ಉದ್ಯಮಿ ಅನುಮಾನಾಸ್ಪದ ಸಾವು : ಮೊಬೈಲ್ ಕರೆಗಳ ಪರಿಶೀಲನೆ

Social Share

ಬೆಂಗಳೂರು, ನ.18- ಉದ್ಯಮಿಯೊಬ್ಬರು ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪುಟ್ಟೇನಹಳ್ಳಿ ಠಾಣೆ ಪೊಲೀಸರು ವಿವಿಧ ದೃಷ್ಟಿಕೋನಗಳಲ್ಲಿ ತನಿಖೆ ನಡೆಸುತ್ತಿದ್ದು, ಮೊಬೈಲ್ ನಲ್ಲಿರುವ ಕರೆಗಳ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದಾರೆ.

ಟ್ರಾನ್ಸ್‍ಫೋರ್ಟ್ ಉದ್ಯಮಿಯಾಗಿದ್ದ ಬಾಲಸುಬ್ರಮಣಿಯನ್ ಅವರ ಮೃತದೇಹವನ್ನು ಕೆಂಪೇಗೌಡ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಹಸ್ತಾಂತರಿಸಲಾಗಿದ್ದು, ಇದರ ವರದಿ ಬಂದ ನಂತರವಷ್ಟೇ ಸಾವು ಹೇಗಾಗಿದೆ ಎಂಬುದು ಗೊತ್ತಾಗಲಿದೆ.

ಬಾಲಸುಬ್ರಮಣಿಯನ್ ಅವರ ಮೊಬೈಲ್‍ನ ಸಿಡಿಆರ್ ಪರಿಶೀಲನೆ ನಡೆಸಿರುವ ಪೊಲೀಸರಿಗೆ ಹಲವು ಮಾಹಿತಿಗಳು ಲಭ್ಯವಾಗಿವೆ. ಒಂದೇ ನಂಬರ್‍ನಿಂದ ನಿರಂತರವಾಗಿ ಬಾಲಸುಬ್ರಮಣಿಯನ್ ಅವರಿಗೆ ಕರೆಗಳು ಬಂದಿರುವುದು ಗೊತ್ತಾಗಿದ್ದು, ಈ ಕರೆಗಳು ಕನಕಪುರ ರಸ್ತೆಯ ಸಾರಕ್ಕಿ ಸಿಗ್ನಲ್ ಬಳಿಯ ಟವರ್‍ನಿಂದ ಬಂದಿರುವುದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.

ನಕಲಿ ಮತದಾರರನ್ನು ಮಾತ್ರ ಪಟ್ಟಿಯಿಂದ ಕೈಬಿಡಲಾಗಿದೆ : ಬಿಬಿಎಂಪಿ ವಿಶೇಷ ಆಯುಕ್ತ

ಉದ್ಯಮಿ ಕುಟುಂಬಸ್ಥರನ್ನು ಪೊಲೀಸರು ಸಂಪರ್ಕಿಸಿ ಮಾಹಿತಿಗಳನ್ನು ಪಡೆದುಕೊಂಡಿದ್ದು, ಟ್ರಾನ್ಸ್‍ಫೋರ್ಟ್ ಕೆಲಸಗಾರರನ್ನು ವಿಚಾರಣೆಗೊಳಪಡಿಸಿದ್ದಾರೆ.

ಬುಧವಾರ ಸಂಜೆ ಮೊಮ್ಮಗನನ್ನು ಬ್ಯಾಡ್ಮಿಂಟನ್ ತರಬೇತಿಗೆ ಕರೆದುಕೊಂಡು ಹೋಗಿದ್ದ ಇವರು ತಮ್ಮ ಸೊಸೆಗೆ ಕರೆ ಮಾಡಿ ಕೆಲಸದ ನಿಮಿತ್ತ ಹೊರಗೆ ಹೋಗಿ ಸಂಜೆ 7 ಗಂಟೆಗೆ ಬರುವುದಾಗಿ ಹೇಳಿದ್ದು, ಕೆಲ ನಿಮಿಷದ ನಂತರ ಅವರ ಮೊಬೈಲ್ ಸ್ವಿಚ್ ಆಗಿದೆ.

ಮತದಾರರ ಪಟ್ಟಿಯಿಂದ ಸಾವಿರಾರು ಮಂದಿಯ ಹೆಸರು ನಾಪತ್ತೆ : ಚಿಲುಮೆ ಕೈವಾಡ ಶಂಕೆ

ಕುಟುಂಬಸ್ಥರು ಗಾಬರಿಯಾಗಿ ಎಲ್ಲ ಕಡೆ ಹುಡುಕಾಡಿ ನಂತರ ಪುಟ್ಟೇನಹಳ್ಳಿ ಠಾಣೆಗೆ ದೂರು ನೀಡಿದ್ದರು. ಈ ನಡುವೆ ನಿನ್ನೆ ಬೆಳಗ್ಗೆ ಜೆಪಿ ನಗರದ 17ನೇ ಡಿ ಕ್ರಾಸ್ ಬಳಿ ಈ ಉದ್ಯಮಿಯ ಮೃತದೇಹ ಬೆಡ್‍ಸೀಟ್ ನಲ್ಲಿ ಸುತ್ತಿರುವ ರೀತಿ ಕಂಡು ಬಂದಿದ್ದು, ಸಾವಿನ ಬಗ್ಗೆ ಹಲವು ಅನುಮಾನಗಳು ವ್ಯಕ್ತವಾಗಿದ್ದು, ಪೊಲೀಸರು ವಿವಿಧ ಆಯಾಮಗಳಲ್ಲಿ ಮಾಹಿತಿ ಕಲೆ ಹಾಕುತ್ತಿದ್ದಾರೆ.

businessman, Suspicious, death,

Articles You Might Like

Share This Article