ಬಜೆಟ್‍ನಲ್ಲಿ ರಕ್ಷಣಾ ಕ್ಷೇತ್ರಕ್ಕೆ ಸಿಂಹಪಾಲು

Social Share

ನವದೆಹಲಿ,ಫೆ.1- ಪ್ರಸಕ್ತ ಆರ್ಥಿಕ ವರ್ಷದಲ್ಲಿ 45 ಲಕ್ಷ ಕೋಟಿ ರೂಪಾಯಿ ವೆಚ್ಚದ 2023-24ನೇ ಸಾಲಿನ ಬಜೆಟ್ ಅನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಲೋಕಸಭೆಯಲ್ಲಿಂದು ಮಂಡಿಸಿದರು.

ಹಿಂದಿನ ವರ್ಷ 24.3 ಲಕ್ಷ ಕೋಟಿ ಒಟ್ಟು ಆದಾಯ ಮತ್ತು 20.9 ಲಕ್ಷ ಕೋಟಿ ನಿವ್ವಳ ತೆರಿಗೆ ಆದಾಯವನ್ನು ನಿರೀಕ್ಷಿಸಲಾಗಿತ್ತು. ಒಟ್ಟು ಬಜೆಟ್‍ನ ಗಾತ್ರ 41.9 ಲಕ್ಷ ಕೋಟಿ ರೂಪಾಯಿಗಳಿತ್ತು. ಅದರಲ್ಲಿ ಬಂಡವಾಳ ವೆಚ್ಚಗಳನ್ನು 7.3 ಲಕ್ಷ ರೂಪಾಯಿಗಳೆಂದು ಅಂದಾಜಿಸಲಾಗಿತ್ತು.

ಕೃಷಿ ಸಾಲಕ್ಕೆ 20 ಲಕ್ಷ ಕೋಟಿ

ವಿತ್ತಿಯ ಕೊರತೆಯನ್ನು ಜಿಡಿಪಿಯಲ್ಲಿ 6.4ಕ್ಕೆ ನಿಗದಿ ಮಾಡಲಾಗಿತ್ತು. ಪ್ರಸಕ್ತ ಸಾಲಿನಲ್ಲಿ ಸಾಲ ಹೊರತಾಗಿ 27.2 ಲಕ್ಷ ಕೋಟಿ ಆದಾಯ ಸಂಗ್ರಹ ಗುರಿ ನಿಗದಿಯಾಗಿದೆ. ಜೊತೆಗೆ ನಿವ್ವಳ ತೆರಿಗೆ ಆದಾಯವನ್ನು 23.3 ಲಕ್ಷ ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ವಿತ್ತಿಯ ಕೊರತೆಯನ್ನು ಶೇ.5.9ರಷ್ಟಾಗುವ ನಿರೀಕ್ಷೆ ಇದೆ. 2021-22ನೇ ಸಾಲಿನ ಬಜೆಟ್‍ನಲ್ಲಿ ಘೋಷಿಸಿರುವಂತೆ 2025-26ನೇ ಸಾಲಿನ ವೇಳೆಗೆ ವಿತ್ತಿಯ ಕೊರತೆಯನ್ನು ಶೇ.4.5ರ ಒಳಗೆ ಮಿತಿಗೊಳಿಸುವ ಪ್ರಯತ್ನಗಳು ಮುಂದುವರೆದಿವೆ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.

2023-24ನೇ ಸಾಲಿಗೆ ಮಾರುಕಟ್ಟೆಯಿಂದ 11.8 ಲಕ್ಷ ಕೋಟಿ ಸಾಲ ತೆಗೆಯುವ ಅಂದಾಜು ಮಾಡಲಾಗಿದೆ. ನಿವ್ವಳ ಮಾರುಕಟ್ಟೆ ಸಾಲ 15.4 ಲಕ್ಷ ಕೋಟಿಯಾಗುವ ನಿರೀಕ್ಷೆ ಇದೆ.

ಕೇಂದ್ರ ಬಜೆಟ್‍ನ ಕೆಲವು ಮುಖ್ಯ ಅಂಶಗಳು ಇಲ್ಲಿವೆ ನೋಡಿ

ಇನ್ನೂ ವೆಚ್ಚದ ಪೈಕಿ ಕಂದಾಯ ವಲಯದಲ್ಲಿ ಕಳೆದ ವರ್ಷ 34.6 ಲಕ್ಷ ಕೋಟಿ ಇದಿದ್ದು, ಈ ಬಾರಿ 35 ಲಕ್ಷ ಕೋಟಿಗೆ ಹೆಚ್ಚಾಗಿದೆ. ಪರಿಣಾಮಕಾರಿ ಬಂಡವಾಳ ವೆಚ್ಚವನ್ನು 10.5 ಲಕ್ಷ ಕೋಟಿ ಎದುರಾಗಿ 13.7 ಲಕ್ಷ ಕೋಟಿಗೆ ಏರಿಕೆ ಮಾಡಲಾಗಿದೆ. ಆದಾಯ ಸಂಗ್ರಹದಲ್ಲಿ ಕಂದಾಯ ವಲಯದಿಂದ ಕಳೆದ ವರ್ಷ 23.5 ಲಕ್ಷ ಕೋಟಿ ಗುರಿ ಇತ್ತು, ಅದನ್ನು 26.3 ಲಕ್ಷ ಕೋಟಿಗೆ ಹೆಚ್ಚಿಸಲಾಗಿದೆ. ಬಂಡವಾಳ ಮೂಲದ ಆದಾಯದಿಂದ 18.4 ಲಕ್ಷ ಕೋಟಿ ಬದಲು 18.7 ಲಕ್ಷ ಕೋಟಿ ರೂಪಾಯಿಗೆ ಏರಿಕೆಯಾಗಿದೆ.

