ಬೆಂಗಳೂರು,ಜ.2- ಮಾಜಿ ಸಚಿವ ಅರವಿಂದ ಲಿಂಬಾವಳಿ ಸೇರಿದಂತೆ ಆರು ಮಂದಿಯ ವಿರುದ್ಧ ಡೆತ್ನೋಟ್ ಬರೆದಿಟ್ಟು ಉದ್ಯಮಿ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣದ ತನಿಖೆಯನ್ನು ಕಗ್ಗಲಿಪುರ ಠಾಣೆ ಪೊಲೀಸರು ತೀವ್ರಗೊಳಿಸಿದ್ದಾರೆ.
ಉದ್ಯಮಿ ಪ್ರದೀಪ್ ಕೊನೆಯ ಬಾರಿ ಯಾರಿಗೆ ಕರೆ ಮಾಡಿದ್ದರು, ಯಾರ್ಯಾರ ಜೊತೆ ವ್ಯವಹಾರವಿಟ್ಟು ಕೊಂಡಿದ್ದರು, ಇವರಿಗೆ ಯಾರ್ಯಾರ ಸಂಬಂಧವಿದೆ ಎಂಬಿತ್ಯಾದಿ ವಿವರಗಳನ್ನು ಪಡೆದುಕೊಳ್ಳಲು ಅವರ ಮೊಬೈಲ್ನ ಕಾಲ್ ರೆಕಾರ್ಡ್ ಹಾಗೂ ಸಿಡಿಆರ್ ಪಡೆದು ಪೊಲೀಸರು ಪರಿಶೀಲಿಸುತ್ತಿದ್ದಾರೆ.
ಪ್ರದೀಪ್ ಅವರು ಆತ್ಮಹತ್ಯೆಗೆ ಬಳಸಿರುವ ಪಿಸ್ತೂಲು ಯಾರಿಗೆ ಸೇರಿದ್ದು, ಅದಕ್ಕೆ ಲೈಸೆನ್ಸ್ ಇತ್ತೇ, ಎಂಬ ಬಗ್ಗೆಯೂ ಮಾಹಿತಿ ಕಲೆ ಹಾಕುತ್ತಿರುವ ಪೊಲೀಸರು, ಪಿಸ್ತೂಲಿನ ಮೇಲೆ ಇರುವ ಬೆರಳಚ್ಚು ಯಾರದು ಎಂಬುದೂ ಸೇರಿದಂತೆ ಹತ್ತಾರು ವಿಷಯಗಳ ಬಗ್ಗೆ ಸುದೀರ್ಘ ವಿವರಗಳನ್ನು ಪತ್ತೆಹಚ್ಚುತ್ತಿದ್ದಾರೆ.
ಲಿಂಬಾವಳಿ ವಿರುದ್ಧ ಕಾನೂನು ಪ್ರಕಾರ ತನಿಖೆ : ಸಿಎಂ ಬೊಮ್ಮಾಯಿ
ಹಸ್ತಾಂತರ:
ರಾಜರಾಜೇಶ್ವರಿ ಆಸ್ಪತ್ರೆಯಲ್ಲಿ ಇಂದು ಉದ್ಯಮಿ ಪ್ರದೀಪ್ ಅವರ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಹಸ್ತಾಂತರಿಸಲಾಯಿತು.
ಏನಿದು ಘಟನೆ: ನಗರದ ಬೆಳ್ಳಂದೂರಿನ ಅಂಬಲಿಪುರದ ನಿವಾಸಿ, ಉದ್ಯಮಿ ಪ್ರದೀಪ್(47) ದಕ್ಷಿಣ ತಾಲ್ಲೂಕು ನೆಟ್ಟಿಗೆರೆ ಗ್ರಾಮದ ಬಳಿ ನಿನ್ನೆ ಸಂಜೆ ಕಾರಿನೊಳಗೆ ಕುಳಿತುಕೊಂಡು ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಕಾರಿನಲ್ಲಿ ಸುಮಾರು 8 ಪುಟಗಳ ಡೆತ್ನೋಟ್ ಪತ್ತೆಯಾಗಿದ್ದು, ಅದರಲ್ಲಿ ನಮೂದಿಸಿರುವ ಆರು ಮಂದಿಯ ಹೆಸರುಗಳ ಪೈಕಿ ರಾಜಕಾರಣಿ ಅರವಿಂದ ಲಿಂಬಾವಳಿ ಹೆಸರು ಉಲ್ಲೇಖವಾಗಿದೆ.
