ಸಂಪುಟ ಪುನರಚನೆ ಮಾಡಿದ ಗುಜರಾತ್‍ ಸಿಎಂ ಭೂಪೇಂದ್ರ ಪಟೇಲ್

Social Share

ಅಹಮದಾಬಾದ್, ಆ.21 -ಈ ವರ್ಷಾಂತ್ಯದಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಗೆ ಮುನ್ನ ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ತಮ್ಮ ಸಂಪುಟ ಪುನರಚನೆ ಮಾಡಿದ್ದಾರೆ. ಪ್ರಮುಖವಾಗಿ ರಾಜೇಂದ್ರ ತ್ರಿವೇದಿ ಮತ್ತು ಪೂರ್ಣೇಶ್ ಮೋದಿ ಸೇರಿಂತೆ ಹಲವರ ಖಾತೆಗಳು ಬದಲಾಗಲಿದೆ. ರ್ಆಕತೆ, ವಸತಿ ಸೇರಿದಂತೆ ಹಲವು ಖಾತೆಗಳನ್ನು ಬದಲಾಯಿಸಲಾಗಿದೆ.

ಹೈಕಮಾಂಡ್ ಸೂಚನೆ ಹಿನ್ನಲೆಯಲ್ಲಿ ಇದೀಗ ವಸತಿ, ಸಾರಿಗೆ ಎರಡೂ ಸಚಿವಾಲಯಗಳ ಹೆಚ್ಚುವರಿ ಉಸ್ತುವಾರಿಯನ್ನು ಸಿಎಂ ವಹಿಸಲಿದ್ದು, ಗೃಹ ಖಾತೆ ರಾಜ್ಯ ಸಚಿವ ಹರ್ಷ ಸಾಂಘವಿ ಅವರಿಗೆ ರ್ಆಕತೆ ಹೆಚ್ಚುವರಿ ಹೊಣೆಗಾರಿಕೆಯನ್ನು ನೀಡಲಾಗಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ಕೈಗಾರಿಕೆ ಮತ್ತು ಅರಣ್ಯ ಮತ್ತು ಪರಿಸರ ಖಾತೆ ರಾಜ್ಯ ಸಚಿವ ಜಗದೀಶ್ ಪಾಂಚಾಲ್ ಅವರು ಸಾರಿಗೆ ಮತ್ತು ವಸತಿ ಖಾತೆಯ ರಾಜ್ಯ ಸಚಿವರಾಗಲಿದ್ದಾರೆ.ತ್ರಿವೇದಿ ಅವರಿಗೆ ಈಗ ವಿಪತ್ತು ನಿರ್ವಹಣೆ, ಕಾನೂನು ಮತ್ತು ನ್ಯಾಯ, ಶಾಸಕಾಂಗ ಮತ್ತು ಸಂಸದೀಯ ವ್ಯವಹಾರಗಳ ಇಲಾಖೆಯನ್ನು ಬಿಟ್ಟರೆ, ಮೋದಿ ಅವರು ಸಾರಿಗೆ, ನಾಗರಿಕ ವಿಮಾನಯಾನ, ಪ್ರವಾಸೋದ್ಯಮ ಮತ್ತು ತೀರ್ಥಯಾತ್ರೆ ಅಭಿವೃದ್ಧಿ ಇಲಾಖೆಗಳ ಉಸ್ತುವಾರಿಯನ್ನು ಮುಂದುವರಿಸಲಿದ್ದಾರೆ.

ಕಳೆದ ಸೆಪ್ಟೆಂಬರ್‍ನಲ್ಲಿ ಇದೇ ರೀತಿ ಇಡೀ ಗುಜರಾತ್ ಸಂಪುಟ ಸಚಿವರು ರಾಜೀನಾಮೆ ನೀಡುವಂತೆ ಬಿಜೆಪಿಯ ಹೈಕಮಾಂಡ್‍ಸೂಚನೆ ನೀಡಿನಾಯಕತ್ವ ಬದಲಿಸಿತ್ತು , ಪಟೇಲ್ ವಿಜಯ್ ರೂಪಾನಿ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲಾಗಿತ್ತು.

Articles You Might Like

Share This Article