ನವದೆಹಲಿ,ಮಾ.13- ಕೇಂದ್ರ ಬಜೆಟ್‍ನ ಮುಂದುವರೆದ ಲೋಕಸಭೆ ಅಧಿವೇಶನದ ಎರಡನೇ ಹಂತದ ಕಲಾಪದ ಮೊದಲ ದಿನವಾದ ಇಂದು ಆರಂಭದಲ್ಲೇ ಆಡಳಿತ ಮತ್ತು ಪ್ರತಿಪಕ್ಷಗಳ ಗದ್ದಲದಿಂದ ಬೋಜನ ವಿರಾಮದವರೆಗೂ ಮುಂದೂಡಿಕೆಯಾಗಿದೆ.
ಸುಗಮ ಕಲಾಪಕ್ಕೆ ಕಳೆದ ವಾರದಿಂದಲೂ ನಡೆದ ಪ್ರಕ್ರಿಯೆಗಳು ವ್ಯರ್ಥವಾದಂತೆ ಇಂದು ಬೆಳಗ್ಗೆ ಭಾಸವಾಯಿತು. ಆಡಳಿತ ಪಕ್ಷಗಳ ಒಕ್ಕೂಟ ಎನ್‍ಡಿಎ ಸಂಸದರು ಕಾಂಗ್ರೆಸ್ ನಾಯಕ ರಾಹುಲ್‍ಗಾಂಧಿ ದೇಶದ ಪ್ರಜಾಪ್ರಭುತ್ವದ ವಿರುದ್ಧವಾಗಿ ವಿದೇಶಿ ನೆಲದಲ್ಲಿ ಮಾತನಾಡಿದ್ದಾರೆ. ಇದಕ್ಕಾಗಿ ಅವರು ಕ್ಷಮೆ ಕೇಳಬೇಕು ಎಂದು ಬಿಜೆಪಿ ನೇತೃತ್ವದಲ್ಲಿ ಗದ್ದಲ ಎಬ್ಬಿಸಿದರು. ಇದಕ್ಕೆ ಪ್ರತಿಯಾಗಿ ವಿರೋಧ ಪಕ್ಷಗಳ ನಾಯಕರು ಗದ್ದಲ ನಡೆಸಿದ್ದರಿಂದ ಲೋಕಸಭೆ ಮತ್ತು ರಾಜ್ಯಸಭೆಗಳ ಕಲಾಪ ಮುಂದೂಡಿಕೆಯಾಗಿದೆ.
BIG NEWS: ಆಸ್ಕರ್ ಗೆದ್ದ ಆರ್‌ಆರ್‌ಆರ್ ಚಿತ್ರದ ‘ನಾಟು ನಾಟು’ ಹಾಡು
ಕಳೆದ ತಿಂಗಳು ನಡೆದಿದ್ದ ಬಜೆಟ್ ಅಧಿವೇಶನದಲ್ಲಿ ಅದಾನಿ ಗುಂಪಿನ ಷೇರು ಹಗರಣ ಕುರಿತು ಚರ್ಚೆಗೆ ಪ್ರತಿಪಕ್ಷಗಳು ಗದ್ದಲ ನಡೆಸಿದ್ದರಿಂದ ಅಧಿವೇಶದ ಮೊದಲ ವಾರ ಅಸ್ತವ್ಯಸ್ಥಗೊಂಡಿತ್ತು. ಎರಡನೇ ವಾರ ಕಲಾಪ ನಡೆಯಿತಾದರೂ ಫಲಪ್ರದ ಚರ್ಚೆ ನಡೆಯಲಿಲ್ಲ.
ಈ ಬಾರಿ ಸುಗಮ ಕಲಾಪ ನಡೆಸಬೇಕು ಎಂದು ರಾಜ್ಯಸಭೆಯ ಅಧ್ಯಕ್ಷರಾದ ಜಗದೀಪ್ ಧನ್ಕರ್ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ನಿನ್ನೆ ಚರ್ಚೆ ನಡೆಸಿದ್ದರು.