ಈ ಬಗ್ಗೆ ಕಗ್ಗಲಿಪುರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಚುರುಕುಗೊಳಿಸಿದ್ದು ಆತ್ಮಹತ್ಯೆಗೆ ನಿಖರ ಕಾರಣವನ್ನು ಪತ್ತೆಹಚ್ಚುತ್ತಿದ್ದಾರೆ. ಉದ್ಯಮಿ ಪ್ರದೀಪ್ ಅವರ ಕುಟುಂಬದಲ್ಲೂ ಕೌಟುಂಬಿಕ ಕಲಹವಿದ್ದ ಬಗ್ಗೆಯೂ ಮಾಹಿತಿ ಕಲೆ ಹಾಕಿರುವ ಪೊಲೀಸರು ಪ್ರದೀಪ್ ತನ್ನ ಪತ್ನಿ ನಮೀತ ಅವರ ಜೊತೆ ಸಣ್ಣಪುಟ್ಟ ವಿಷಯಕ್ಕೂ ಜಗಳ ಮಾಡಿ ಹಲ್ಲೆ ನಡೆಸಿದ್ದ. ಈ ಬಗ್ಗೆ ನಮೀತ ಅವರು ಈ ಹಿಂದೆ ಬೆಳ್ಳಂದೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಬಳಿಕ ಪ್ರದೀಪ್ನನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿ ರಾಜೀ ಪಂಚಾಯ್ತಿ ಮಾಡಿ ಕಳುಹಿಸಿದ್ದರು. ಇದೀಗ ಇವರು ಆತ್ಮಹತ್ಯೆ ಮಾಡಿಕೊಂಡಿರುವುದು ಹಣಕಾಸಿನ ವ್ಯವಹಾರಕ್ಕೋ ಅಥವಾ ಕೌಟುಂಬಿಕ ವಿಷಯಕ್ಕೋ ಎಂಬ ಬಗ್ಗೆಯೂ ಪೊಲೀಸರು ವಿವರಗಳನ್ನು ಕಲೆ ಹಾಕುತ್ತಿದ್ದಾರೆ.
ಡೆತ್ ನೋಟ್ ವಿವರ:
ಗೋಪಿ ಮತ್ತು ಸೋಮಯ್ಯ ಕ್ಲಬ್ ತೆರೆಯುವ ವಿಚಾರವಾಗಿ ಚರ್ಚಿಸಿ ಪಾಲುದಾರನನ್ನಾಗಿ ಮಾಡಿಕೊಳ್ಳುವುದಾಗಿ ಭರವಸೆ ನೀಡಿದಲ್ಲದೆ ಪ್ರತಿ ತಿಂಗಳು 3 ಲಕ್ಷ ರೂ. ಲಾಭಾಂಶ ನೀಡುವುದಾಗಿಯೂ ಮತ್ತು ಕ್ಲಬ್ನಲ್ಲಿ ಕೆಲಸ ಮಾಡಿದರೆ 1.5 ಲಕ್ಷ ರೂ. ವೇತನ ಕೊಡುವುದಾಗಿ ನಂಬಿಸಿದ್ದರಿಂದ ನಾನು ಒಪ್ಪಿಕೊಂಡು ಮೊದಲು 1.1 ಕೋಟಿ ರೂ. ಬ್ಯಾಂಕ್ಗೆ ಜಮೆ ಮಾಡಿದ್ದಾಗಿ ಹಾಗೂ ಮೈಸೂರಿನ ಮನೆ ಮಾರಿ 40 ಲಕ್ಷ ರೂ. ನಗದಾಗಿ ಇವರಿಬ್ಬರಿಗೂ ನೀಡಿದ್ದರೂ ಇದುವರೆಗೂ ಯಾವುದೇ ಲಾಭಾಂಶ ನೀಡಲಿಲ್ಲ ಎಂದು ಪ್ರದೀಪ್ ಅಳಲು ತೋಡಿಕೊಂಡಿದ್ದಾರೆ.
