ಲಾಸ್ ಏಂಜಲೀಸ್,ಜ.29-ಅಮೆರಿಕದ ಕ್ಯಾಲಿಫೋರ್ನಿಯಾ ರಾಜ್ಯದ ಲಾಸ್ ಏಂಜಲಿಸ್ ನಗರದ ಹೊರವಲಯದಲ್ಲಿ ಕಳೆದ ತಡ ರಾತ್ರಿ ನಡೆದ ಗುಂಡಿನ ದಾಳಿಯಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಪ್ರತಿಷ್ಠಿತ ಬೆವರ್ಲಿ ಹಿಲ್ಸ್ ಪ್ರದೇಶದ ಎಬೆನೆಡಿಕ್ಟ್ ಕ್ಯಾನ್ಯೋನ್ ಕಟ್ಟಡದ ಪಾರ್ಕಿಂಗ್ ಜಾಗದಲ್ಲಿ ಈ ದುರ್ಘಟನೆ ನಡೆದಿದ್ದು ನಾಲ್ವರಿಗೆ ಗುಂಡೇಟಿನಿಂದ ಗಾಯಗೊಂಡಿದ್ದು ಅದರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪಾರ್ಕಿಂಗ್ ಸ್ಥಳದಲ್ಲಿ ಮೂವರ ಮೃತದೇಹ ಸಿಕ್ಕಿದೆ. ಆದರೆ ಗುಂಡಿನ ದಾಳಿಗೆ ಕಾರಣ ಸದ್ಯ ಲಭ್ಯವಿಲ್ಲ ತನಿಖೆ ನಡೆಯುತ್ತಿದೆ ಎಂದು ಹೇಳಿದ್ದಾರೆ ಪ್ರತ್ಯಕ್ಷದರ್ಶಿಗಳ ಮಾಹಿತಿ ಪ್ರಕಾರ ಬಹಳ ಜನರು ಇಲ್ಲಿ ಸೇರಿದ್ದರೆನ್ನಲಾಗಿದೆ. ಈ ಕಟ್ಟಡದ ಸುತ್ತಮುತ್ತಲ ಕೆಲ ಮನೆಗಳು ಅಲ್ಪಾವಗೆ ಬಾಡಿಗೆ ನೀಡಲಾಗುತ್ತಿದೆ ಇಲ್ಲಿಗೆ ಬಂದವರೇ ಈ ಕೃತ್ಯ ನಡೆಸಿರಬಹುದೆಂದು ಶಂಕಿಸಲಾಗಿದೆ.
ದೇಶದ ಜನರ ನಡುವೆ ಬಿರುಕು ಮೂಡಿಸುವ ಯತ್ನಗಳು ನಡೆಯುತ್ತಿವೆ, ಎಚ್ಚರದಿಂದಿರಿ : ಮೋದಿ
ಕ್ಯಾಲಿಫೋರ್ನಿಯಾ ರಾಜ್ಯದಲ್ಲಿ ಈ ತಿಂಗಳಲ್ಲಿ ಇದು ನಾಲ್ಕನೇ ಶೂಟೌಟ್ ಪ್ರಕರಣವಾಗಿದೆ. ಕಳೆದ ವಾರ ಇದೇ ಲಾಸ್ ಏಂಜಲಿಸ್ ನಗರದ ಡ್ಯಾನ್ಸ್ ಬಾರ್ನ್‍ಲ್ಲಿ ಗುಂಡಿನ ಕಾಳಗ ನಡೆದು 11 ಮಂದಿ ಬಲಿಯಾಗಿದ್ದರು. ಹೊಸ ವರ್ಷದ ಆಚರಣೆ ಪ್ರಯುಕ್ತ ಸಾವಿರಾರು ಮಂದಿ ಈ ಬಾಲïರೂಮ್ ಡ್ಯಾನ್ಸ್‍ಹಾಲïನಲ್ಲಿ ಸೇರಿದ್ದರು.
72 ವರ್ಷದ ಹೂ ಕಾನ್ ಟ್ರಾನ್ ಎಂಬ ವ್ಯಕ್ತಿ ತನ್ನ ಬಂದೂಕಿನಿಂದ ಗುಂಡು ಹಾರಿಸಿ ಹತ್ಯಾಕಾಂಡ ನಡೆಸಿದ್ದ. ಪೊಲೀಸರು ಸುತ್ತುವರಿಯುತ್ತಿದ್ದಂತೆಯೇ ಆತ ತಾನೇ ಗುಂಡಿಟ್ಟುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ.ಹಾಗೆಯೇ ಈ ತಿಂಗಳು ಎರಡು ಹಾಫ್ ಮೂನ್ ಬೇ ಫಾರ್ಮಗಳಲ್ಲೂ ಇದೇ ರೀತಿ ಶೂಟಿಂಗ್ ಸಂಭವಿಸಿ ಏಳು ಮಂದಿ ಸಾವನ್ನಪ್ಪಿ ಒಬ್ಬ ಗಾಯಗೊಂಡಿದ್ದು ವರದಿಯಾಗಿತ್ತು.
#CaliforniaShooting, #3dead, #4hurt, #ritzy, #LosAngeles,