ಇಂದು ಬೆಳಗ್ಗೆ ಖರ್ಗೆ ಅವರ ಮನೆಯಲ್ಲಿ 16 ವಿರೋಧ ಪಕ್ಷಗಳ ನಾಯಕರು ಸಭೆ ನಡೆಸಿ ಸಂಸತ್‍ನಲ್ಲಿ ಅನುಸರಿಸಬೇಕಾದ ತಂತ್ರಗಳ ಕುರಿತು ಚರ್ಚೆ ನಡೆಸಿದ್ದವು. ಯುಪಿಎ ಅಧ್ಯಕ್ಷೆ ಸೋನಿಯಾಗಾಂಧಿ, ಲೋಕಸಭೆಯ ವಿರೋಧ ಪಕ್ಷದ ನಾಯಕ ಅೀಧಿರ್ ರಂಜನ್‍ಚೌದರಿ ಸೇರಿದಂತೆ ಅನೇಕರು ಸಭೆಯಲ್ಲಿ ಭಾಗವಹಿಸಿದ್ದರು.
ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ನಿರುದ್ಯೋಗ, ಹಣದುಬ್ಬರದ ಪರಿಣಾಮವಾಗಿ ಸಂಕಷ್ಟ ಸೃಷ್ಟಿಸಿರುವ ಬೆಲೆ ಏರಿಕೆ ಕುರಿತು ಚರ್ಚೆಗೆ ವಿರೋಧ ಪಕ್ಷಗಳು ಆಸಕ್ತಿ ವಹಿಸಿವೆ ಎಂದಿದ್ದರು.
ಆಸ್ಕರ್ ಅಂಗಳದಲ್ಲಿ ಭಾರತೀಯ ಚಿತ್ರಗಳ ಸದ್ದು, ಇಲ್ಲಿದೆ ಪ್ರಶಸ್ತಿಗಳ ಕಂಪ್ಲೀಟ್ ಡೀಟೇಲ್ಸ್
ಇತ್ತ ಬಿಎಸ್‍ಆರ್ ಕಾಂಗ್ರೆಸ್ ಸಂಸದ ಕೆ.ಕೇಶವರಾವ್ ಸುದ್ದಿಗಾರರೊಂದಿಗೆ ಮಾತನಾಡಿ, ಕೇಂದ್ರ ಸರ್ಕಾರ ಸಿಬಿಐ, ಜಾರಿ ನಿರ್ದೇಶನಾಲಯಗಳನ್ನು ದುರ್ಬಳಕೆ ಮಾಡಿಕೊಂಡು ವಿರೋಧ ಪಕ್ಷಗಳ ವಿರುದ್ಧ ಕಾರ್ಯಚರಣೆ ನಡೆಸುತ್ತಿರುವ ಕುರಿತು ಚರ್ಚೆಗೆ ಅವಕಾಶ ನೀಡಬೇಕು. ಎಲ್ಲಾ ಕಲಾಪಗಳನ್ನು ಬದಿಗೊತ್ತಿ ಈ ವಿಷಯ ಚರ್ಚೆಯಾಗಬೇಕು ಎಂದು ಹೇಳಿದ್ದಾರೆ.
ಕಾಂಗ್ರೆಸ್ ಸಂಸದ ಮನೀಶ್ ತಿವಾರಿ, ಚೀನಾದಿಂದ ಭಾರತದ ಗಡಿ ಭಾಗದಲ್ಲಿ ಸೃಷ್ಟಿಯಾಗಿರುವ ಸಮಸ್ಯೆಗಳ ಕುರಿತು ಚರ್ಚೆಗೆ ನಿಲುವಳಿ ಸೂಚನೆ ಮಂಡಿಸಿದ್ದಾರೆ. ಅಮ್‍ಆದ್ಮಿ ಪಕ್ಷದ ರಾಜ್ಯಸಭಾ ಸದಸ್ಯ ಸಂಜಯ್ ಸಿಂಗ್, ಕೇಂದ್ರ ಸರ್ಕಾರ ಮನೀಶ್ ಸಿಸೋಡಿಯಾ ಸೇರಿದಂತೆ ವಿರೋಧ ಪಕ್ಷಗಳ ನಾಯಕ ವಿರುದ್ಧ ಕೇಂದ್ರ ತನಿಖಾ ಸಂಸ್ಥೆಗಳ ದುರ್ಬಳಕೆಯ ಚರ್ಚೆಗೆ ನೋಟಿಸ್ ನೀಡಿದ್ದಾರೆ.
Budget, Session, Parliament, Adjourned,