ಅಗತ್ಯ ವಸ್ತುಗಳ ಮೇಲೆ ಹೊಸ ತೆರಿಗೆ ವಿಧಿಸಿಲ್ಲ : ನಿರ್ಮಲಾ

Social Share

ನವದೆಹಲಿ,ಜ.16- ನಾನು ಕೂಡ ಮಧ್ಯಮ ವರ್ಗದ ಕುಟುಂಬದಿಂದ ಬಂದಳು. ಹೀಗಾಗಿ ಕಷ್ಟ ,ಒತ್ತಡದ ಬಗ್ಗೆ ನನಗೂ ಅರ್ಥವಾಗುತ್ತದೆ ಪ್ರಸ್ತುತ ಸರ್ಕಾರವು ಅಗತ್ಯವಸ್ತುಗಳ ಮೇಲೆ ಯಾವುದೇ ಹೊಸ ತೆರಿಗೆಗಳನ್ನು ವಿಧಿಸಿಲ್ಲ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಹೇಳಿದ್ದಾರೆ.

ನಿರ್ಮಲ ಸೀತಾರಾಮನ್ ಅವರು ಫೆ.1 ರಂದು 2023-24ನೇ ಸಾಲಿನ ಕೇಂದ್ರ ಬಜೆಟ್ ಮಂಡಿಸಲಿದ್ದು ಆದಾಯ ತೆರಿಗೆ ಮಿತಿಯನ್ನು ಹೆಚ್ಚಿಸುವ ಮೂಲಕ ಮಧ್ಯಮ ವರ್ಗದ ತೆರಿಗೆದಾರರಿಗೆ ಉಡುಗೊರೆ ನೀಡುವ ನಿರೀಕ್ಷೆ ನಡುವೆ ಈ ಭರವಸೆ ಕುತೂಹಲ ಮೂಡಿಸಿದೆ.

ಕಳಸ – ಬಂಡೂರಿ ತಡೆಗೆ ಸುಪ್ರೀಂ ಮೊರೆ ಹೋದ ಗೋವಾ

ಆರ್‍ಎಸ್‍ಎಸ್‍ನ ಪಾಂಚಜನ್ಯ ನಿಯತಕಾಲಿಕೆ ಆಯೋಜಿಸಿದ್ದ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಾನೂ ಮಧ್ಯಮ ವರ್ಗದವಳು. ಹಾಗಾಗಿ ಮಧ್ಯಮ ವರ್ಗದ ಒತ್ತಡವನ್ನು ಅರ್ಥಮಾಡಿಕೊಳ್ಳಬಲ್ಲೇ. ಮಧ್ಯಮ ವರ್ಗದವರೊಂದಿಗೆ ನನ್ನನ್ನು ಗುರುತಿಸಿಕೊಳ್ಳುತ್ತೇನೆ ಎಂದರು.

ಪ್ರಸ್ತುತ ನಮ್ಮ ಸರ್ಕಾರ ಮಧ್ಯಮ ವರ್ಗದ ಮೇಲೆ ಯಾವುದೇ ಹೊಸ ತೆರಿಗೆಯನ್ನು ವಿಧಿಸಿಲ್ಲ. ಅಲ್ಲದೆ, 5 ಲಕ್ಷದವರೆಗಿನ ಆದಾಯಕ್ಕೆ ತೆರಿಗೆಯಿಂದ ವಿನಾಯಿತಿ ನೀಡಲಾಗಿದೆ ಎಂದು ಅವರು ಹೇಳಿದರು.

ಭದ್ರತೆ ಲೆಕ್ಕಿಸದೆ ಮಹಿಳಾ ಕಾರ್ಯಕರ್ತರ ಕೈ ಕುಲುಕಿದ ಪ್ರಿಯಾಂಕಾ

ದೇಶದ 27 ನಗರಗಳಲ್ಲಿ ಮೆಟ್ರೋ ರೈಲು ಜಾಲವನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಜೀವನ ಸೌಕರ್ಯವನ್ನು ಉತ್ತೇಜಿಸಲು 100 ಸ್ಮಾರ್ಟ್ ಸಿಟಿಗಳನ್ನು ನಿರ್ಮಿಸುವುದು ಸೇರಿದಂತೆ ವಿವಿಧ ಅಭಿವೃದ್ಧಿ ಕ್ರಮಗಳನ್ನು ಸರ್ಕಾರ ಕೈಗೊಂಡಿದೆ ಎಂದು ತಿಳಿಸಿದರು. ರೈತರಿಗೂ ಸುಮಾರು 9000 ಕೋಟಿ ಸಾಲ ನೀಡುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.

Budget 2023, No new, taxes, Nirmala Sitharaman,

Articles You Might Like

Share This Article