ರಾಷ್ಟ್ರಪತಿ ಚುನಾವಣೆ ಬಳಿಕ ‘ಮಹಾ’ ಸಂಪುಟ ವಿಸ್ತರಣೆ

Social Share

ಮುಂಬೈ, ಜು.12 – ಬಹುನಿರೀಕ್ಷಿತ ಸಚಿವ ಸಂಪುಟದ ವಿಸ್ತರಣೆಯು ರಾಷ್ಟ್ರಪತಿ ಚುನಾವಣೆಯ ನಂತರ ನಡೆಯಲಿದೆ ಎಂದು ಸಿಎಂ ಶಿಂಧೆ ಬಳಗದಿಂದ ಕೇಳಿಬಂದಿದೆ. ಶಿಂಧೆ ಪಾಳಯ ಮತ್ತು ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನಾ ಬಣದ ನಡುವೆ ನಡೆಯುತ್ತಿರುವ ಕಾನೂನು ಹೋರಾಟದಿಂದಾಗಿ ಸಂಪುಟ ವಿಸ್ತರಣೆ ವಿಳಂಬವಾಗುತ್ತಿದೆ ಎಂಬುದು ಸರಿಯಲ್ಲ ಸದ್ಯದಲ್ಲೇ ಸಚಿವ ಸಂಪುಟ ವಿಸ್ತರಣೆಗೆ ಯಾವುದೇ ತೊಂದರೆ ಇಲ್ಲ ಎಂದು ಶಿಂಧೆ ಬಣದ ವಕ್ತಾರ ದೀಪಕ್ ಕೇಸಕರ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಮುಂದಿನ ರಾಷ್ಟ್ರಪತಿ ಆಯ್ಕೆಗೆ ಸಂಬಂಧಿಸಿದಂತೆ ಜುಲೈ 13 ರಂದು ನವದೆಹಲಿಯಲ್ಲಿ ಮಹತ್ವದ ಸಭೆ ನಡೆಯಲಿದ್ದು, ತಮ್ಮ ಗುಂಪಿನ ಪ್ರತಿನಿಧಿ ಅದರಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಕೇಸಕರ್ ಹೇಳಿದ್ದಾರೆ.

ಜುಲೈ 14 ರಂದು ಬಿಜೆಪಿ ನೇತೃತ್ವದ ಎನ್‍ಡಿಎ ಅಧ್ಯಕ್ಷೀಯ ಅಭ್ಯರ್ಥಿ ದ್ರೌಪದಿ ಮುರ್ಮು ಬೆಂಬಲ ಕೋರಲು ಮುಂಬೈಗೆ ಭೇಟಿ ನೀಡಲಿದ್ದಾರೆ. ಜುಲೈ 18 ರಂದು ಮತದಾನಕ್ಕೆ ಮುನ್ನ ಜುಲೈ 16 ಮತ್ತು 17 ರಂದು ರಾಷ್ಟ್ರಪತಿ ಚುನಾವಣೆಗೆ ಸಿದ್ಧತೆಗಳು ನಡೆಯಲಿವೆ. ಶಾಸಕರು ರಾಷ್ಟ್ರಪತಿ ಚುನಾವಣೆಯಲ್ಲಿ ನಿರತರಾಗಿರುತ್ತಾರೆ… ಹಾಗಾದರೆ ಪ್ರಮಾಣ ವಚನಕ್ಕೆ ಸಿದ್ಧರಾಗಲು ಯಾರಿಗೆ ಸಮಯವಿದೆ?ಯಾರಗೂ ಆತುರವಿಲ್ಲ, ಎಂದು ಕೇಸಕರರ್ ತಿಳಿಸಿದ್ದಾರೆ.

ಮಹಾರಾಷ್ಟ್ರದಲ್ಲಿ ಸಚಿವ ಸಂಪುಟ ವಿಸ್ತರಣೆ ಕುರಿತು ಸಿಎಂ ನವದೆಹಲಿ ಭೇಟಿ ವೇಳೆ ಬಿಜೆಪಿಯ ಪ್ರಮುಖರೊಂದಿಗೆ ಚರ್ಚೆತೀರ್ಮಾನಿಸಿದ್ದಾರೆ ಎಂದು ಹೇಳಲಾಗುತ್ತಿದೆ.ಇನ್ನೊಂದು ವಾರದಲ್ಲಿ ಸಂಪುಟದ ವಿಸ್ತರಣೆ ಸಾಧ್ಯತೆ ದಟ್ಟವಾಗಿದೆ

Articles You Might Like

Share This Article