ಬೆಂಗಳೂರು, ಡಿ.28- ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಲ್ಲಿ ಹೊರಗುತ್ತಿಗೆ ನೌಕರರಾಗಿ ಕೆಲಸ ಮಾಡುತ್ತ ಗ್ರಾಹಕರಿಗೆ ಹಾಗೂ ಸರ್ಕಾರಕ್ಕೆ ವಂಚಿಸುತ್ತಿದ್ದ ಜಾಲವೊಂದನ್ನು ಪತ್ತೆ ಹಚ್ಚಿರುವ ಬೊಮ್ಮನಹಳ್ಳಿ ಠಾಣೆ ಪೊಲೀಸರು 9 ಮಂದಿಯನ್ನು ಬಂಧಿಸಿದ್ದಾರೆ.
7 ಮಂದಿ ಹೊರಗುತ್ತಿಗೆ ನೌಕರರು, ಒಬ್ಬರು ಎಫ್ಡಿಸಿ ಹಾಗೂ ಮೀಟರ್ ರೀಡರ್ ಬಂತ ಆರೋಪಿಗಳು.
ಕೋಡಿಚಿಕ್ಕನಹಳ್ಳಿ ಉಪವಿಭಾಗದಲ್ಲಿ ಮೇ. ನವೋದಯ ಸರ್ವೀಸಸ್ ಏಜೆನ್ಸಿ ಮುಖಾಂತರ ಹೊರಗುತ್ತಿಗೆ ಆಧಾರದ ಮೇಲೆ ಮಂಡಳಿಯಲ್ಲಿ ಮಾಪನ ಓದುಗರಾಗಿ ಕೆಲಸ ಮಾಡುತ್ತಿದ್ದ ಇಬ್ಬರು ಸರ್ಕಾರಕ್ಕೆ ವಂಚಿಸಿ ಹಣವನ್ನು ದುರ್ಬಳಕೆ ಮಾಡಿಕೊಳ್ಳುವ ಸಮಾನ ಉದ್ದೇಶದಿಂದ ಹಲವಾರು ಗ್ರಾಹಕರಿಂದ ಲಕ್ಷಾಂತರ ಹಣ ಪಡೆದುಕೊಂಡು ವಂಚಿಸಿದ್ದಾರೆ.
ಮಂಡಳಿಯ ತಂತ್ರಾಂಶದಲ್ಲಿ ಅದೇ ಕಚೇರಿಯ ಕಂದಾಯ ವ್ಯವಸ್ಥಾಪಕರಿಂದ ಬಿಡಬ್ಲ್ಯೂಎಸ್ಎಸ್ಬಿ ಲಾಗ್ ಇನ್ ಯೂಸರ್ ಐಡಿ ಮತ್ತು ಪಾಸ್ವರ್ಡ್ನ್ನು ಪಡೆದು ಗ್ರಾಹಕರು ಹಣವನ್ನು ಪಾವತಿಸಿರುವ ರೀತಿಯಲ್ಲಿ ತಂತ್ರಾಂಶದಲ್ಲಿ ಸುಳ್ಳು ಮಾಹಿತಿಯನ್ನು ನಮೋದಿಸಿ ಮಂಡಳಿಗೆ ಕೋಟ್ಯಾಂತರ ರೂ. ಹಣ ವಂಚಿಸಿರುವುದು ಕಂಡು ಬಂದಿದೆ.
ಪ್ರಧಾನಿ ಮೋದಿ ತಾಯಿ ಹೀರಾ ಬೇನ್ ಆರೋಗ್ಯದಲ್ಲಿ ಏರುಪೇರು
ಈ ಹಿನ್ನೆಲೆಯಲ್ಲಿ ಮಂಡಳಿಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ನಾಗರಾಜ್ ಎಂಬುವರು ಈ ಬಗ್ಗೆ ಬೊಮ್ಮನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಇಬ್ಬರು ಹೊರಗುತ್ತಿಗೆ ನೌಕರರನ್ನು ಬಂಧಿಸಿದ್ದಾರೆ.
ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರು ಪಡಿಸಿ ಹೆಚ್ಚುವರಿ ತನಿಖೆಯ ಸಲುವಾಗಿ ಪೊಲೀಸ್ ಬಂಧನಕ್ಕೆ ಪಡೆದು ತನಿಖೆ ಮುಂದುವರೆಸಿದ್ದಾರೆ. ಆರೋಪಿತರು ನೀಡಿದ ಹೇಳಿಕೆಗಳ ಮೇರೆಗೆ ಇತರೆ ಏಳು ಜನ ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಶಬರಿ ಮಲೈಗೆ ಹರಿದು ಬಂದ ಭಕ್ತ ಸಾಗರ, 225 ಕೋಟಿಗೂ ಅಧಿಕ ದೇಣಿಗೆ ಸಂಗ್ರಹ
ಒಟ್ಟಾರೆ ಆರೋಪಿಗಳು ಸುಮಾರು 600 ಕ್ಕೂ ಹೆಚ್ಚು ಜನರಿಂದ ಇದೇ ರೀತಿ ಹಣವನ್ನು ಪಡೆದು ಪಾವತಿಸದೇ ಸುಮಾರು 1.86 ಕೋಟಿ ರೂ. ಹಣವನ್ನು ಸರ್ಕಾರಕ್ಕೆ ನಷ್ಟಮಾಡಿರುವುದು ತಿಳಿದು ಬಂದಿರುತ್ತದೆ. ಈ ಆರೋಪಿಗಳು ಎಷ್ಟು ಜನರಿಗೆ ಎಷ್ಟು ಹಣವನ್ನು ಮೋಸ ಮಾಡಿದ್ದಾರೆ ಎಂಬ ಸ್ಪಷ್ಟ ಮಾಹಿತಿಯು ಆಡಿಟ್ ವರದಿ ಬಂದ ನಂತರ ಗೊತ್ತಾಗಲಿದೆ. ಕೊಣನಕುಂಟೆ ಮತ್ತು ಇತರೆ ಪೊಲೀಸ್ ಠಾಣೆಗಳಲ್ಲಿ ಇದೇ ರೀತಿಯ ಪ್ರಕರಣಗಳು ದಾಖಲಾಗಿರುತ್ತವೆ.
BWSSB, Fraud, 9 employees, arrested,