ಈ ರೀತಿಯ ಆಹಾರ ತಿಂದರೆ ಕ್ಯಾನ್ಸರ್ ಬರುತ್ತೆ ಹುಷಾರ್ …!

Spread the love

ಅದನ್ನು ತಿನ್ನಬೇಡ…ಕೊಳಕು ಎಂದೆಲ್ಲ ಹೇಳಿ ಮಕ್ಕಳನ್ನು ಪೋಷಕರು ಬೆಳೆಸುತ್ತಾರೆ. ಇಷ್ಟೇ ಕ್ವಾಂಟಿಟಿ, ಇಂಥದ್ದೇ ಆಹಾರ ತಿನ್ನಬೇಕೆಂದು ಮಕ್ಕಳಿಗೆ ರಿಸ್ಟ್ರಿಕ್ಟ್ ಮಾಡುವುದಂತೂ ಕಾಮನ್. ಅವಕ್ಕೆ ಬೇಕಾದ ಆಹಾರವನ್ನು, ಅವರಿಷ್ಟದಂತೆ ತಿನ್ನಲು ಪೋಷಕರು ಸ್ವಾತಂತ್ರ್ಯವೇ ನೀಡುವುದಿಲ್ಲ.  ಅಂಥದ್ದೊಂದು ಫ್ರೀಡಮ್ ಮಕ್ಕಳಿಗೆ ಅಗತ್ಯವೆನ್ನುವುದೂ ಬಹುತೇಕ ಪೋಷಕರ ಗಮನಕ್ಕೆ ಬಂದಿರುವುದಿಲ್ಲ.

ಬ್ರೆಡ್, ರೊಟ್ಟಿ…ಎಲ್ಲವನ್ನೂ ತುಸು ಹೆಚ್ಚು ಸುಟ್ಟರೂ ರುಚಿ ಕೆಡುತ್ತದೆ. ಆದರೆ, ಕೆಲವೊಮ್ಮೆ ಅನಿವಾರ್ಯವಾಗಿ ತಿಂದು ಬಿಡುತ್ತೇವೆ. ಆದರೆ, ಇಂಥ ಆಹಾರವನ್ನು ಪದೆ ಪದೇ ತಿನ್ನುವುದರಿಂದ ಕ್ಯಾನ್ಸರ್ ಬರುವ ಸಾಧ್ಯತೆ ಇರುತ್ತದೆ ಎಂದು ಸಂಶೋಧನೆಯೊಂದು ದೃಢಪಡಿಸಿದೆ.

ಆಹಾರ ಪದಾರ್ಥಗಳು ಕಪ್ಪಾಗುವಷ್ಟು ಒಲೆ ಮೇಲಿಟ್ಟಾಗ ಆಸ್ಪಾರಾಜೀನ್ ಎಂಬ ಅಂಶ ಬಿಡುಗಡೆಯಾಗುತ್ತದೆ. ಇದು ಆರೋಗ್ಯಕ್ಕೆ ಹಾನಿಕಾರಕ. ಸುಟ್ಟ ಆಹಾರ ಪದಾರ್ಥಗಳು ನರಗಳನ್ನು ಆ್ಯಕ್ಟಿವ್ ಆಗಿ ಇಡುವಲ್ಲಿ ವಿಫಲವಾಗುತ್ತದೆ. ಡಿಎನ್‌ಎಯನ್ನೇ ಹಾಳು ಮಾಡಿ, ಜೀವಕೋಶಗಳನ್ನೇ ಹಾಳು ಮಾಡುವಷ್ಟು ಈ ಅಂಶಗಳು ಹಾನಿಯನ್ನುಂಟು ಮಾಡುತ್ತದೆ.

ಆದ್ದರಿಂದ ಒಲೆ ಮೇಲಿಟ್ಟ ಆಹಾರ ಸುಡದಂತೆ ಅಥವಾ ಬುಡ ಹಿಡಿಯದಂತೆ ತಡೆಯಲು ಸಣ್ಣ ಉರಿಯಲ್ಲಿಯೇ ಅಡುಗೆ ಮಾಡುವುದನ್ನು ರೂಢಿಸಿಕೊಳ್ಳುವುದು ಒಳಿತು. ಇದರಿಂದ ಗ್ಯಾಸ್ ಉಳಿಯುವುದಲ್ಲದೇ, ಆಹಾರವೂ ಕರಕಲಾಗುವುದಿಲ್ಲ. ಇದು ಆರೋಗ್ಯವಂತ ಮನುಷ್ಯನಿಗೆ ಅಗತ್ಯವೆಂಬುವುದು Wಊಔ ನಡೆಸಿದ ಸಂಶೋಧನೆಯಿಂದ ದೃಢಪಟ್ಟಿದೆ.