್ವದ ಸುಧಾರಣೆ ಮಾಡಲಿದೆ.

ಉಚಿತ ಪಡಿತರ ಯೋಜನೆ ಇನ್ನೂ 1 ವರ್ಷ ವಿಸ್ತರಣೆ

ಏಕೀಕೃತ ಭಾರತ ಕೌಶಲ್ಯ ಡಿಜಿಟಲ್ ವೇದಿಕೆ ಬೇಡಿಕೆ ಆಧರಿಸಿ ಔಪಚಾರಿಕ ಕೌಶಲ್ಯ ಮತ್ತು ಉದ್ಯೋಗ ದಾತರೊಂದಿಗೆ ಸಂಪರ್ಕಿಸಲಿದೆ. ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಅಗತ್ಯವಾದ ಮಾನವ ಸಂಪನ್ಮೂಲ ಒದಗಿಸಲು ಕ್ರಮ ಕೈಗೊಳ್ಳಲಾಗಿದೆ. ಇದಕ್ಕಾಗಿ ಪ್ರಧಾನ ಮಂತ್ರಿ ಕೌಶಲ್ಯ ಯೋಜನಾ 4.0ಕ್ಕೆ ಚಾಲನೆ ನಿಡಲಾಗಿದ್ದು, ಮುಂದಿನ ಮೂರು ವರ್ಷಗಳಲ್ಲಿ ಲಕ್ಷಾಂತರ ಯುವಕರನ್ನು ತರಬೇತಿಗೊಳಿಸಲಾಗುವುದು.

ಭದ್ರಾ ಮೇಲ್ದಂಡೆ ಯೋಜನೆಗೆ 5300 ಕೋಟಿ ಘೋಷಣೆ : ಸಿಎಂ ಹರ್ಷ

ಶಾದ್ಯಂತ ವಿವಿಧ ರಾಜ್ಯಗಳಲ್ಲಿ 30 ಅಂತಾರಾಷ್ಟ್ರಿಯ ಕೌಶಲ್ಯ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ. ಹೊಸದಾಗಿ ರಾಷ್ಟ್ರೀಯ ಶಿಷ್ಯವೇತನ ಯೋಜನೆಯನ್ನು ಜಾರಿಗೆ ತರಲಾಗುತ್ತಿದ್ದು, ದೇಶಾದ್ಯಂತ 47ಲಕ್ಷ ಯುವಕರಿಗೆ ನೇರ ನಗದು ವರ್ಗಾವಣೆ ಮೂಲಕ ಶಿಷ್ಯವೇತನ ನೀಡಲಾಗುತ್ತದೆ ಎಂದು ತಿಳಿಸಿದರು.

Budget 2023, green growth, youth power,

Articles You Might Like

Share This Article