ಇಲಾಖಾವಾರು ಹಂಚಿಕೆ:
ಇಲಾಖಾವಾರು ಅನುದಾನ ಹಂಚಿಕೆಯಲ್ಲಿ ರಕ್ಷಣಾ ಇಲಾಖೆ ಎಂದಿನಂತೆ ಮೊದಲ ಸ್ಥಾನದಲ್ಲಿದೆ. ರಕ್ಷಣೆಗೆ 5.94 ಲಕ್ಷ ಕೋಟಿ ಹಂಚಿಕೆ ಮಾಡಲಾಗಿದೆ. ರಸ್ತೆ ಸಾರಿಗೆ ಮತ್ತು ಹೆದ್ದಾರಿಗೆ 2.70 ಲಕ್ಷ ಕೋಟಿ, ರೈಲ್ವೆಗೆ 2.41 ಲಕ್ಷ ಕೋಟಿ, ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ನಾಗರೀಕ ಪೂರೈಕೆಗೆ 2.06 ಲಕ್ಷ ಕೋಟಿ, ಗೃಹ ಸಚಿವಾಲಯಕ್ಕೆ 1.96 ಲಕ್ಷ ಕೋಟಿ, ರಸಾಯನಿಕ ಮತ್ತು ರಸಗೊಬ್ಬರ ವಲಯಕ್ಕೆ 1.78 ಲಕ್ಷ ಕೋಟಿ, ಗ್ರಾಮೀಣಾಭಿವೃದ್ಧಿಗೆ 1.60 ಲಕ್ಷ ಕೋಟಿ, ಕೃಷಿ ಮತ್ತು ರೈತ ಕಲ್ಯಾಣಕ್ಕೆ 1.25 ಲಕ್ಷ ಕೋಟಿ, ಸಂಪರ್ಕ ವಲಯಕ್ಕೆ 1.23 ಲಕ್ಷ ಕೋಟಿ ಹಂಚಿಕೆ ಮಾಡಲಾಗಿದೆ.

ಔಷ ವಲಯಕ್ಕೆ ಹೆಚ್ಚಿನ ಅನುದಾನ ನೀಡಲಾಇದೆ. ಕಳೆದ ಬಜೆಟ್‍ನಲ್ಲಿ 100 ಕೋಟಿ ಒದಗಿಸಲಾಗಿತ್ತು, ಈ ಬಾರಿ 1250 ಕೋಟಿ ರೂಪಾಯಿ ನೀಡಲಾಗಿದೆ. ಮನೆ ಮನೆಗೆ ನಲ್ಲಿ ಸಂಕರ್ಪ ಕಲ್ಪಿಸುವ ಜಲಜೀವನ್ ಮೀಷನ್ ಯೋಜನೆ ಅನುದಾನವನ್ನು 60 ಸಾವಿರ ಕೋಟಿಯಿಂದ 70 ಸಾವಿರ ಕೋಟಿಗೆ ಹೆಚ್ಚಿಸಲಾಗಿದೆ. ಏಕಲವ್ಯ ಮಾದರಿ ವಸತಿ ಶಾಲೆಗಳಿಗೆ 2 ಸಾವಿರದಿಂದ 5943 ಕೋಟಿ ರೂಪಾಯಿ, ವಸತಿ ನಿರ್ಮಿಸುವ ಪ್ರಧಾನ ಮಂತ್ರಿ ಅವಾಸ್ ಯೋಜನೆಯಡಿ 48 ಸಾವಿರ ಕೋಟಿಯನ್ನು 79,590 ಕೋಟಿ ರೂಪಾಯಿಗೆ ಹೆಚ್ಚಿಸಲಾಗಿದೆ.

ಎಲೆಕ್ಟ್ರಿಕಲ್ ವಾಹನಗಳ ಉತ್ಪಾದನಾ ವಲಯಕ್ಕೆ ಕಳೆದ ವರ್ಷ ನೀಡಿರುವ 2908 ಕೋಟಿ ರೂಪಾಯಿಗಳನ್ನು ಈ ಬಾರಿ 5172 ಕೋಟಿ ರೂಪಾಯಿಗೆ ಹೆಚ್ಚಿಸಲಾಗಿದೆ. ಈಶಾನ್ಯ ವಲಯಕ್ಕೆ 1419 ಕೋಟಿಯಿಂದ 2491 ಕೋಟಿ ರೂಪಾಯಿಗೆ ಹೆಚ್ಚಿಸಲಾಗಿದೆ.

Budget 2023, Rs 5.94 lakh crore, allocated, Defence, Ministry,

Articles You Might Like

Share This Article