ಸುಟ್ಟು ಹೋದ ಟಿಸಿ 24 ಗಂಟೆಗಳಲ್ಲಿ ಬದಲಾವಣೆ

Social Share

ಬೆಂಗಳೂರು,ಮಾ.7- ಕೃಷಿ ಪಂಪ್‍ಸೆಟ್ ಗಳಿಗೆ ಅಳವಡಿಸಿರುವ ಟಿಸಿಗಳು ಸುಟ್ಟು ಹೋದಾಗ ಅದನ್ನು ಬದಲಿಸುವ ಕಾರ್ಯವನ್ನು 24 ಗಂಟೆಗಳಲ್ಲಿ ನಿರ್ವಹಿಸಲಾಗುತ್ತಿದೆ ಎಂದು ಇಂಧನ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಚಿವ ಸುನೀಲ್ ಕುಮಾರ್ ವಿಧಾನ ಪರಿಷತ್‍ನಲ್ಲಿ ತಿಳಿಸಿದರು.
ಪ್ರಶ್ನೋತ್ತರ ಅವಯಲ್ಲಿ ಸದಸ್ಯ ರವಿಕುಮಾರ್ ಅವರ ಪ್ರಶ್ನೆಗೆ ಉತ್ತಿರಿಸಿದ ಸಚಿವರು, ಹೊಸ ಟಿಸಿ ಹಾಕುವಲ್ಲಿ ಸ್ವಲ್ಪ ವಿಳಂಬ ವಾಗುತ್ತಿರ ಬಹುದು.ಆದರೆ, ನಿರಂತರವಾಗಿ ಕಾರ್ಯ ನಿರ್ವಹಿಸಲಾಗುತ್ತಿದೆ ಎಂದರು.
ಟಿಸಿ ಅಳವಡಿಸುವ ಕೆಲಸವನ್ನು ಖಾಸಾಗಿಯವರಿಗೆ ವಹಿಸಲು ಸಾಧ್ಯವಿಲ್ಲ ಎಂದ ಅವರು, ಇದನ್ನು ಕರ್ನಾಟಕ ವಿದ್ಯುತ್ ಕಾರ್ಖಾನೆ ತಯಾರಿಸುತ್ತಿದೆ. ಖಾಸಾಗಿಯವರಿಗೆ ವಹಿಸಲಾಗದು ಂದು ಸ್ವಷ್ಟ ಪಡಿಸಿದರು. ಸದಸ್ಯ ಕೋಲಾರದ ಗೋವಿಂದ ರಾಜು ಅವರು ಜಿಲ್ಲೆಯ ಒಟ್ಟು 600 ಕಲಾವಿದರಲ್ಲಿ ಕೇವಲ 419 ಮಂದಿಗೆ ಮಾತ್ರ ಮಾಸಾಶನ ನೀಡಲಾಗುತ್ತಿದೆ. ಹೆಚ್ಚಿನ ಕಲಾವಿದರಿಗೆ ಮಾಸಾಶನ ನೀಡುವಂತೆ ಹೇಳಿದರು.
ಅದಕ್ಕೆ ಉತ್ತರಿಸಿದ ಸಚಿವರು, ರಾಜ್ಯಾದÀ್ಯಂತ 11830ಮಂದಿ ಕಲಾವಿದರಿಗೆ ಮಾಸಾಶನ ನೀಡಲಾಗುತ್ತಿದೆ. ತಲಾ 2000ರೂ. ನೀಡಲಾಗುತ್ತಿದ್ದು, ಇದಕ್ಕಾಗಿ ಒಟ್ಟು 27.30ಕೋಟಿ ವ್ಯಯಿಸಲಾಗುತ್ತಿದೆ ಎಂದರು. ಕೇಂದ್ರ ಸರ್ಕಾರ ಆದಾಯ ಮಿತಿಯನ್ನು 48 ಸಾವಿರಕ್ಕೆ ನಿಗದಿ ಮಾಡಿದೆ.
60 ವರ್ಷ ವಯಸ್ಸಿನ ಮಿತಿ, ಹಾಗೂ 25ವರ್ಷ ಸೇವೆ ಸಲ್ಲಿಸಿರಬೇಕು. 5 ಸಾವಿರಕ್ಕೂ ಹೆಚ್ಚು ಮಾಸಾಶನ ಸಿಗಬಾರದು ಎಂಬ ನಿಯಮವಿದೆ. ಈಗಾಗಲೇ ರಾಜ್ಯ ಸರ್ಕಾರ 2000ರೂ. ಇದೆ. ಕೇಂಧ್ರ ಸರ್ಕಾರಕ್ಕೂ ಮಾಸಾಶನ ನಿಡಲು ಒತ್ತಾಯಿಸುತ್ತೇವೆ ಎಂದ ಅವರು, ತಮಟೆ ವಾದ್ಯಗಾರರಿಗೆ ವಯಕ್ತಿಕ ಮಾಸಾಶನವಿಲ್ಲ. ಗುಂಪು ಮಾಸಾಶನ ಣೀಡಬಹುದು ಅದಕ್ಕೆ ಅರ್ಜಿ ಪರಿಶೀಲಿಸಿ ಕ್ರಮವಹಿಸುತ್ತೇವೆ ಎಂದರು.
ರಂಗ ಮಂದಿರ ಮತ್ತು ಭವನ ನಿರ್ಮಾಣಕ್ಕೆ ನಿರ್ದಿಷ್ಟ ಮಾನದಂಡ ವಿರಲಿಲ್ಲ. ಇನ್ನು ಮುಂದೆ ಜಿಲ್ಲಾ ಭವನಕ್ಕೆ 5ಕೋಟಿ, ತಾಲೂಕು ಭವನಕ್ಕೆ 3ಕೋಟಿ ನಿಗದಿ ಮಾಡಲಾಗುತ್ತಿದ್ದು, ಬೇಕಾಬಿಟ್ಟಿ ಖರ್ಚಿಗೆ ಅವಕಾಶ ವಿಲ್ಲ ಎಂದು ತಿಳಿಸಿದರು.

Articles You Might Like

Share This Article