ತಮ್ಮ ಕುರ್ಚಿಗೆ ಕಂಟಕವಾಗುತ್ತದೆ ಎಂದು ಸಿಎಂ ನಮ್ಮ ಪ್ರತಿಭಟನೆ ಹತ್ತಿಕ್ಕುತ್ತಿದ್ದಾರೆ : ವಿಜಯೇಂದ್ರ

ಬೆಂಗಳೂರು,ಜು.12– ಮುಡಾ ಹಗರಣ ಆಚೆ ಬಂದರೆ ತಮ್ಮ ಕುರ್ಚಿಗೆ ಕಂಟಕವಾಗುತ್ತದೆ ಎಂಬ ಏಕೈಕ ಕಾರಣಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಮ ಪ್ರತಿಭಟನೆಯನ್ನು ಪೊಲೀಸರ ಮೂಲಕ ಹತ್ತಿಕ್ಕಿದ್ದಾರೆ. ಆದರೆ ಇದನ್ನು ತಾರ್ಕಿಕ ಹಂತಕ್ಕೆ ಕೊಂಡೊಯ್ಯುವವರೆಗೂ ಬಿಡುವುದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಎಚ್ಚರಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿಭಟನೆ ನಡೆಸುವುದು ನಮ ಹಕ್ಕು. ಅದನ್ನು ಹತ್ತಿಕ್ಕಲು ಸರ್ಕಾರಕ್ಕಾಗಲೀ, ಇಲ್ಲವೇ ಪೊಲೀಸರಿಗಾಗಲೀ ಅವಕಾಶವಿಲ್ಲ. ನಾವು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿದ್ದೇವೋ? ಅಥವಾ ತುಘಲಕ್‌ ದರ್ಬಾರ್‌ ಆಡಳಿತದಲ್ಲಿದ್ದೇವೋ? ಎಂದು ಪ್ರಶ್ನಿಸಿದರು. ಮುಡಾ ಹಗರಣ ಆಚೆ ಬಂದರೆ … Continue reading ತಮ್ಮ ಕುರ್ಚಿಗೆ ಕಂಟಕವಾಗುತ್ತದೆ ಎಂದು ಸಿಎಂ ನಮ್ಮ ಪ್ರತಿಭಟನೆ ಹತ್ತಿಕ್ಕುತ್ತಿದ್ದಾರೆ : ವಿಜಯೇಂದ್ರ