ಹಣಕಾಸಿನ ವಿಚಾರವಾಗಿ ಮಾಜಿ ಸಚಿವ ಅರವಿಂದ ಲಿಂಬಾವಳಿ ಅವರ ಬಳಿ ಹೋದಾಗ ರಾಜೀಸಂಧಾನ ಮಾಡಿಸಿ 90 ಲಕ್ಷ ರೂ. ವಾಪಾಸ್ ಕೊಡುತ್ತಾರೆ ಎಂದು ಹೇಳಿ ಚೆಕ್ ಕೊಡಿಸಿ ಸಮಾಧಾನಪಡಿಸಿದ್ದರು. ಆದರೆ ಅಷ್ಟೊತ್ತಿಗಾಗಲೇ ಸಾಕಷ್ಟು ಸಾಲ ಮಾಡಿಕೊಂಡಿದ್ದರಿಂದ ರಮೇಶ್ ರೆಡ್ಡಿ ಬಳಿ 10 ಲಕ್ಷ ಸಾಲ ಪಡೆದಿದ್ದು, ಆ ಹಣ ಹಿಂದಿರುಗಿಸಲು ಕೃಷಿ ಜಮೀನು ಮಾರಿ 35 ಲಕ್ಷ ರೂ. ಪಾವತಿ ಮಾಡಿದ್ದರೂ ಮತ್ತಷ್ಟು ಹಣ ನೀಡುವಂತೆ ಬೆದರಿಕೆವೊಡ್ಡುತ್ತಿದ್ದಾರೆ.
ಕರ್ನಾಟಕದಲ್ಲಿ ಜಾರಿಯಾಗುತ್ತಾ ಏಕರೂಪ ನಾಗರಿಕ ಸಂಹಿತೆ..?
ಅಲ್ಲದೆ ನನ್ನ ಬಳಿ ರಾಘವ್ ಭಟ್ 20 ಲಕ್ಷ ಹಣ ಸಾಲವಾಗಿ ಪಡೆದಿದ್ದು, ವಾಪಸ್ ಹಿಂದಿರುಗಿಸದೆ ಮೋಸ ಮಾಡಿದ್ದಾರೆಂದು ಪ್ರದೀಪ್ ಬರೆದಿರುವ ಡೆತ್ನೋಟ್ನಲ್ಲಿ ಉಲ್ಲೇಖವಾಗಿದ್ದು, ಈ ಎಲ್ಲ ಅಂಶಗಳನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಹಲವರನ್ನು ವಿಚಾರಣೆಗೊಳಪಡಿಸುವ ಸಾಧ್ಯತೆ ಇದೆ.
ಪತ್ನಿ-ಮಗಳಿಗೆ ಹಣ ಕೊಡಿಸಿ: ಎಚ್ಎಸ್ಆರ್ ಲೇಔಟ್ ಸಮೀಪದ ಹರಳೂರಿನಲ್ಲಿ ಕ್ಲಬ್ ತೆರೆಯುವ ಉದ್ದೇಶದಿಂದ ಕೆ.ಗೋಪಿ ಮತ್ತು ಸೋಮಯ್ಯ ಎಂಬುವರಿಗೆ ಸಾಲ ಮಾಡಿ ನೀಡಲಾಗಿದ್ದ 2.2 ಕೋಟಿ ಹಣವನ್ನು ಪತ್ನಿ ಮತ್ತು ಮಗಳಿಗೆ ಕೊಡಿಸಬೇಕು ಎಂದು ಪ್ರದೀಪ ಡೆತ್ನೋಟ್ನಲ್ಲಿ ನಮೂದಿಸಿದ್ದಾರೆ.
businessman, pradeep, case, Arvind Limbavali,