ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‍ಶಿಪ್‍ : ಕಪಿಲಾ-ಅರ್ಜುನ್ ಕ್ವಾಟರ್ ಫೈನಲ್‍ಗೆ

Social Share

ಟೋಕಿಯೊ, ಆ.25-ಇಲ್ಲಿ ನಡೆದ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‍ಶಿಪ್‍ನಲ್ಲಿ ಭಾರತದ ಪುರುಷರ ಡಬಲ್ಸ್ ಜೋಡಿ ಧ್ರುವ್ ಕಪಿಲಾ ಮತ್ತು ಎಂಆರ್ ಅರ್ಜುನ್ ಅವರು ಕ್ವಾಟರ್ ಫೈನಲ್ ಪ್ರವೇಶಿಸಿದ್ದಾರೆ.

ಇಂದು ನಡೆದ ರೊಮಾಂಚಕಾರಿ ಪಂದ್ಯದಲ್ಲಿ ಸಿಂಗಾಪುರದ ಟೆರಿರ್ ಹೀ ಮತ್ತು ಲೋಹ್ ಕೀನ್ ಹೀನ್ ಚೊಡಿ ವಿರುದ್ಧ ಜಯ ಸಾಧಿಸಿ ಕ್ವಾಟರ್‍ಫೈನಲ್ ತಲುಪಿದೆ. 58 ನಿಮಿಷಗಳ ಕಾಲ ಕಠಿಣ ಹೊರಾಟದಲ್ಲಿ ಭಾರತದ ಜೋಡಿಯು ಅದ್ಬುತ ಪ್ರದರ್ಶನ ಎಲ್ಲರನ್ನು ಚಕಿತಗೊಳಿಸಿ ಮೊದಲ (18-21 ,21-15 ,21-16 ) ಸೆಟ್ ಸೋತರು ಉಳಿದ ಎರಡು ಸೆಟ್ ತಮ್ಮ ವಶಕ್ಕೆ ಪಡೆದರು.

ಮುಂದೆ ಅರ್ಜುನ್ ಮತ್ತು ಕಪಿಲಾ ಅವರು ಮೂರನೇ ಶ್ರೇಯಾಂಕದ ಇಂಡೋನೇಷ್ಯಾದ ಜೋಡಿ ಮೊಹಮ್ಮದ್ ಅಹ್ಸಾನ್ ಮತ್ತು ಹೆಂಡ್ರಾ ಸೆಟಿಯಾವಾನ್ ಅವರೊಂದಿಗೆ ಸೆಣಸಲಿದ್ದಾರೆ.ಇಬ್ಬರೂ ಟೂರ್ನಿಯಲ್ಲಿ ಉತ್ತಮ ಅನುಭವ ಪಡೆದಿದ್ದರೆ ಗೆಲುವಿನ ಛಲದಲ್ಲಿದ್ದಾರೆ ಎಂದು ಕೊಚ್ ಹೇಳಿದ್ದಾರೆ.

ಮಂದಿನ ದಿನದಲ್ಲಿ ಸೈನಾ ನೆಹ್ವಾಲ್ ಮತ್ತು ಪುರುಷರ ಡಬಲ್ಸ್ ಜೋಡಿ ಸಾತ್ವಿಕ್ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಅವರ ಪ್ರಿ-ಕ್ವಾರ್ಟಫೈನಲ್‍ನಲ್ಲಿ ಆಡಲಿದ್ದರೆ, ಲಕ್ಷ್ಯ ಸೇನ್ ಮತ್ತು ಎಚ್‍ಎಸ್ ಪ್ರಣಯ್ ಅವರು ಪರಸ್ಪರ ಎದುರಿಸಲಿದ್ದಾ ರೆ ಟೂರ್ನಿ ಕುತೂಹಲ ಘಟ್ಟ ತಲುಪುತ್ತಿದೆ.

Articles You Might Like

Share This Article